Advertisement
ಶನಿವಾರ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಯೋಗಿಸಿದ್ದ 70 ಹಗರಣಗಳ ಕಿರು ಪುಸ್ತಕವನ್ನು ಪತ್ರಿಕಾ ಗೋಷ್ಠಿಯಲ್ಲಿ ಪ್ರದರ್ಶಿಸಿದರು.
ಅಧಿಕಾರ ನೀಡಿ, ಸಿಎಂ ಸಿದ್ದರಾಮಯ್ಯ ಮಾಡಿರುವ ಆರೋಪದ 21 ಹಗರಣಗಳನ್ನು ನಾವೇ ತನಿಖೆ ಮಾಡುತ್ತೇವೆ
ಎಂದು ಸವಾಲು ಹಾಕಿದರು.
Related Articles
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಮಾಜಿ ಸಚಿವ ನಾಗೇಂದ್ರ, ಬಸವನಗೌಡ ದದ್ದಲ್ ಏನೂ ಮಾಡಿಲ್ಲ, ಎಲ್ಲವೂ ಅಧಿಕಾರಿಗಳ ತಪ್ಪು ಎನ್ನುವ ಸಿಎಂ ಸಿದ್ದರಾಮಯ್ಯನವರು ಆಡಳಿತ ನಡೆಸದೇ ಕತ್ತೆ ಕಾಯುತ್ತಿದ್ದರಾ? ಬೆದರಿಕೆ ತಂತ್ರಗಳನ್ನೆಲ್ಲ ಬಿಟ್ಟುಬಿಡಿ ಎಂದು ಅಶೋಕ್ ಎಚ್ಚರಿಕೆ ನೀಡಿದರು.
Advertisement
ಎಸ್‌ಸಿ, ಎಸ್‌ಟಿ ಹಣ ಮುಟ್ಟಿದರೆ ಸರ್ವನಾಶ ಆಗುತ್ತಾರೆಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆಲ್ಲ ಸಿದ್ದರಾಮಯ್ಯ ಕ್ಲೀನ್ ಚಿಟ್ ಕೊಟ್ಟರು. ನಿಗಮದ ಅಧ್ಯಕ್ಷರು, ಸಚಿವರು ಏನೂ ಮಾಡಿಲ್ಲ, ಅಧಿಕಾರಿಗಳು ಮಾಡಿದ್ದು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಬ್ಬರು ಜೈಲಿನಲ್ಲಿದ್ದು, ಇನ್ನೊಬ್ಬರು ಜೈಲಿಗೆ ಹೋಗುವ ಹಂತದಲ್ಲಿ ಇದ್ದಾರೆ. ಆದರೂ ಸರಕಾರ ಈ ಹಗರಣವನ್ನು ಮುಚ್ಚಿಹಾಕಲು ಹೊರಟಿದೆ ಎಂದು ಟೀಕಿಸಿದರು.
ತ್ರಿಬಲ್ ಎಸ್ಐಟಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖವಾಡ ಕಳಚಿ ಬಿದ್ದಿದ್ದು, ಅವರೆಷ್ಟು ಶುದ್ಧ ಹಸ್ತರು ಎಂದು ಬಯಲಾಗಿದೆ. ರಾಜ್ಯದ ಜನರ ಹಣವನ್ನು ಕಳ್ಳ ಖಾತೆಯಲ್ಲಿ ಇಟ್ಟಿದ್ದು ರಾಜ್ಯ ಸರಕಾರ. ಇದರಲ್ಲಿ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಾತ್ರವೇ ಇಲ್ಲ. ಬ್ಯಾಂಕ್ ಅಧಿಕಾರಿಗಳು ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿದರು. ಆದರೆ ರಾಜ್ಯ ಸರಕಾರ ತ್ರಿಬಲ್ ಎಸ್‌ಐಟಿಗೆ ಪ್ರಕರಣ ಕೊಟ್ಟು ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದೆ. ತ್ರಿಬಲ್ ಎಸ್‌ಐಟಿ ಎಂದರೆ “ಸಿದ್ದರಾಮಯ್ಯ, ಶಿವಕುಮಾರ್, ಸುಜೇìವಾಲಾ’ ಎಂದು ಅಶೋಕ್ ವ್ಯಂಗ್ಯವಾಡಿದರು. ವಾಲ್ಮೀಕಿ ಹಗರಣದಲ್ಲಿ ಸಚಿವರು ಭಾಗಿಯಾಗಿಲ್ಲ ಅಂದರೆ ನಾಗೇಂದ್ರ ಸಚಿವ ಸ್ಥಾನಕ್ಕೆ ಏಕೆ ರಾಜೀನಾಮೆ ಕೊಟ್ಟರು? ಲೋಕಸಭಾ ಚುನಾವಣೆಗೆ ಹಣ ಸಂಗ್ರಹಿಸಲು ನಾಗೇಂದ್ರ ಕೆಲಸ ಮಾಡಿ¨ªಾರೆ. ಬ್ಯಾಂಕ್ ಬದಲಿಸಿ, ಶಾಂಗ್ರಿಲಾದಲ್ಲಿ ಡೀಲ್ ಮಾಡಿದ್ದಾರೆ. ನಿಮಗಾಗಿ ಕಷ್ಟಪಟ್ಟ ನಾಗೇಂದ್ರನಿಗೆ ನೀವು ಮಾಡಿದ್ದು ದ್ರೋಹ ಅಲ್ಲವೇ ಎಂದೂ ಅಶೋಕ್ ವ್ಯಂಗ್ಯವಾಡಿದರು. ಭೋವಿ ನಿಗಮದಲ್ಲೂ 60 ಕೋಟಿ ರೂ. ಅಕ್ರಮ : ಬಿಜೆಪಿಯ ಮತ್ತಷ್ಟು ಹಗರಣ ತೆರೆದಿಟ್ಟ ಸಿಎಂ ಸಿದ್ದರಾಮಯ್ಯ ಚಿತ್ರದುರ್ಗ: ಬಿಜೆಪಿ ಆಡಳಿತವಿದ್ದಾಗ ಭೋವಿ ಅಭಿವೃದ್ಧಿ ನಿಗಮದಲ್ಲಿ 60 ಕೋಟಿ ರೂಪಾಯಿ ಅಕ್ರಮ ನಡೆದಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅತ್ತ ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಹಗರಣಗಳ ಕಿರುಪುಸ್ತಕ ಬಿಡುಗಡೆ ಮಾಡಿರುವಂತೆಯೇ ಇತ್ತ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬಿಜೆಪಿ ವಿರುದ್ಧ ಟೀಕಾ
ಪ್ರಹಾರ ಮುಂದುವರಿಸಿ ಮತ್ತಷ್ಟು ಆರೋಪ ಗಳನ್ನು ಮಾಡಿದರು. ಭೋವಿ ಅಭಿವೃದ್ಧಿ ನಿಗಮದಲ್ಲಿ ಮಾತ್ರವಲ್ಲ, ಟ್ರಕ್ ಟರ್ಮಿನಲ್‌ನಲ್ಲೂ 47 ಕೋಟಿ ರೂ. ಅಕ್ರಮ ನಡೆದಿತ್ತು. ಈ ಅಕ್ರಮ ಮಾಡಿ ದವರು ಯಾರು, ಜೈಲಿಗೆ ಹೋದವರು ಯಾರು ಎಂದು ಪ್ರಶ್ನಿಸಿದರು. ಬಿಜೆಪಿಯವರು ಹಗರಣ ಮಾಡಿದಾಗ ಇ.ಡಿ. ಬರಲಿಲ್ಲ. ಈಗ ನಾವು ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುತ್ತಿದ್ದೇವೆ. ಆದರೂ ಇ.ಡಿ. ಯಾಕೆ ಬಂದಿದೆ ಎಂದು ಕಿಡಿಕಾರಿದರು. ನಾವು ಯಾರನ್ನೂ ಬೆದರಿಸುವ ಕೆಲಸ ಮಾಡುತ್ತಿಲ್ಲ. ವಸ್ತು ಸ್ಥಿತಿಯನ್ನು ಸದನದಲ್ಲಿ ಇಟ್ಟಿದ್ದೇವೆ ಅಷ್ಟೇ ಎಂದರು. ”ವಾಲ್ಮೀಕಿ ನಿಗಮದ ಹಗರಣ ವಿರೋಧಿಸಿ ಹೋರಾಟ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗಾಬರಿಯಾಗಿ ದ್ದಾರೆ. ಬಿಜೆಪಿ ಆಡಳಿತಾವ ಧಿಯ ಭ್ರಷ್ಟಾಚಾರ ತನಿಖೆ ಮಾಡಿಸುವುದಾಗಿ ಧಮ್ಕಿ ಹಾಕಿದ್ದಾರೆ. ಅವರ ಗೊಡ್ಡು ಬೆದರಿಕೆಗೆಲ್ಲ ನಾವು ಹೆದರುವುದಿಲ್ಲ.”
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ