Advertisement

ಹುಬ್ಬಳ್ಳಿಯಲ್ಲಿ ಬಿಐಎಸ್‌ ವಲಯ ಕಚೇರಿ

06:35 AM Mar 18, 2018 | |

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಉದ್ಯಮಗಳಿಗೆ ಉತ್ತೇಜನ ನೀಡುವ ದಿಸೆಯಲ್ಲಿ ಹುಬ್ಬಳ್ಳಿಯಲ್ಲಿ ಬ್ಯೂರೋ ಆಫ್ ಇಂಡಿಯನ್‌ ಸ್ಟಾಂಡರ್ಡ್ಸ್‌ (ಬಿಐಎಸ್‌) ವಲಯ ಕೇಂದ್ರ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಆಹಾರ, ನಾಗರಿಕ ಪೂರೈಕೆ, ವಾಣಿಜ್ಯ ಹಾಗೂ ಉದ್ಯಮ ಸಹಾಯಕ ಸಚಿವ ಸಿ.ಆರ್‌.ಚೌಧರಿ ಹೇಳಿದರು.

Advertisement

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಐಎಸ್‌ ವಲಯ ಕೇಂದ್ರದಿಂದ ಈ ಭಾಗದಲ್ಲಿ ಉದ್ಯಮಗಳಿಗೆ ಅನುಕೂಲವಾಗುತ್ತದೆ. ಈ ದಿಸೆಯಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್‌ ವಿಲಾಸ ಪಾಸ್ವಾನ್‌ರೊಂದಿಗೆ ಚರ್ಚಿಸಲಾಗುವುದು. ಮೇ ತಿಂಗಳಲ್ಲಿ ನೂತನ ಕೇಂದ್ರಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next