Advertisement

ಸಾಕ್ಷ್ಯದ ಬ್ಯಾಗ್‌ ಹೊತ್ತೂಯ್ದ ಕೋತಿ!

09:32 AM May 06, 2022 | Team Udayavani |

ಜೈಪುರ: “ನಾವು ಆರೋಪಿಯನ್ನು ಬಂಧಿಸಿದ್ದೇವೆ. ಆದರೆ ಗೌರವಾನ್ವಿತ ನ್ಯಾಯಾಧೀಶರೇ, ಆತನ ವಿರುದ್ಧ ಇರುವ ಸಾಕ್ಷ್ಯಗಳಿರುವ ಬ್ಯಾಗ್‌ ಅನ್ನು  ಕೋತಿ ಸೆಳೆದುಕೊಂಡು ಓಡಿದೆ’ ಹೀಗೆಂದು ರಾಜಸ್ಥಾನ ರಾಜಧಾನಿ ಜೈಪುರದ ಚಂದ್ವಾಜಿ ಠಾಣೆ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಅರಿಕೆ ಮಾಡಿ ಕೊಂಡಿದ್ದಾರೆ.

Advertisement

2016ರಲ್ಲಿ ನಡೆದಿದ್ದ ಹತ್ಯೆ ಪ್ರಕ ರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾಹುಲ್‌ ಕಂಡೇರಾ ಮತ್ತು ಮೋಹನ್‌ಲಾಲ್‌ ಕಂಡೇರಾ ಎಂಬುವರನ್ನು ಬಂಧಿಸಿದ್ದರು. ಅವರನ್ನು ಬಂಧಿಸಿ ಜೈಪುರದ ಕೋರ್ಟ್‌ಗೆ ತರುತ್ತಿದ್ದರು. ಜತೆಗೆ ಕೊಲೆ ಮಾಡಲು ಬಳಸಿದ್ದ ಚೂರಿ ಸೇರಿದಂತೆ 15 ವಸ್ತುಗಳನ್ನು ಸಾಕ್ಷ್ಯ ಗಳೆಂದು ಪರಿಗಣಿಸಿ ಬ್ಯಾಗೊಂದರಲ್ಲಿ ಇರಿಸಿ ತರಲಾಗುತ್ತಿತ್ತು. ಆದರೆ ಅದನ್ನು ಕೋರ್ಟ್‌ ಆವರಣದಲ್ಲಿದ್ದ ಮರದ ಕೆಳಗೆ ಇರಿಸಲಾಗಿತ್ತು. ಬಂಧಿತರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿದ ಸಂದರ್ಭದಲ್ಲಿ  ಸಾಕ್ಷ್ಯಗಳನ್ನು ಹಾಜರುಪಡಿಸಲು ಪೊಲೀಸರಿಗೆ ಸೂಚಿಸಿದರು.

ಪೊಲೀಸರು ಮರಳಿ ಬಂದು ನೋಡುವಷ್ಟರಲ್ಲಿ ಬ್ಯಾಗನ್ನು ಮಂಗ ಹೊತ್ತುಕೊಂಡು ಹೋಗಿತ್ತು. ಅದನ್ನೇ ನ್ಯಾಯಾಧೀಶರಿಗೆ ಅರಿಕೆ ಮಾಡಿದರು. ಇದೀಗ ಸಾಕ್ಷ್ಯನಾಶ ಆರೋಪ ಯಾರ ಮೇಲೆ ಬರಲಿದೆ ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next