Advertisement

ಪುಣೆ ಬಂಟರ ಭವನದಲ್ಲಿ  ಬಿಸುಪರ್ಬ, ಬಂಟರ ದಿನಾಚರಣೆ 

04:40 PM Apr 17, 2018 | |

ಪುಣೆ: ಕಳೆದ ನಾಲ್ಕು  ವರ್ಷಗಳಿಂದ ಎ. 14ರಂದು ಬಂಟರ ದಿನದ ಹಾಗೂ ತುಳುನಾಡಿನ ಆಚರಣೆಯಲ್ಲಿರುವ ಸೌರಮಾನ ಯುಗಾದಿಯ ಬಿಸು ಪರ್ಬವನ್ನು ನಮ್ಮ ಸಂಘದ ವತಿಯಿಂದ ಆಚರಿಸುತ್ತಾ ಬಂದಿದ್ದೇವೆ. ತುಳುನಾಡಿನಲ್ಲಿ ವಿಶೇಷವಾಗಿ ನಾವು ಆಚರಿಸುವ ಇಂಥ ಆಚರಣೆಗಳು ನಮ್ಮ ಸಾಂಸ್ಕೃತಿಕ ಪರಂಪರೆಗೆ ಪೂರಕವಾಗಿ ಗುರುತಿಸಿಕೊಂಡಿದೆ. ಸಂಘದ ಭವ್ಯವಾದ ಭವನ ಲೋಕಾರ್ಪಣೆಗೊಂಡು ಪ್ರಪ್ರಥಮವಾಗಿ ನಾವು ಬಿಸುಹಬ್ಬವನ್ನು ನಮ್ಮದೇ ಆದ ಸಾಂಸ್ಕೃತಿಕ ಭವನದಲ್ಲಿ ಆಚರಿಸುತ್ತಿರುವುದಕ್ಕೆ ಆನಂದವಾಗುತ್ತಿವೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಅವರು ನುಡಿದರು.

Advertisement

ಎ. 14ರಂದು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಪುಣೆ ಬಂಟರ ಭವನದಲ್ಲಿ ಬಿಸುಪರ್ಬ ಹಾಗು ಬಂಟರ ದಿನಾಚರಣೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,   ಈ ಭವನದ ನಿರ್ಮಾಣದ ಜವಾಬ್ದಾರಿ ವಹಿಸಿ ಕೊಂಡ ದಿನವೇ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ಅನುಗ್ರಹಕ್ಕಾಗಿ ಶ್ರೀ ದೇವಿ ಮಹಾತೆ¾ ಯಕ್ಷಗಾನವನ್ನು ಈ ಭವನ ನಿರ್ಮಾಣವಾದ ಮೇಲೆ ಆಯೋಜಿಸುವ ಸಂಕಲ್ಪವನ್ನು ಮಾಡಿರುವಂತೆ ಇಂದಿನ ಈ ಶುಭದಿನ ಯಕ್ಷಗಾನ ಪ್ರದರ್ಶನವನ್ನೂ ಆಯೋಜಿಸಿದ್ದೇವೆ. ಈ ಭವನ ನಿರ್ಮಾಣ ನಾವು ನಂಬಿಕೊಂಡ ದೈವ ದೇವರ ಅನುಗ್ರಹದಿಂದ ನಿರ್ವಿಘ್ನವಾಗಿ ಪೂರ್ಣಗೊಂಡಿದೆ ಎನ್ನಲು ಸಂತೋಷವಾಗುತ್ತಿದೆ. ಸಾಂಘಿಕ ಒಗ್ಗಟ್ಟಿಗೆ ಇಂತಹ ಆಚ ರಣೆಗಳು ಅಗತ್ಯವಾಗಿದ್ದು, ಭವಿಷ್ಯದಲ್ಲೂ ನಾವೆಲ್ಲರೂ  ಒಂದಾಗಿ, ಒಮ್ಮತದಿಂದ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯೋಣ  ಎಂದು ನುಡಿದು ಎಲ್ಲರಿಗೂ ಶುಭಹಾರೈಸಿದರು.

ಕಲಾಜಗತ್ತು ಮುಂಬಯಿಯ ಸಂಸ್ಥಾಪಕ ವಿಜಯ ಕುಮಾರ್‌ ಶೆಟ್ಟಿ ಇವರು ಮಾತನಾಡಿ, ತುಳುನಾಡಿನಲ್ಲಿ ವಿಶೇಷವಾಗಿ ಆಚರಣೆಯಲ್ಲಿರುವ  ವರ್ಷದ ಆದಿ  ಎಂದು ಕರೆಯಲ್ಪಡುವ ಬಿಸುಪರ್ಬವನ್ನು ಇಂದು ಪುಣೆ ಬಂಟರ ಭವನದಲ್ಲಿ ಆಚರಿಸುತ್ತಿರುವುದು ಬಹಳ ಅರ್ಥ ಪೂರ್ಣವಾಗಿದೆ. ನಮ್ಮ ಪ್ರತಿಯೊಂದು ಧಾರ್ಮಿಕ ನಂಬಿಕೆಗಳಿಗೂ ತುಳುನಾಡಿನಲ್ಲಿ ವಿಶೇಷವಾದ ಆಸ್ಥೆಯಿದೆ. ಇದನ್ನು ಉಳಿಸಿ-ಬೆಳೆಸುವುದಲ್ಲದೆ, ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯವನ್ನು ನಾವು ಮಾಡಬೇಕಾಗಿದೆ ಎಂದರು.

ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ  ಡಿ. ಶೆಟ್ಟಿ ಇವರು ಮೊದಲಿಗೆ ಭವನದ ಅಂಗಳ ದಲ್ಲಿ ಬಂಟ ಧ್ವಜಾರೋಹಣ ನಡೆಸುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆಯಿತ್ತರು. ಅನಂತರ ಪುಣೆ ರೆಸ್ಟೋರೆಂಟ್‌  ಹೊಟೇಲಿಯರ್ಸ್‌ ಅಸೋಸಿಯೇಶನ್‌ ಅಧ್ಯಕ್ಷರಾದ ಗಣೇಶ್‌ ಶೆಟ್ಟಿ ಅವರು ಭವನದ ಹೊರಾಂಗಣದಲ್ಲಿ ಅಳವಡಿಸಲಾದ ಶಿವಾಜಿ ಪ್ರತಿಮೆಗೆ ಹಾರಾರ್ಪಣೆ ಮಾಡಿದರು. ಬಿಸುಪರ್ಬದ ನಿಮಿತ್ತ ಭವನದ ಚಾವಡಿಯಲ್ಲಿ  ನಿತ್ಯಾನಂದ ಸ್ವಾಮಿ, ಸಾಯಿ ಬಾಬಾ, ಕಟೀಲು ದೇವರಿಗೆ ಪೂಜೆ ಸಲ್ಲಿಸಲಾಯಿತು.

ವಿವಿಧ ರೀತಿಯ ಬಗೆ ಬಗೆಯ ತರಕಾರಿಗಳನ್ನು ದೇವರ ಎದುರು ಇಟ್ಟು  ಪೂಜಿಸಿ ಮಹಿಳಾ ಸದಸ್ಯೆಯರು ಆರತಿ ಬೆಳಗಿದರು. ಕಾರ್ಯಕ್ರಮದ ಕೊನೆಗೆ ತುಳುನಾಡಿನ ಸಾಂಪ್ರದಾಯಿಕ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಹಾಗೂ ಊರಿನ ಕಲಾವಿದರಿಂದ ಭವ್ಯಶ್ರೀ ಮಂಡೆಕೋಲು ಭಾಗವತಿಕೆಯೊಂದಿಗೆ ಶ್ರೀ ದೇವೀ ಮಹಾತೆ¾é ಯಕ್ಷಗಾನ ಪ್ರದರ್ಶನಗೊಂಡಿತು. 

Advertisement

ಯಕ್ಷಗಾನದ ಮಧ್ಯಾಂತರದಲ್ಲಿ ಯಕ್ಷಗಾನ ಕಲಾವಿದರನ್ನು ಹಾಗೂ ಭವನಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಗಣ್ಯರ ಸಮ್ಮುಖದಲ್ಲಿ ಸತ್ಕರಿಸಲಾಯಿತು.

ಸಂಘದ  ಉಪಾಧ್ಯಕ್ಷರಾದ ರಾಮಕೃಷ್ಣ ಶೆಟ್ಟಿ, ಮಾಧವ ಆರ್‌. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಗೌರವ ಕೋಶಾಧಿಕಾರಿ ಎರ್ಮಾಳ್‌ ಚಂದ್ರಹಾಸ ಶೆಟ್ಟಿ, ಸಂಘದ ಪದಾಧಿಕಾರಿಗಳಾದ ಸತೀಶ್‌ ಶೆಟ್ಟಿ, ಶ್ರೀನಿವಾಸ್‌ ಶೆಟ್ಟಿ, ಚಂದ್ರಶೇಖರ ಶೆಟ್ಟಿ ನಿಟ್ಟೆ, ಶಶೀಂದ್ರ  ಶೆಟ್ಟಿ, ವಿಶ್ವನಾಥ ಶೆಟ್ಟಿ, ಸುಧಾಕರ ಶೆಟ್ಟಿ, ಪ್ರವೀಣ್‌ ಶೆಟ್ಟಿ ಪುತ್ತೂರು, ತಾರಾನಾಥ ಕೆ. ರೈ ಮೇಗಿನಗುತ್ತು, ಮಿಯಾರು ರಾಜ್‌ ಕುಮಾರ್‌ ಶೆಟ್ಟಿ, ಗಣೇಶ್‌ ಶೆಟ್ಟಿ, ಮೋಹನ್‌ ಶೆಟ್ಟಿ, ಪ್ರಶಾಂತ್‌ ಶೆಟ್ಟಿ ಹೆರ್ಡೆಬೀಡು, ಪ್ರಶಾಂತ್‌ ಶೆಟ್ಟಿ, ಗಣೇಶ್‌ ಹೆಗ್ಡೆ, ವಿವೇಕಾನಂದ ಶೆಟ್ಟಿ ಆವರ್ಸೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ ಶೆಟ್ಟಿ ಕಳತ್ತೂರು, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ  ವಸಂತ್‌ ಶೆಟ್ಟಿ  ಮತ್ತು ಮಹಿಳಾ ವಿಭಾಗ, ಯುವ ವಿಭಾಗ, ಉತ್ತರ, ದಕ್ಷಿಣ ಪ್ರಾದೇಶಿಕ ಸಮಿತಿ ಸದಸ್ಯರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು. 

ಚಿತ್ರ-ವರದಿ: ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next