ಐದು ವರ್ಷಗಳ ಬಯೋಟೆಕ್ನಾಲಜಿ ಫಿನಿಶಿಂಗ್ ಸ್ಕೂಲ್ (ಬಿಟಿಎಫ್ಎಸ್) ಕಾರ್ಯಕ್ರಮವನ್ನು ಪೂರೈಸಿದ ಎಸ್‌ಎಲ್‌ಎಸ್ ಈಗ ಮರುನಾಮಕರಣಗೊಂಡ “ಬಯೋಟೆಕ್ನಾಲಜಿ ಸ್ಕಿಲ್ ಎನ್‌ಹಾನ್ಸ್ ಮೆಂಟ್ ಪ್ರೋಗ್ರಾಮ್’ (ಬೈಸೆಪ್) ಕಾರ್ಯಕ್ರಮಕ್ಕೆ ಆಯ್ಕೆಯಾಗಿದೆ. ಜೈವಿಕ ತಂತ್ರಜ್ಞಾನ ರಂಗ ಅನುಭವಿಸುತ್ತಿರುವ ಗುಣಮಟ್ಟದ ವೃತ್ತಿಪರರ ಕೊರತೆಯನ್ನು ನೀಗಿಸಲು ಕಾರ್ಯಕ್ರಮ ನಡೆಸಲಾಗುತ್ತಿದೆ.
Advertisement
ವಿ.ವಿ. ಜೈವಿಕ ತಂತ್ರಜ್ಞಾನ ಶಿಕ್ಷಣ, ತರಬೇತಿ, ಸಂಶೋಧನೆಯಲ್ಲಿ 2004ರಿಂದ ಮುಂಚೂಣಿಯಲ್ಲಿದೆ. ಈಗ ಎಸ್‌ಎಲ್‌ಎಸ್ ಮತ್ತೂಂದು ಸುತ್ತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ವಿ.ವಿ. ಕುಲಪತಿ ಡಾ|ಎಚ್.ವಿನೋದ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Related Articles
Advertisement
ಸೆಲ್ಯುಲರ್, ಮೊಲೆಕ್ಯುಲರ್ ಡಯಾಗ್ನೊàಸ್ಟಿಕ್ಸ್ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಇದು ವಿವಿಧ ಆರೋಗ್ಯ ಸಮಸ್ಯೆಗಳ ಮೂಲವನ್ನು ಪತ್ತೆ ಹಚ್ಚಲು ಸಹಕಾರ. ಬಿಟೆಕ್, ಎಂಟೆಕ್, ಎಂಎಸ್ಸಿ, ಎಂಫಾರ್ಮ ಮತ್ತಿತರ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದು ಶೇ. 88 ಪ್ಲೇಸೆ¾ಂಟ್ ಪಡೆದಿದ್ದಾರೆ. ಒಂದು ವರ್ಷದ ಕೋರ್ಸ್‌ನಲ್ಲಿ ಆರು ತಿಂಗಳು ಶೈಕ್ಷಣಿಕ ತರಬೇತಿ, ಆರು ತಿಂಗಳು ಕೈಗಾರಿಕಾ ಅಧ್ಯಯನ ನಡೆಸಲಾಗುತ್ತದೆ. ಕೈಗಾರಿಕೆಗಳಿಗೆ ನುರಿತ ಸಿಬಂದಿ ಅಗತ್ಯವಿರುವುದರಿಂದ ಇಂತಹ ತರಬೇತಿ ಹೆಚ್ಚಿನ ಅನುಕೂಲಕರವಾಗುತ್ತದೆ. ವಿದ್ಯಾರ್ಥಿಗಳಿಗೆ ತಿಂಗಳಿಗೆ 10,000 ರೂ. ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಕರ್ನಾಟಕದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸರಕಾರ ಅರ್ಧಾಂಶ ಶುಲ್ಕವನ್ನು ಸರಕಾರ ಭರಿಸಲಿದೆ ಎಂದು ಎಸ್‌ಎಲ್‌ಎಸ್ ನಿರ್ದೇಶಕ ಡಾ|ಸತ್ಯಮೂರ್ತಿ ತಿಳಿಸಿದರು. ಬಿಟಿಎಫ್ಎಸ್ ಸಮನ್ವಯಕಾರ ಡಾ|ಎಸ್. ಬಾಲಸುಬ್ರಹ್ಮಣ್ಯ ಉಪಸ್ಥಿತರಿದ್ದರು.