Advertisement

ಉದ್ಧವ್ ರನ್ನು ಗುರಿಯಾಗಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ಭರವಸೆ: ಶಿಂಧೆ ಪರ ವಕ್ತಾರ

07:18 PM Jul 09, 2022 | Team Udayavani |

ಮುಂಬಯಿ: ಏಕನಾಥ್ ಶಿಂಧೆ ಅವರ ಬಂಡಾಯದ ಮಧ್ಯೆ, ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಅವರ ಕುಟುಂಬವನ್ನು ಗುರಿಯಾಗಿಸುವುದಿಲ್ಲ ಎಂದು ಬಿಜೆಪಿ ಭರವಸೆ ನೀಡಿದೆ ಎಂದು ಬಂಡಾಯ ಸೇನೆಯ ಬಣದ ವಕ್ತಾರರು ಶನಿವಾರ ಹೇಳಿದ್ದಾರೆ.

Advertisement

ಮಹಾರಾಷ್ಟ್ರದ ಹಿಂದಿನ ಠಾಕ್ರೆ ನೇತೃತ್ವದ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಬಗ್ಗೆ ಆಗಾಗ್ಗೆ ಆರೋಪ ಮಾಡುತ್ತಿದ್ದ ಬಿಜೆಪಿ ನಾಯಕ ಕಿರಿಟ್ ಸೋಮಯ್ಯ ಅವರಿಗೆ ಈ ವಿಚಾರದ ಬಗ್ಗೆ ತಿಳಿದಿಲ್ಲ ಎಂದು ಶಿವಸೇನೆ ಬಂಡಾಯ ಶಾಸಕ ದೀಪಕ್ ಕೇಸರ್ಕರ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕೇಸರ್ಕರ್ ಮತ್ತು ಇತರ ಕೆಲವು ಬಂಡಾಯ ಶಾಸಕರು ಈ ಹಿಂದೆ ಠಾಕ್ರೆ ವಿರುದ್ಧ ಸೋಮಯ್ಯ ಅವರ ನಿರಂತರ ಟೀಕೆಗೆ ಅಸಮ್ಮತಿ ವ್ಯಕ್ತಪಡಿಸಿದ್ದರು.

“ನಾವು (ಬಂಡಾಯ ಸೇನಾ ಶಾಸಕರು) ಗುವಾಹಟಿಯಿಂದ ಹಿಂತಿರುಗಿ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದಾಗ, ನಾವು ನಮ್ಮ ಕುಟುಂಬದ ಮುಖ್ಯಸ್ಥರನ್ನು (ಠಾಕ್ರೆ) ನೋಯಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದೇವೆ, ಆದರೆ ಅವರ ವಿರುದ್ಧ ಯಾವುದೇ ಟೀಕೆಗೆ ನಾವು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.

ಇದಕ್ಕೆ ದೇವೇಂದ್ರ ಫಡ್ನವಿಸ್ ಸಹಮತ ವ್ಯಕ್ತಪಡಿಸಿದ್ದು, ಸೋಮಯ್ಯ ಠಾಕ್ರೆ ಅವರ ಮೇಲೆ ದಾಳಿ ಮುಂದುವರಿಸಿದಾಗ ಫಡ್ನವೀಸ್ ಅವರೊಂದಿಗೆ ಮಾತಾಡಿದ್ದಾರೆ ಎಂದು ಕೇಸರ್ಕರ್ ಹೇಳಿದ್ದಾರೆ.

Advertisement

ಸೋಮಯ್ಯ ಇಂದು ನನಗೆ ಕರೆ ಮಾಡಿ, ನಮ್ಮ ಮತ್ತು ಫಡ್ನವಿಸ್ ನಡುವಿನ ತಿಳುವಳಿಕೆಯ ಬಗ್ಗೆ ಅವರಿಗೆ ತಿಳಿದಿಲ್ಲ ಎಂದು ಹೇಳಿದರು. ಕಳೆದ ಎರಡೂವರೆ ವರ್ಷಗಳಲ್ಲಿ (ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ) ಎಲ್ಲಾ ಸೇನಾ ನಾಯಕರು, ಶಾಸಕರು ಮತ್ತು ಸಾಮಾನ್ಯ ಕಾರ್ಯಕರ್ತರು ಠಾಕ್ರೆ ಕುಟುಂಬದ ವಿರುದ್ಧ ಆರೋಪಗಳನ್ನು ಮಾಡಿದವರ ವಿರುದ್ಧ ಪ್ರತಿಭಟಿಸಿದ್ದರು ಎಂದು ಕೇಸರ್ಕರ್ ಹೇಳಿದರು.

ಇದನ್ನೂ ಓದಿ : ತೀವ್ರ ಬಿಕ್ಕಟ್ಟು: ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ರಾಜೀನಾಮೆ

Advertisement

Udayavani is now on Telegram. Click here to join our channel and stay updated with the latest news.

Next