Advertisement

ಎಐಎಡಿಎಂಕೆ ಜತೆ ಬಿಜೆಪಿ ಮೈತ್ರಿ

12:30 AM Feb 20, 2019 | |

ಚೆನ್ನೈ: ಮಹಾರಾಷ್ಟ್ರದಲ್ಲಿ ಶಿವಸೇನಾ ಜತೆ ಚುನಾವಣಾ ಮೈತ್ರಿ ಮಾಡಿಕೊಂಡ ಬಳಿಕ ಬಿಜೆಪಿ ತಮಿಳುನಾಡಿನಲ್ಲಿ ಎಐಎಡಿಎಂಕೆ ಜತೆಗೆ ಸ್ಥಾನ ಹೊಂದಾಣಿಕೆ ಅಂತಿಮಗೊಳಿಸಿದೆ. ಒಟ್ಟು 39 ಸ್ಥಾನಗಳ ಪೈಕಿ ಬಿಜೆಪಿಗೆ 5, ಮಾಜಿ ಸಚಿವ ಅನುಮಣಿ ರಾಮದಾಸ್‌ ನೇತೃತ್ವದ ಪಟ್ಟಾಳಿ ಮಕ್ಕಳ್‌ ಕಚ್ಚಿ ಪಕ್ಷಕ್ಕೆ 7 ಸ್ಥಾನ ಮತ್ತು 1 ರಾಜ್ಯಸಭಾ ಸ್ಥಾನ ನೀಡುವ ಬಗ್ಗೆ ಮಾತುಕತೆ ಪೂರ್ತಿಯಾಗಿದೆ. ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌, ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿ ಸ್ವಾಮಿ, ಡಿಸಿಎಂ ಓ.ಪನ್ನೀರ್‌ಸೆಲ್ವಂ ಮೈತ್ರಿಯ ಬಗ್ಗೆ ಮಂಗಳವಾರ ಪ್ರಕಟಿಸಿದ್ದಾರೆ. ತಮಿಳುನಾಡಿನಲ್ಲಿ ಇದೊಂದು ದೊಡ್ಡ ಮೈತ್ರಿಕೂಟ ವಾಗಲಿದೆ ಮತ್ತು ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಲಿದೆ ಎಂಬ ವಿಶ್ವಾಸವನ್ನೂ ಮುಖಂಡರು ವ್ಯಕ್ತಪಡಿಸಿದ್ದಾರೆ. 

Advertisement

ತಮಿಳುನಾಡಿನ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ವಣ್ಣಿಯಾರ್‌ ಸಮು ದಾಯದವರ ಮತಗಳನ್ನು ಗುರಿಯಾಗಿರಿಸಿಕೊಂಡು ಪಿಎಂಕೆಯನ್ನು ಎಐಎಡಿಎಂಕೆ-ಬಿಜೆಪಿ ಮೈತ್ರಿ ಕೂಟಕ್ಕೆ ಸೇರಿಸಿಕೊಳ್ಳಲಾಗಿದೆ. 2016ರಲ್ಲಿ ಎಐಎಡಿಎಂಕೆ ನಾಯಕಿ ಜಯಲಲಿತಾ ನಿಧನರಾದ ಬಳಿಕ ತಮಿಳುನಾಡಿನ ಆಡಳಿತ ಪಕ್ಷಕ್ಕೆ ಮೊದಲ ಚುನಾವಣಾ ಅಗ್ನಿ ಪರೀಕ್ಷೆ ಯಾಗಲಿದೆ. 2014ರಲ್ಲಿ ಜಯ ಲಲಿತಾ ನೇತೃತ್ವದಲ್ಲಿ ಎಐಎಡಿಎಂಕೆ 39 ಸ್ಥಾನಗಳ ಪೈಕಿ 37ರಲ್ಲಿ ಜಯಗಳಿಸಿತ್ತು. ಅದರಲ್ಲಿ ಪಿಎಂಕೆ, ಬಿಜೆಪಿ ತಲಾ 7 ಸ್ಥಾನಗಳಲ್ಲಿ ಸ್ಪರ್ಧಿಸಿ ಒಂದೊಂದರಲ್ಲಿ ಜಯ ಸಾಧಿಸಿದ್ದವು. 
 

Advertisement

Udayavani is now on Telegram. Click here to join our channel and stay updated with the latest news.

Next