ಮುಂಬಯಿ: ಫ್ರೆಂಡ್ಸ್ ಬಲ್ಲಾಳ್‌ಬಾಗ್ ಬಿರುವೆರ್ ಕುಡ್ಲ ಸಂಸ್ಥೆಯು ಉದಯ ಪೂಜಾರಿ ಅವರ ಕನಸಿನ ಕೂಸು, ನಾರಾಯಣ ಗುರುಗಳ ತತ್ವವನ್ನು ಅಳವಡಿಸಿಕೊಂಡ ಸಂಸ್ಥೆ ಇದಾಗಿದೆ. ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರ ಕಣ್ಣೀರನ್ನೊರೆಸುವ ಸಂಸ್ಥೆ ಇದಾಗಿದ್ದು, ಯಾವುದೇ ರಾಜಕೀಯ ಲಾಭಕ್ಕಾಗಿ ಸ್ಥಾಪನೆಗೊಂಡ ಸಂಸ್ಥೆಯಲ್ಲ. ಎಲ್ಲÉ ಸಮಾಜದವರು ಈ ಸಂಸ್ಥೆಯಲ್ಲಿ ಸದಸ್ಯರಾಗಿದ್ದಾರೆ. ಇಷ್ಟರವರೆಗೆ ನಾಲ್ಕು ಕೋಟಿ ರೂ. ಗಳನ್ನು ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗಿದೆ. ಇಂದು ಡೊಂಬಿವಲಿ ಯಲ್ಲಿ ಅಧಿಕೃತವಾಗಿ ರವಿ ಮುದ್ದು ಸುವರ್ಣರ ಅಧ್ಯಕ್ಷತೆಯಲ್ಲಿ ಡೊಂಬಿವಲಿ ಘಟಕ ಸ್ಥಾಪನೆಗೊಂಡಿದೆ. ಜಾತಿ, ಮತ, ಭೇದವಿಲ್ಲದೆ ಎಲ್ಲ ಸಮಾಜ ಬಾಂಧವರನ್ನು ಸಂಸ್ಥೆ ಸದಸ್ಯರನ್ನಾ ಗಿಸಿಕೊಂಡು ಮುಂಬಯಿಯ ಉತ್ತಮ ಸಂಸ್ಥೆ ಎನ್ನುವಲ್ಲಿ ನಾವು ಶ್ರಮಿಸೋಣ. ಸಂಸ್ಥೆ ಯಾವುದೇ ಜಾತೀಯ ಸಂಸ್ಥೆಗಳ ವಿರುದ್ಧ ಕಾರ್ಯ
ನಿರ್ವಹಿಸದೆ ನಮ್ಮವರ ಕಣ್ಣೀರೊರೆಸುವ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿ ಎಂದು ಬಿರುವೆರ್ ಕುಡ್ಲ ಮುಂಬಯಿ ಘಟಕದ ಅಧ್ಯಕ್ಷ ಧರ್ಮದರ್ಶಿ ದೇವು ಪೂಜಾರಿ ಅವರು ನುಡಿದರು.
ಜು. 7ರಂದು ಸಂಜೆ ಡೊಂಬಿವಲಿ ಪಶ್ಚಿಮದ ಹೊಟೇಲ್ ಫ್ರೆಂಡ್ಸ್ ಸಭಾಗೃಹದಲ್ಲಿ ಫ್ರೆಂಡ್ಸ್ ಬಲ್ಲಾಳ್‌ಬಾಗ್ ಬಿರುವೆರ್ ಕುಡ್ಲ ಇದರ ಡೊಂಬಿವಲಿ ಘಟಕವನ್ನು ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು.
ನೂತನ ಕಾರ್ಯದರ್ಶಿ ಸಚಿನ್ ಪೂಜಾರಿ ಇವರು ಮಾತನಾಡಿ, ಡೊಂಬಿವಲಿ ಪರಿಸರದಲ್ಲಿ ರವಿ ಸುವರ್ಣರು ಓರ್ವ ಉತ್ತಮ ಸಮಾಜ ೇವಕರಾಗಿದ್ದು, ವಸಾಯಿಯಲ್ಲಿ ರೈಲ್ವೇ ಅಪಘಾಕ್ಕೀಡಾದ ವ್ಯಕ್ತಿ
ಯೊಬ್ಬರಿಗೆ 1 ಲಕ್ಷ ಮೂವತ್ತು ಸಾವಿರ, ತೆಂಗಿನ ಮರದಿಂದ ಬಿದ್ದ ವ್ಯಕ್ತಿಗೆ 1 ಲಕ್ಷ, ಕ್ಯಾನ್ಸರ್ ಪೀಡಿತ ಜಯಕರ ಶೆಟ್ಟಿಯವರಿಗೆ 40 ಸಾವಿರ ರೂ. ಗಳನ್ನು ಸಂಗ್ರಹಿಸಿ ಈಗಾಗಲೇ ನಾವು ಕೊಟ್ಟಿದ್ದೇವೆ. ಡೊಂಬಿವಲಿ ಪರಿಸರದಲ್ಲಿ ನಮ್ಮಿಂದಾಗುವ ಸಹಾಯವನ್ನು ನಾವು ಮಾಡುತ್ತಿದ್ದು, ಈಗ ಸಹಾಯಕ್ಕೆ ಅಧಿಕೃತವಾದ ವೇದಿಕೆ ಲಭ್ಯವಾಗಿದೆ. ನಾವೆಲ್ಲರೂ ಒಂದಾಗಿ ಪ್ರಾಮಾಣಿಕವಾಗಿ ಸಮಾಜ ಸೇವೆಯಲ್ಲಿ ತೊಡಗೋಣ ಎಂದರು.
ನೂತನ ಕೋಶಾಧಿಕಾರಿ ನಿತ್ಯಾನಂದ ಜತ್ತನ್ ಅವರು ಮಾತನಾಡಿ, ಸಂಸ್ಥೆಗೆ ಡೊಂಬಿವಲಿ ಪರಿಸರದಲ್ಲಿ ಓರ್ವ ಉತ್ತಮ ನಾಯಕ ಲಭಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದವರ ಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಡೊಂಬಿವಲಿ ಪರಿಸರದ ಉತ್ತಮ ಸಂಸ್ಥೆ ಎನ್ನುವ ಹೆಸರು ಗಳಿಸಲು ನಾವೆಲ್ಲರೂ ಒಂದಾಗಿ ಪ್ರಯತ್ನಿಸೋಣ. ಸಂಸ್ಥೆಯ ಹೆಸರನ್ನು ಮುಂಬಯಿ ಮಹಾನಗರದಲ್ಲಿ ಚಿರಪರಿಚಿತವಾಗಿಸಲು ಮುಂದಾಗೋಣ ಎಂದರು.
ಉದ್ಯಮಿ ರವಿ ಪೂಜಾರಿ, ತಿಲಕ್ ಸನಿಲ್ ಅವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಡೊಂಬಿವಲಿ ಘಟಕದ ಅಧ್ಯಕ್ಷರನ್ನಾಗಿ ರವಿ ಎಂ. ಸುವರ್ಣ, ಕಾರ್ಯದರ್ಶಿಯಾಗಿ ಸಚಿನ್ ಪೂಜಾರಿ ಪಲಿಮಾರು, ಕೋಶಾಧಿಕಾರಿಯಾಗಿ ನಿತ್ಯಾನಂದ ಜತ್ತನ್, ಹಾಗೂ ಸಮಿತಿಯ ಸದಸ್ಯರಾಗಿ ನಿವೇಶ್ ಅಮೀನ್, ಸುಜಿತ್ ಅಮೀನ್, ಧೀರೇಶ್ ಪೂಜಾರಿ, ಚಿನ್ಮಯ ಸಾಲ್ಯಾನ್ ಅವರನ್ನು ನೇಮಿಸಲಾಯಿತು. ವೇದಿಕೆಯಲ್ಲಿ ದೇವು ಪೂಜಾರಿ, ಲೋಕೇಶ್ ಕೋಟ್ಯಾನ್, ಪ್ರಸಾದ್ ಸಾಲ್ಯಾನ್, ರವಿ ಸುವರ್ಣ, ಸಚಿನ್ ಪೂಜಾರಿ, ನಿತ್ಯಾನಂದ ಜತ್ತನ್ ಉಪಸ್ಥಿತರಿದ್ದರು. ಚಿನ್ಮಯ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಡೊಂಬಿವಲಿ ಪರಿಸರದಲ್ಲಿ ವೇದಿಕೆ ಇಲ್ಲದೆ ನಾವು ಸಮಾಜ ಸೇವೆಯನ್ನು ಮಾಡಿದವರು. ಸುಮಾರು ನಾಲ್ಕು ಮಂದಿಗೆ ನಮ್ಮಿಂದಾಗುವ ಸಹಾಯವನ್ನು ಮಾಡಿದ್ದೇವೆ. ಇಂದು ನಮ್ಮ ಸಮಾಜ ಸೇವೆಗೆ ಒಂದು ವೇದಿಕೆಯು ನಿರ್ಮಾಣವಾಗಿದೆ. ಈ ವೇದಿಕೆಯನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಉದಯ ಪೂಜಾರಿ ಅವರ ಕನಸನ್ನು ಡೊಂಬಿವಲಿ ನಗರದಲ್ಲಿ ನನಸಾಗಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡಲಿದ್ದೇವೆ. ಈ ಕಾರ್ಯಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಿದೆ
– ರವಿ ಸುವರ್ಣ (ಅಧ್ಯಕ್ಷರು: ಡೊಂಬಿವಲಿ ಘಟಕ).