Advertisement

ತೆರೆಮೇಲೆ ಬರಲಿದೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಬಯೋಪಿಕ್!

11:49 AM Jun 17, 2022 | Team Udayavani |

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ಸದ್ಯ ಬಯೋಪಿಕ್ ಟ್ರೆಂಡ್ ಸಿಕ್ಕಾಪಟ್ಟೆ ನಡೆಯುತ್ತಿದೆ. ಇದೀಗ ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ ಅವರ ಬಯೋಪಿಕ್ ಮಾಡಲು ತಯಾರಿ ನಡೆಸಲಾಗುತ್ತಿದೆ.

Advertisement

ಬಾಲಿವುಡ್ ನ ಪ್ರಸಿದ್ಧ ನಿರ್ಮಾಣ ಸಂಸ್ಥೆಗಳಾದ ಟೀ ಸಿರೀಸ್ ಫಿಲ್ಮ್ಸ್ , ಆಲ್ಮ್ ಲೈಟ್ ಮೋಷನ್ ಪಿಕ್ಚರ್ಸ್ ಹಾಗು ಕರ್ಮ ಮೀಡಿಯಾ ಎಂಟರ್ಟೈನ್ಮೆಂಟ್ ಗಳು ಒಟ್ಟಾಗಿ ಸಿದ್ದಾರ್ಥ ಜೀವನಕಥೆಯನ್ನು ತೆರೆಮೇಲೆ ತರಲು ತಯಾರಿ ನಡೆಸುತ್ತಿದೆ.

ಇದನ್ನೂ ಓದಿ:14 ವರ್ಷಗಳಲ್ಲೇ ಗರಿಷ್ಠ: ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಠೇವಣಿ ಹಣ 30,500 ಕೋಟಿಗೆ ಏರಿಕೆ

ಈ ಬಗ್ಗೆ ಬಾಕ್ಸಾಫೀಸ್ ವಿಶ್ಲೇಷಕ ತರಣ್ ಆದರ್ಶ್ ಕೂ ಮಾಡಿದ್ದಾರೆ. ಕಾಫಿ ಕಿಂಗ್ ನ ಜೀವನಗಾಥೆಯನ್ನು ಈ ನಿರ್ಮಾಣ ಸಂಸ್ಥೆಗಳು ಪ್ರಸ್ತುತ ಪಡಿಸಲಿವೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ ಎಂದಿದ್ದಾರೆ.

Koo App

ಇತ್ತೀಚೆಗಷ್ಟೇ ಟೀ ಸಿರೀಸ್ ಫಿಲ್ಮ್ಸ್, ಆಲ್ಮ್ ಲೈಟ್ ಮೋಷನ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಗಳು ಉದ್ಯಮಿ ರತನ್ ಟಾಟಾ ಹಾಗೂ ಅವರ ಕುಟುಂಬದವರ ಬಯೋಪಿಕ್ ಮಾಡುವುದಾಗಿ ಘೋಷಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next