ಕೊಟ್ಟಾಯಂ: ಕೇರಳದಲ್ಲಿ ಕ್ರಿಶ್ಚಿಯನ್ ಸಮುದಾಯದ ಯುವತಿಯರು ಲವ್ ಮತ್ತು ಮಾದಕ ವಸ್ತುಗಳ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆ ಎಂದು ಕ್ಯಾಥೊಲಿಕ್ ಬಿಷಪ್ ಮಾರ್ ಜೋಸೆಫ್ ಕಲ್ಲರಾನ್‌ಘಾಟ್ ಆರೋಪಿಸಿದ್ದಾರೆ. ಸೈರೋ ಮಲಬಾರ್ ವ್ಯಾಪ್ತಿಗೆ ಒಳಪಡುವ ಪಾಲಾದಲ್ಲಿರುವ ಚರ್ಚ್‌ನ ಬಿಷಪ್ ಜೋಸೆಫ್ ಕಲ್ಲರಾನ್‌ಘಾಟ್ ಈ ಆರೋಪ ಮಾಡಿದ್ದಾರೆ.
ಜಿಲ್ಲೆಯ ಕುರುವಿಲಂಗಾಡ್ ಎಂಬಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಕ್ರಿಶ್ಚಿಯನ್ ಮತ್ತು ಹಿಂದೂ ಸಮುದಾಯದ ಯುವತಿಯರನ್ನು ಮರಳು ಮಾಡಿ, ಅವರನ್ನು ಮತಾಂತರಗೊಳಿಸಿ ಇತ್ತೀಚೆಗೆ ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗಿದೆ. ಶಾಲೆಗಳು, ಕಾಲೇಜುಗಳು, ವಾಣಿಜ್ಯಿಕ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜಿಹಾದಿಗಳು ಯುವತಿಯರನ್ನು ಮರುಳು ಮಾಡುವ ಜಾಲ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕ್ರಿಶ್ಚಿಯನ್ ಯುವತಿಯರು ಅದಕ್ಕೆ ಬಲಿಯಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಜಿಟಿ ದೇವೇಗೌಡ ಇನ್ನೂ ಜೆಡಿಎಸ್ ನಲ್ಲೇ ಇದ್ದಾರೆ : ಹೆಚ್.ಡಿ.ದೇವೇಗೌಡ
“ಕೇರಳದಲ್ಲಿ ಎಲ್ಲೆಲ್ಲಿ ಶಸ್ತ್ರಾಸ್ತ್ರಗಳ ಪ್ರಯೋಗ ಮತ್ತು ತರಬೇತಿ ಅಸಾಧ್ಯವಾಗಿದೆಯೋ ಅಲ್ಲಿ ಲವ್ ಜಿಹಾದ್‌ನ ಮತ್ತೂಂದು ಮಾಧ್ಯಮವಾಗಿ ಮಾದಕ ವಸ್ತುಗಳನ್ನು ಮುಸ್ಲಿಮೇತರ ಸಮುದಾಯಗಳ ಯುವತಿಯರು ಬಳಕೆ ಮಾಡುವಂತೆ ಕಮ್ಮಕ್ಕು ನೀಡಲಾಗುತ್ತದೆ’ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ವಿವಿಧ ಸಮುದಾಯಗಳ ನಡುವೆ ಜಗಳ ತಂದೊಡ್ಡುವ, ಧಾರ್ಮಿಕ ಅಪನಂಬಿಕೆ ಸೃಷ್ಟಿಸುವ, ಕೋಮುವಾದಕ್ಕೆ ಪ್ರೋತ್ಸಾಹ ನೀಡುವ ಜಿಹಾದಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಂಥ ಶಕ್ತಿಗಳು ಕೇರಳ ಸಹಿತ ಜಗತ್ತಿನಾದ್ಯಂತ ಇರುತ್ತವೆ. ಜಿಹಾದಿಗಳು ಯೋಚಿಸಿದಂತೆ ಇತರ ಧರ್ಮೀಯರನ್ನು ಸುಲಭವಾಗಿ ನಾಶಮಾಡಲು ಸಾಧ್ಯವಿಲ್ಲ’ ಎಂದರು.