Advertisement

ಪಂಡಿತ್‌ ವರದಾಚಾರ್ಯ ಜನ್ಮ ಶತಮಾನೋತ್ಸವ ; ಶಿಕ್ಷಣದಲ್ಲಿ ಜ್ಞಾನಕ್ಕೆ ಒತ್ತು: ಕಾಗೇರಿ

11:22 PM Oct 22, 2022 | Team Udayavani |

ಮೈಸೂರು: ನಮಗೆ ಹಣ ಗಳಿಕೆಯ ಶಿಕ್ಷಣ ಸಿಕ್ಕಿದೆ. ಜ್ಞಾನ ಗಳಿಕೆಯ ಶಿಕ್ಷಣ ದೊರೆತಿಲ್ಲ. ಇತ್ತೀಚೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತಂದು ಜ್ಞಾನ ಗಳಿಕೆಗೆ ಒತ್ತು ನೀಡಲಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ಪಂಡಿತ ರತ್ನ ಕೆ. ಎಸ್‌. ವರದಾಚಾರ್ಯ ಶತಮಾನೋತ್ಸವ ಆಚರಣ ಸಮಿತಿ ಆಶ್ರಯದಲ್ಲಿ ಶನಿವಾರ ಇಲ್ಲಿನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ  ಜರಗಿದ ವರದಾಚಾರ್ಯರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ “ಸಮನ್ವಯ ವರದಾ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮೈಸೂರು ವಿದ್ವತ್‌ ಕೇಂದ್ರವಾಗಿದೆ. ಸಂಸ್ಕೃತ, ಯೋಗ, ಅಧ್ಯಾತ್ಮಕ್ಕೆ  ಹೆಸರಾಗಿದೆ. ಸನಾತನ ಹಿಂದೂ ಧರ್ಮದ ರಕ್ಷಣೆ ಇಲ್ಲಿ ಆಗಿದ್ದು ಉಳಿದು ಬೆಳೆದು ಬಂದಿದೆ. ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆ ದೇಶಕ್ಕೆ ವಿದ್ವಾಂಸರನ್ನು ನೀಡಿರುವ ಶಿಕ್ಷಣ ಕೇಂದ್ರವಾಗಿದೆ ಎಂದರು.

ಶಿರಸಿಯ ಸೋಂದಾ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ  ಆಶೀರ್ವಚನ ನೀಡಿದರು.

ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ವರದಾಚಾರ್ಯ ಅವರ ಚಿತ್ರಪಟವನ್ನು ಅನಾವರಣಗೊಳಿಸಿದರು. ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ವಿದ್ವಾನ್‌ ಡಾ| ಪರಮೇಶ್ವರ ನಾರಾಯಣ ಶಾಸ್ತ್ರಿ ಹಾಗೂ ಪ್ರೊ| ಚಕ್ರವರ್ತಿ ರಂಗನಾಥನ್‌ ಅವರನ್ನು ಸಮ್ಮಾನಿಸಿದರು.

Advertisement

ಸಂಸದ ಪ್ರತಾಪ ಸಿಂಹ, ಶಾಸಕ ಎಸ್‌.ಎ. ರಾಮದಾಸ್‌, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಎಸ್‌. ಸಚ್ಚಿದಾನಂದಮೂರ್ತಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.

ಲೋಕಕ್ಕೆ ನಿರಂತರವಾಗಿ ವಿದ್ಯೆಯನ್ನು  ಹಂಚುತ್ತಿದ್ದವರು ವರದಾಚಾರ್ಯರು. ಈಗ ಅವರ ಶಿಷ್ಯರು ಆ ಕೆಲಸವನ್ನು ಮುಂದುವರಿಸುತ್ತಿದ್ದಾರೆ.
-ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಪೇಜಾವರ ಮಠ

          
Advertisement

Udayavani is now on Telegram. Click here to join our channel and stay updated with the latest news.

Next