Advertisement
ಗ್ರಾಮದ ಅಂಗಡಿ, ಹೋಟೆಲ್‌ಗಳು, ಶಾಲಾ, ಕಾಲೇಜುಗಳು ಸೇರಿದಂತೆ ಸರ್ಕಾರಿ ಕಚೇರಿಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವ ಮೂಲಕಸಾರ್ವಜನಿಕರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಜನಪ್ರತಿನಿಧಿಧಿಗಳು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ನೇತೃತ್ವ ವಹಿಸಿದ್ದ ಪ್ರದೇಶ ರೈತ ಸಂಘದ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ ಮಾತನಾಡಿ, ಮಾಯಕೊಂಡ ವಿಧಾನಸಭಾ ಕ್ಷೇತ್ರವಾಗಿದೆ.
Related Articles
Advertisement
ಇನ್ನೆರಡು ದಿನಗಳಲ್ಲಿ ಜಿಲ್ಲಾ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್, ಕ್ಷೇತ್ರದ ಶಾಸಕರಾದ ಕೆ. ಶಿವಮೂರ್ತಿ ಹಾಗೂ ಮಾಜಿ ಸಚಿವರು, ಶಾಸಕರುಗಳನ್ನು ಒಳಗೊಂಡ ನಿಯೋಗದೊಂದಿಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈಗಿನ ಬಜೆಟ್‌ನಲ್ಲಿಯೇ ಮಾಯಕೊಂಡ ತಾಲೂಕು ಕೇಂದ್ರವಾಗಿಸಬೇಕೆಂಬ ಮನವಿ ಮಾಡಿಕೊಳ್ಳುತ್ತೇವೆ.
ಮಾಯಕೊಂಡ ತಾಲೂಕು ಎಂದು ಘೋಷಣೆ ಮಾಡದೇ ಹೋದಲ್ಲಿ ಮುಂದಿನ ಚುನಾವಣೆ ಬಹಿಷ್ಕರಿಸುವ ಜತೆಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಿಜೆಪಿ ಮುಖಂಡ ಆನಂದಪ್ಪ ಮಾತನಾಡಿ, ಮಾಯಕೊಂಡ ಗ್ರಾಮವು ತಾಲೂಕಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೂ ಸಹ ಇಚ್ಛಾಶಕ್ತಿಯ ಕೊರತೆಯಿಂದ ಕಡೆಗಣಿಸಲಾಗಿದೆ.
ನಾಡ ಕಚೇರಿ, ರೈಲ್ವೆ ನಿಲ್ದಾಣ, ಕೃಷಿ ಇಲಾಖೆ, ಪೊಲೀಸ್ ಠಾಣೆ, ಉಪ ಖಜಾನೆ, ಕೆನರಾ ಬ್ಯಾಂಕ್, ಪಪೂ, ಪ್ರಥಮ ದರ್ಜೆ ಕಾಲೇಜುಗಳಿವೆ. ಹೀಗಾಗಿ ಮಾಯಕೊಂಡವನ್ನು ತಾಲೂಕು ಮಾಡಬೇಕು ಎಂದು ಒತ್ತಾಯಿಸಿದರು. ಜಿಪಂ ಮಾಜಿ ಸದಸ್ಯ ವೆಂಕಟೇಶ್, ಗ್ರಾಪಂ ಅಧ್ಯಕ್ಷ ಲಕ್ಷಣ, ಸದಸ್ಯ ರುದ್ರೇಶ್, ಸಂಡೂರ್ ರಾಜಶೇಖರ್, ಮುಖಂಡ ನೀಲಪ್ಪ ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷೆ ಗಿರಿಜಾ ರಮೇಶ್, ಸದಸ್ಯರಾದ ಮಲ್ಲಿಕಾರ್ಜುನ, ಗಂಗಾಧರಪ್ಪ, ಪರುಶುರಾಮ ಜಯ್ಯಪ್ಪ, ಸುಲೋಚನಮ್ಮ, ದಾಕ್ಷಾಯಣಮ್ಮ, ರೂಪಾ, ಕನ್ನಡ ಯುವಶಕ್ತಿ ಕೇಂದ್ರದ ಅಧ್ಯಕ್ಷ ಗಾಳೆರ ಶ್ರೀನಿವಾಸ, ಗುರುನಾಥ ರವಿಕುಮಾರ್, ರಾಘವೇಂದ್ರ, ಮುಖಂಡರಾದ, ಬಿ.ಟಿ. ಹನುಮಂತಪ್ಪ, ಮುಪ್ಪಣ್ಣ, ಪ್ರೊ| ಲಿಂಗಣ್ಣ, ಎಂಜಿ ಗೋಪಾಲ್, ಬೀರಪ್ಪ, ಗೌಡ್ರ ಅಶೋಕ, ಶ್ರೀರಾಮ್ ಬಾಲರಾಜ,
ಗುಡ್ಲಿ ಕುಬಣ್ಣ, ತಿಪ್ಪೇಶ್, ಉಮ್ಮಾರ್‌ಸಾಬ್, ಬಿ.ಸಿ. ಬಸವರಾಜು ಪ್ರಕಾಶ್, ಉಮಾಶಂಕರ್, ದಿಂಡದಹಳಿ ರಂಗಪ್ಪ,ಹಿಂಡಸಘಟ್ಟೆ ರಾಮಚಂದ್ರ, ಮಾಗಡಿ, ಹೆದೆ°, ಹುಚ್ಚವನಹಳ್ಳಿ ಬಸವಾಪುರ, ನಲ್ಕುಂದ, ಅಣಬೇರು, ಬುಳ್ಳಾಪುರ, ಬಾವಿಹಾಳು ಗ್ರಾಮಸ್ಥರು ಬಂದ್‌ಗೆ ಬೆಂಬಲ ನೀಡಿದರು. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಲಾಗಿತ್ತು.