Advertisement
ನಗರದ ಅಗ್ರಹಾರದ 101 ಗಣಪತಿ ದೇವಸ್ಥಾನದ ಎದುರು ಜಮಾಯಿಸಿದ ಯುವಭಾರತ್ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಮೋದಿ ಅವರ ಭಾವಚಿತ್ರಕ್ಕೆ ದೃಷ್ಟಿ ತೆಗೆದು, ಬೂದು ಕುಂಬಳಕಾಯಿ ಒಡೆದರು. ಕಾಂಗ್ರೆಸ್ ಹಾಗೂವಾಟಾಳ್ ನಾಗರಾಜ್ ಹೆಸರಿನಲ್ಲಿ ಕುಂಬಳಕಾಯಿ ಒಡೆದ ಕಾರ್ಯಕರ್ತರು, ಮೋದಿ ಅವರ ಆಗಮನಕ್ಕೆ ಬಂದ್ ನೆಪದಲ್ಲಿ ಆಗುತ್ತಿದ್ದ ಷಡ್ಯಂತ್ರ, ಕೆಟ್ಟ ದೃಷ್ಟಿ, ತೊಂದರೆ ನ್ಯಾಯಾಲಯದ ತೀರ್ಪಿನಿಂದ ನಿವಾರಣೆಯಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.