ಎಚ್.ಡಿ.ಕೋಟೆ: ಪಟ್ಟಣದ ಎಚ್.ಬಿ.ರಸ್ತೆಯ ಪುರಸಭೆ ಕಚೇರಿ ಮುಂಭಾಗ ಇರುವ ಫೇಮಸ್ ಬೇಕರಿಯಲ್ಲಿ ಭಾನುವಾರ ಪೋಷಕರೋರ್ವರು ಖರೀದಿ ಮಾಡಿದ್ದ ಬೆಣ್ಣೆ ಬಿಸ್ಕರ್ ತಿಂದು ಒಂದೂವರೆ ವರ್ಷದ ಮಗು ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಸೋಮವಾರ ಪುರಸಭೆ ಮುಖ್ಯಾಧಿಕಾರಿ ಡಿ.ಎನ್.ವಿಜಯ್‌ಕುಮಾರ್ ನೇತೃತ್ವದಲ್ಲಿ ತಾಲೂಕು ಆರೋಗ್ಯಾಧಿಕಾರಿ ಟಿ.ರವಿಕುಮಾರ್ ಭೇಟಿ ನೀಡಿ ಬೇಕರಿ ಮಾಲೀಕರಿಗೆ ತರಾಟೆ ತಗೆದುಕೊಂಡರು.
ಅಲ್ಲದೇ ಪ್ರಯೋಗಾಲಯಕ್ಕೆ ಕಳುಹಿಸಲು ಕೆಲ ತಿಂಡಿಗಳ ಸ್ಯಾಂಪಲ್‌ಗಳನ್ನು ಕೊಂಡೊಯ್ದರು. ಭಾನುವಾರ ಸಂಜೆ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಯೋರ್ವರು ತಮ್ಮ ಮಗುವಿಗೆ 250 ಗ್ರಾಂ ಬೆಣ್ಣೆ ಬಿಸ್ಕತ್ ತೆಗೆದುಕೊಂಡು ಹೋಗಿದ್ದಾರೆ. ಈ ಬಿಸ್ಕತ್ ಅನ್ನು ಮಗುವಿಗೆ ತಿನ್ನಿಸಿದ ಮರು ಘಳಿಗೆಯಲ್ಲೇ ಮಗು ವಾಂತಿ ಭೇದಿ ಮಾಡಿಕೊಂಡು ಅಸ್ವಸ್ಥಗೊಂಡಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ: ಕೂಡಲೇ ಪೋಷಕರು ಮಗುವನ್ನು ಪಟ್ಟಣದ ಸಾರ್ವಜನಿಕ ಅಸ್ಪತ್ರೆಗೆ ಕರೆದೊಯ್ದುª ಚಿಕಿತ್ಸೆ ಕೋಡಿಸಿದ್ದಾರೆ. ಆ ಸಂದರ್ಭದಲ್ಲಿ ವೈದ್ಯರು ಮಗುವಿಗೆ ಫುಡ್ ಇನೆ#ಕ್ಷನ್ ಆಗಿದೆ ಎಂದು ಹೇಳಿದ್ದಾರೆ. ಆಗ ಮತ್ತೆ ಬಂದು ಬೇಕರಿಯಲ್ಲಿ ತಂದಿದ್ದ ಬಿಸ್ಕರ್ ಪರೀಕ್ಷಿಸಿದಾಗ ಬಿಸ್ಕರ್ ಅವಧಿ ಮಿರಿರುವುದು ಕಂಡು ಬಂದಿದೆ.
ಉಡಾಫೆ ವರ್ತನೆ: ತಕ್ಷಣ ಬೇಕರಿ ಮಾಲೀಕನನ್ನು ವಿಚಾರಿಸಿದಾಗ ಉಡಾಫೆಯಾಗಿ ವರ್ತಿಸಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ಬೇಕರಿ ಮಾಲೀಕ ಮತ್ತು ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡಿದ್ದಾರೆ. ತಕ್ಷಣ ಬೇಕರಿ ಮಾಲೀಕ ಕೆಲವರ ಮೇಲೆ ಠಾಣೆಗೆ ಹೋಗಿ ಗಲಾಟೆ ದೂರು ದಾಖಲಿಸಿದ್ದಾರೆ. ಠಾಣೆಗೆ ಬಂದ ಸಾರ್ವಜನಿಕರು ಮತ್ತು ಮಗುವಿನ ಪೋಷಕರು, ಬೇಕರಿ ತಿಂಡಿಯಿಂದಾಗಿರುವ ಘಟನೆಯನ್ನು ವಿವರಿಸಿ ದೂರು ನೀಡಿದ್ದಾರೆ.
ಮಾಲೀಕರಿಗೆ ತರಾಟೆ: ತಕ್ಷಣ ಎಚ್.ಡಿ.ಕೋಟೆ ಠಾಣೆ ಸಬ್‌ಇನ್ಸ್‌ಪೆಕ್ಟರ್ ಅನಂದ್ ಬೇಕರಿ ಮಾಲೀಕನನ್ನು ತರಾಟೆ ತಗೆದುಕೊಂಡು ನಿಮ್ಮ ಬೇಕರಿ ಮೇಲೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಮಗುವಿಗೆ ತೊಂದರೆಯಾಗಿರುವ ಬಿಸ್ಕತ್ ವರದಿ ಬರುವವರೆಗೆ ಬೇಕರಿಯನ್ನು ಬಂದ್ ಮಾಡಲು ಸೂಚಿಸಿ, ಪುರಸಭೆ ಮತ್ತು ತಾಲೂಕು ಆರೋಗ್ಯ ಇಲಾಖೆಗೆ ಪಟ್ಟಣ ಪೊಲೀಸರೇ ಪತ್ರ ಬರೆದಿದ್ದರು.
ಹೀಗಾಗಿ ಸೋಮವಾರ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳ ತಂಡ ಬೇಕರಿಗೆ ಭೇಟಿ ನೀಡಿ, ತಿಂಡಿ ಪದಾರ್ಥಗಳನ್ನು ಪರಿಶೀಲಿಸಿ, ಬೇಕರಿ ಮಾಲೀಕ ನಜೀರ್‌ನನ್ನು° ತರಾಟೆ ತಗೆದುಕೊಂಡರು. ಕೆಲ ಪದಾರ್ಥಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಬಿಲ್ ಸಹಿತ ಪಡೆದು ವರದಿ ಬರುವವರೆಗೆ ಬಾಗಿಲು ಹಾಕಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಬೇಕರಿಯಲ್ಲಿದ್ದ ಪ್ಲಾಸ್ಟಿಕ್ ಕವರ್, ಲೋಟಗಳನ್ನು ವಶಪಡಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಡಿ.ಎನ್.ವಿಜಯ್‌ಕುಮಾರ್, ಆರೋಗ್ಯಾಧಿಕಾರಿಗಳಾದ ಪುಷ್ಪಲತಾ, ಸಂತೋಷ್, ಸಹಾಯಕ ಆರೋಗ್ಯ ನಿರೀಕ್ಷಕ ನಾಗೇಂದ್ರ, ಪಟ್ಟಣದ ಮುಖಂಡರಾದ ಲಾರಿ ಪ್ರಕಾಶ್, ವಕೀಲ ಚೌಡಳ್ಳಿ ಜವರಯ್ಯ, ಸದಾಶೀವ, ದಸಂಸ ಮುಖಂಡರಾದ ದೊಡ್ಡಸಿದ್ದು, ಸಣ್ಣಕುಮಾರ್, ಚಾ.ಶಿವಕುಮಾರ್, ಚನ್ನಕೋಟೆ, ಹೋಟೆಲ್ ಪ್ರಸಾದ್ ಇತರರು ಉಪಸ್ಥಿತರಿದ್ದರು.