Advertisement
ಬೆಳಗ್ಗೆ ಶ್ರೀ ಕ್ಷೇತ್ರ ಪೆರಾರ ದೈವಸ್ಥಾನದಲ್ಲಿ ಪ್ರಾರ್ಥನೆ ಬಳಿಕ ಛತ್ರದರಸು ಚಾವಡಿ ಬಂಟಕಂಬ ರಾಜಾಂಗಣದಲ್ಲಿ ಕುಡುಪು ಶ್ರೀ ಕೃಷ್ಣರಾಜ ತಂತ್ರಿಯವರ ಪೌರೋಹಿತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಹಳೆಯ ಬಂಟಕಂಬದ ತೆರವು ಕಾರ್ಯ ನಡೆದವು. ಬಳಿಕ ನೂತನ ಬಂಟಕಂಬದ ತೈಲಾಧೀವಾಸಕ್ಕೆ ವ್ಯವಸ್ಥೆ ಮಾಡಲಾಯಿತು. ಅನಂತರ ಶುದ್ಧ ಎಳ್ಳೆಣ್ಣೆಯ ಸೇವೆಯನ್ನು ಕೈಗೊಳ್ಳಲಾಯಿತು.
ಹೆಗಲುಕೊಟ್ಟ ಶಾಸಕ ಮರದ ಕೆತ್ತನೆ ಮಾಡುವ ಸ್ಥಳದಿಂದ ತೈಲಾಧಿವಾಸಕ್ಕೆ ಬಂಟಕಂಬವನ್ನು ಹೊತ್ತು ತರಲು ಶಾಸಕ ಡಾ| ಭರತ್ ಶೆಟ್ಟಿ ಅವರು ತಾವೂ ಹೆಗಲು ನೀಡಿ, ಸಹಕರಿಸಿದರು. ಹಳೆಯ ಬೆಳ್ಳಿ ನಾಣ್ಯ ಪತ್ತೆ ಹಳೆಯ ಬಂಟಕಂಬ ತೆರವು ಸಂದರ್ಭ ಅದರ ಅಡಿಯಲ್ಲಿ ರಾಣಿ ವಿಕ್ಟೋರಿಯ ಅವರ ಮುದ್ರೆ ಇರುವ ಇಸವಿ 1897ನೇ ಇಸವಿಯ ಬೆಳ್ಳಿ ನಾಣ್ಯ ಪತ್ತೆಯಾಗಿದೆ. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಡಾ| ಭರತ್ ಶೆಟ್ಟಿ ವೈ. ಶ್ರೀ ಕ್ಷೇತ್ರದ ಪೆರ್ಗಡೆಯವರಾದ ಗಂಗಾಧರ ರೈ ಮುಂಡಬೆಟ್ಟುಗುತ್ತು, ಮಧ್ಯಸ್ಥರಾದ
ಪ್ರತಾಪ್‌ಚಂದ್ರ ಶೆಟ್ಟಿ ಬ್ರಾಣಬೆಟ್ಟು ಗುತ್ತು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಕೊಳಕೆಬೈಲು ಶಿವಾಜಿ ಶೆಟ್ಟಿ, ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಸಾಯೀಶ್ ಚೌಟ
ತಲೇಕಳ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಕೃಷ್ಣ ಅಮೀನ್, ಕಾರ್ಯದರ್ಶಿ ಸುರೇಶ್ ಅಂಚನ್, ಪಿಲಿಚಾಂಡಿ ಮುಕ್ಕಾಲ್ದಿ ಕಾಮೇಶ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಡಾ| ಮೋಹನ್ ದಾಸ್ ರೈ, ಪ್ರತೋಷ್ ಮಲ್ಲಿ, ಓಂಪ್ರಕಾಶ್ ಶೆಟ್ಟಿ, ಹರೀಶ್ ಶೆಟ್ಟಿ, ಶೇಖರ್ ಸಫಲಿಗ, ರಮೇಶ್ ಅಮೀನ್, ವಿದ್ಯಾ ಜೋಗಿ, ಮುಂಡಬೆಟ್ಟು ಗುತ್ತು,ಬ್ರಾಣಬೆಟ್ಟು ಗುತ್ತು, ತಿದ್ಯಮುಂಡಬೆಟ್ಟುಗುತ್ತು, ಪಾಲ್ದೋಡಿಗುತ್ತು, ಅಳಕೆಗುತ್ತು, ಕೊಳಕೆಬೈಲು ಗುತ್ತು, ಪರಾರಿ ಗುತ್ತು, ಗೋಳಿದಡಿಗುತ್ತು, ಮೈರೋಡಿ ಗುತ್ತು, ನಡಿಗುತ್ತು, ಬೆಟ್ಟುಗುತ್ತು, ಉಳ್ಯಗುತ್ತು, ಸಾಸ್ತಾವು ಗುತ್ತು, ಕಬೆತ್ತಿಗುತ್ತು,ತನ್ಯಗುತ್ತು, ಪೇರೂರುಗುತ್ತು, ಅರ್ಚಕರು, ವಿಲೇದಾರರು ಉಪಸ್ಥಿತರಿದ್ದರು.
Related Articles
ಹಳೆಯ ಬಂಟಕಂಬದ ಅಡಿಯಲ್ಲಿ ಪಂಚ ಲೋಹದ ನಾಲಗೆ ಪತ್ತೆಯಾಗಿದ್ದು,ಇದು ತುಳುನಾಡಿನ ಪುರಾತನ ನಾಲ್ಕು ಜಾಗೃತ ನ್ಯಾಯಪೀಠಗಳಲ್ಲಿ ಒಂದಾಗಿರುವುದಕ್ಕೆ ಹಾಗೂ ವಾಕ್ ದೋಷ ಪರಿಹಾರಕ್ಕೆ ಇದು ಸಾಕ್ಷಿಯಾಗಿದೆ ಎಂಬ ಅಭಿಪ್ರಾಯವಿದೆ.
Advertisement