ಭುವನೇಶ್ವರ: ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಿಂದ ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಂ ರೂರ್ಕೆಲಾ ವಿಶ್ವದ ಅತಿದೊಡ್ಡ ಸಂಪೂರ್ಣ ಕುಳಿತುಕೊಳ್ಳುವ ಹಾಕಿ ಕ್ರೀಡಾಂಗಣ ಎಂದು ಗುರುತಿಸುವ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಗಿದೆ.
ರೂರ್ಕೆಲಾದಲ್ಲಿ ನಡೆಯುತ್ತಿರುವ ಎಫ್‌ಐಎಚ್ ಪ್ರೊ ಲೀಗ್ ಪಂದ್ಯಾವಳಿಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಶುಕ್ರವಾರ ಈ ಪ್ರಶಸ್ತಿಯನ್ನು ನೀಡಲಾಯಿತು.
ಹಾಕಿ ವಿಶ್ವಕಪ್ 2023 ಅನ್ನು ಇತ್ತೀಚೆಗೆ ಇಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈಗ ಹಾಕಿ ಮೂಲಸೌಕರ್ಯದಲ್ಲಿ ಮಾನದಂಡವಾಗಿರುವ ಈ ಕ್ರೀಡಾಂಗಣವನ್ನು ದಾಖಲೆಯ 15 ತಿಂಗಳುಗಳಲ್ಲಿ ನಿರ್ಮಿಸಲಾಗಿತ್ತು. 20,011 ಆಸನ ಸಾಮರ್ಥ್ಯವನ್ನು ಹೊಂದಿದೆ ಮತ್ತು ಎಲ್ಲರಿಗೂ ನಿರಂತರ ವೀಕ್ಷಣೆಯ ಅನುಭವವನ್ನು ಹೊಂದಿದೆ.ಇದು ವಿಶ್ವದ ಅತಿ ದೊಡ್ಡ ಸಂಪೂರ್ಣ ಕುಳಿತುಕೋಳ್ಳುವ ಹಾಕಿ ಕ್ರೀಡಾಂಗಣ ಎಂದು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಗುರುತಿಸಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಪಟ್ನಾಯಕ್, ‘ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಈ ಮನ್ನಣೆಯಿಂದ ನಮ್ಮ ರಾಜ್ಯ ಒಡಿಶಾ ಬಹಳ ದೂರ ಸಾಗಿದೆ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ನಕ್ಷೆಯಲ್ಲಿ ಛಾಪು ಮೂಡಿಸಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಈ ಯೋಜನೆಯಲ್ಲಿ ಭಾಗಿಯಾದ ಎಲ್ಲರಿಗೂ, ಸುಂದರ್‌ಗಢದ ಜನರಿಗೆ ಮತ್ತು ಕ್ರೀಡೆಗೆ ಬೇಷರತ್ ಬೆಂಬಲ ನೀಡಿದ ಹಾಕಿ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ” ಎಂದಿದ್ದಾರೆ.
ಹಾಕಿ ವಿಶ್ವಕಪ್‌ನ ಸಂಭ್ರಮಾಚರಣೆಯನ್ನು ಹೆಚ್ಚಿಸಿದೆ ಮತ್ತು ಭಾರತ ಮತ್ತು ಒಡಿಶಾಗೆ ಅಪಾರ ಹೆಮ್ಮೆಯನ್ನು ತಂದಿದೆ” ಎಂದು ಮುಖ್ಯ ಮಂತ್ರಿಗಳ ಕಚೇರಿ ಬಿಡುಗಡೆ ಮಾಡಿದೆ.