Advertisement

ಪಂದ್ಯ ಗೆಲ್ಲಲು ವಿಚಿತ್ರ ನಿರ್ಧಾರ ಕೈಗೊಂಡ ಕೋಚ್: ಇದು ತಪ್ಪು ಎಂದ ನೆಟ್ಟಿಗರು! ವಿಡಿಯೋ ನೋಡಿ

12:04 PM Jan 27, 2022 | Team Udayavani |

ಸಿಡ್ನಿ: ಇಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ ನ ಪಂದ್ಯ ಅಚ್ಚರಿಯ ಘಟನೆಗೆ ಸಾಕ್ಷಿಯಾಯಿತು. ಪಂದ್ಯ ಗೆಲ್ಲುವ ಸಲುವಾಗಿ ಕೊನೆಯ ಎಸೆತದಲ್ಲಿ ಕೋಚ್ ತೆಗೆದುಕೊಂಡ ನಿರ್ಧಾರಕ್ಕೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Advertisement

ಸಿಡ್ನಿ ಸಿಕ್ಸರ್ ಮತ್ತು ಅಡಿಲೇಡ್ ಸ್ಟ್ರೈಕರ್ಸ್ ನಡುವಿನ ಪಂದ್ಯ ಹಲವು ತಿರುವುಗಳಿಗೆ ಕಾರಣವಾಯಿತು. ಪ್ಲೇ ಆಫ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಅಡಿಲೇಡ್ 4 ವಿಕೆಟ್ ಗೆ 167 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಸಿಡ್ನಿ ತಂಡಕ್ಕೆ ಕೊನೆಯ ಎಸೆತದಲ್ಲಿ ಎರಡು ರನ್ ಅಗತ್ಯವಿತ್ತು. ನಾನ್ ಸ್ಟ್ರೇಕ್ ನಲ್ಲಿದ್ದ ಜೋರ್ಡಾನ್ ಸಿಲ್ಕ್ ಗಾಯಗೊಂಡ ಕಾರಣ ಅವರಿಗೆ ಓಡಲು ಕಷ್ಟವಾಗುತ್ತದೆ ಎಂದು ಕೋಚ್ ಕೂಡಲೇ ಅವರನ್ನು ಮೈದಾನದಿಂದ ಹೊರಬರಲು ಸೂಚಿಸಿದರು.

ಸಿಲ್ಕ್ ರಿಟೈಡ್ ಔಟ್ ಎಂದು ಘೋಷಿಸಿದ ಕೋಚ್ ಕೊನೆಯ ಎಸೆತಕ್ಕೆ ನಾನ್ ಸ್ಟ್ರೇಕ್ ನಲ್ಲಿ ಗೆ ಜೇ ಲೆಂಟನ್ ಅವರನ್ನು ಕಳುಹಿಸಿದರು. ಕೊನೆಯ ಎಸೆತ ಎದುರಿಸಿದ ಹೇಡನ್ ಕೆರ್ ಬೌಂಡರಿ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಈ ಮೂಲಕ ಸಿಡ್ನಿ ಸಿಕ್ಸರ್ ಫೈನಲ್ ತಲುಪಿತು.

ಇದನ್ನೂ ಓದಿ:ಬೀಚ್‌ನಲ್ಲಿ ಸ್ಟ್ರೀಟ್ ಫುಡ್ ಅಂಗಡಿಗೆ ನುಗ್ಗಿದ ಕಾರು: ಮಹಿಳೆ ಸಾವು, ಐವರು ಗಂಭೀರ

ಸಿಡ್ನಿ ಸಿಕ್ಸರ್ಸ್ ತಂಡದ ಈ ನಡೆಗೆ ಹಲವರಿಂದ ವಿರೋಧ ವ್ಯಕ್ತವಾಗಿದೆ. ಸಿಕ್ಸರ್‌ ತಂಡದ ನಿರ್ಧಾರವು ಕ್ರೀಡೆಯ ನಿಯಮಗಳಿಗೆ ಒಳಪಟ್ಟಿರಬಹುದು ಆದರೆ ಆಟದ ಸ್ಪೂರ್ತಿಗೆ ವಿರುದ್ಧವಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. “ಇದು ನಿಯಮಗಳಲ್ಲಿದೆ ಆದರೆ ಇದು ಬಹುಶಃ ಆಟದ ಸ್ಪೂರ್ತಿಯಲ್ಲಿಲ್ಲ” ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಹೇಳಿದ್ದಾರೆ.

Advertisement

ಶುಕ್ರವಾರ ನಡೆಯಲಿರುವ ಬಿಬಿಎಲ್ ಫೈನಲ್‌ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವು ಪರ್ತ್ ಸ್ಕಾರ್ಚರ್ಸ್ ತಂಡವನ್ನು ಎದುರಿಸಲಿದೆ.

ಕಣಕ್ಕಿಳಿದ ಕೋಚ್: ಅಡಿಲೇಡ್‌ ಸ್ಟ್ರೈಕರ್ ವಿರುದ್ಧದ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ ಪರ ಸಹಾಯಕ ಕೋಚ್‌ ಕೂಡ ಕಣಕ್ಕಿಳಿಯುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು! ಪಂದ್ಯದ ಆರಂಭಕ್ಕೂ ಮುನ್ನ ಸಿಡ್ನಿ ತಂಡದ ಆರಂಭಿಕ ಮತ್ತು ಕೀಪರ್‌ ಜೋಶ್‌ ಫಿಲಿಪ್‌ಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರು ಹೊರಗುಳಿದರು. ಆದರೆ ಬದಲಿ ವಿಕೆಟ್‌ ಕೀಪರ್‌ ಯಾರೂ ಇರಲಿಲ್ಲ. ಹೀಗಾಗಿ ತಂಡದ ಸಹಾಯಕ ಕೋಚ್‌ ಜೇ ಲೆಂಟನ್‌ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡಲಾಯಿತು! ಕೊನೆಯ ಎಸೆತದಲ್ಲಿ ನಾನ್ ಸ್ಟ್ರೇಕ್ ಗೆ ಬಂದಿದ್ದು ಇದೇ ಜೇ ಲೆಂಟನ್!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next