ತಾಂಬಾ: ಸಿಂದಗಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಲು ನಿಮ್ಮ ಮತ ನೀಡುವ ಮೂಲಕ ನನ್ನನ್ನು ಆಯ್ಕೆ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಹಾಲುಮತ ಸಮಾಜದ ಮತದಾರರಲ್ಲಿ ಮನವಿ ಮಾಡಿದರು.
ಗ್ರಾಮದಲ್ಲಿ ಉಪಚುನಾವಣೆ ನಿಮಿತ್ತ ಹಮ್ಮಿಕೊಂಡ ಮತಯಾಚನೆ ಕಾರ್ಯಕ್ರಮದಲ್ಲಿ ಹಾಲುಮತ ಸಮಾಜದ ದೇವಸ್ಥಾನಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.
ನನ್ನಅಧಿಕಾರದ ಅವಧಿಯಲ್ಲಿ ದೊಡ್ಡ ಹಳ್ಳಕ್ಕೆ 5 ಬಾಂದಾರಗಳನ್ನು ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ನನ್ನ ಕ್ಷೇತ್ರ ಮುಂಬರುವ ದಿನಗಳಲ್ಲಿ ಸಂಪೂರ್ಣ ನೀರಾವರಿ ಮಾಡಲು ಪ್ರತಿಜ್ಞೆ ಮಾಡಿದ್ದೇನೆ. ನನ್ನ ಕ್ಷೇತ್ರದಲ್ಲಿ ಪ್ರತಿಯೊಂದು ದೇವಸ್ಥಾನಕ್ಕೆ ಅನುದಾನ ನೀಡಿರುವೆ. ನಮ್ಮ ಸಚಿವರಾದ ವಿ.ಸೋಮಣ್ಣನವರು ನಮ್ಮ ಕ್ಷೇತ್ರ ಗುಡಿಸಲೂ ಮುಕ್ತ ಕ್ಷೇತ್ರವನ್ನಾಗಿ ಮಾಡಲು ನನಗೆ ಭರವಸೆ ನೀಡಿದ್ದಾರೆ. ಸಿ.ಸಿ. ಪಾಟೀಲರು ಸಿಂದಗಿ ಕ್ಷೇತ್ರದ ಪ್ರತಿಯೊಂದು ರಸ್ತೆಗೆ ಅನುದಾನ ನೀಡಲು ಸನ್ನದ್ಧರಾಗಿದ್ದಾರೆ. ನಾನು ಮಾಡಿದ ಅಭಿವೃದ್ಧಿ ಕೆಲಸಗಳನ್ನು ನೋಡಿ ನನಗೆ ಕೂಲಿ ರೂಪದಲ್ಲಿ ಮತ ನೀಡಿರಿ ಎಂದು ವಿನಂತಿಸಿದರು. ಹಾಲುಮತ ಸಮಾಜದ ಹಿರಿಯ ಮುಖಂಡ ಅಣ್ಣಾರಾಯಗೌಡ ಪಾಟೀಲ ಮಾತನಾಡಿದರು.
ಮಲಕಪ್ಪ ಮ್ಯಾಗೇರಿ, ಸಿದ್ದಪ್ಪ ಚಟ್ಟರಕಿ, ಸುಭಾಷ್ ಪ್ಯಾಟಿ, ಜಿ.ವೈ. ಗೋರನಾಳ, ನಿಂಗಪ್ಪ ಬಂದಾಳ, ಅರ್ಜುನ ಪೂಜಾರಿ, ಬೀರಪ್ಪ ಮ್ಯಾಗೇರಿ, ಹೊನ್ನಪ್ಪ ಮ್ಯಾಗೇರಿ, ಪ್ರಕಾಶ ಮುಂಜಿ, ರಾಜು ಗಂಗನಳ್ಳಿ, ಗುರುಸಂಗಪ್ಪ ಬಾಗಲಕೋಟ, ಅರ್ಜುನ್ ಚಟ್ಟರಕಿ, ಶಿವಯೋಗೆಪ್ಪ ಸಾಲೂಟಗಿ, ಮಾನಿಂಗ ಮುತ್ತಪ್ಪಗೊಳ, ಭಾಸ್ಕರ್ ದೋಡ್ಡಮನಿ, ಪಂಡಿತ ತಗಣಿ, ಗೋಪಾಲ ಗುಣಕಿ, ಬಸವರಾಜ ಚಕಡಿ, ಕುಲಪ್ಪ ಭಜಂತ್ರಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ನಂತರ ಗ್ರಾಮದ ಚೌಡೇಶ್ವರಿ ದೇವಾಲಯ, ವಾಡೆ, ಕೆಂಗನಾಳ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು.