Advertisement

‘ದಿ ಬ್ರಿಡ್ಜ್ ಮ್ಯಾನ್ ‘ಗಿರೀಶ್‌ ಭಾರದ್ವಾಜ್‌ ಬಯೋಪಿಕ್‌ : ಜೀವನಗಾಥೆಗೆ ಸಿನಿಮಾ ಸ್ಪರ್ಶ

12:17 PM Dec 15, 2020 | Suhan S |

ಭಾರತದ ಹಲವು ರಾಜ್ಯಗಳಲ್ಲಿ ನೂರಾರು ತೂಗು ಸೇತುವೆಗಳನ್ನು ನಿರ್ಮಿಸಿ, ಲಕ್ಷಾಂತರ ಜನರಿಗೆ ಸಂಪರ್ಕಕಲ್ಪಿಸಿದ “ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಭಾರದ್ವಾಜ್‌ ಬಗ್ಗೆ ಅನೇಕರಿಗೆ ಗೊತ್ತಿರಬಹುದು.ಕರ್ನಾಟಕದ ಸುಳ್ಯ ಮೂಲದ ಹೆಮ್ಮೆಯ ಈ ಸಾಧಕನ ಜೀವನ ಈಗ ಸಿನಿಮಾ ರೂಪದಲ್ಲಿ ತೆರೆಮೇಲೆ ಬರುತ್ತಿದೆ.

Advertisement

ಹೌದು, ಗಿರೀಶ್‌ ಭಾರದ್ವಾಜ್‌ ಅವರ ಜೀವನ ಮತ್ತು ಸಾಧನೆಯನ್ನು ನಿರ್ದೇಶಕ ಸಂತೋಷ್‌ಕೊಡೆಂಕೇರಿ ತೆರೆಮೇಲೆ ಸಿನಿಮಾ ರೂಪದಲ್ಲಿ ತರುತ್ತಿದ್ದಾರೆ. ಅಂದಹಾಗೆ, ಈ ಸಿನಿಮಾಕ್ಕೆ ” ದಿ ಬ್ರಿಡ್ಜ್ ಮ್ಯಾನ್’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಚಿತ್ರತಂಡ ಈ ಚಿತ್ರದ ಟೈಟಲ್‌ ಮತ್ತು ಪೋಸ್ಟರ್‌ ಬಿಡುಗಡೆಗೊಳಿಸಿದೆ.

ಇದನ್ನೂ ಓದಿ : ಶಿವರಾಜ್‌ ಕುಮಾರ್‌ ಶಿವಪ್ಪ ಲುಕ್‌ ವೈರಲ್‌ ಕುತೂಹಲ ಹೆಚ್ಚಿಸಿದ ಚಿತ್ರ

ಇದೇ ವೇಳೆ ” ದಿ ಬ್ರಿಡ್ಜ್ ಮ್ಯಾನ್’ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸಂತೋಷ್‌ಕೊಡೆಂಕೇರಿ, “ಕರ್ನಾಟಕದಲ್ಲಿ ಹುಟ್ಟಿ ಬೆಳೆದು, ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಅಪರೂಪದ ಸಾಧಕ ಗಿರೀಶ್‌ ಭಾರದ್ವಾಜ್‌ ಅವರ ಜೀವನ – ಸಾಧನೆ ಮೇಲೆ ಈ ಸಿನಿಮಾವಾಗುತ್ತಿದೆ. ಸುಮಾರು ನಾಲ್ಕೈದು ವರ್ಷಗಳಿಂದ ಇವರ ಜೀವನ ಸಿನಿಮಾ ಮಾಡಬೇಕೆಂಬ ಕನಸು ಈಗ ನನಸಾಗುತ್ತಿದೆ. ಇದೊಂದು ಬಯೋಪಿಕ್‌ ಆಗಿರುವುದರಿಂದ, ಚಿತ್ರ ಆದಷ್ಟು ನೈಜವಾಗಿ ಮೂಡಿಬರಲಿದೆ.ಕನ್ನಡ ಮತ್ತು ಹಿಂದಿ ಸೇರಿದಂತೆ ಏಕಕಾಲಕ್ಕೆ ಎರಡು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ’ ಎಂದಿದ್ದಾರೆ.

ಈಗಾಗಲೇ” ದಿ ಬ್ರಿಡ್ಜ್ ಮ್ಯಾನ್’ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಜನವರಿ ವೇಳೆಗೆ ಚಿತ್ರದ ಚಿತ್ರೀಕರಣಆರಂಭಿಸುವ ಯೋಜನೆಯಲ್ಲಿದೆ. ಕರ್ನಾಟಕ,ಕೇರಳ, ಒಡಿಸ್ಸಾ ಮೊದಲಾದಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಸದ್ಯ ಚಿತ್ರದಕಲಾವಿದರ ಆಯ್ಕೆಯಲ್ಲಿರುವ ಚಿತ್ರತಂಡ, ಇದೇ ತಿಂಗಳಕೊನೆಗೆ ಚಿತ್ರದ ತಾರಾಬಳಗವನ್ನು ಅಂತಿಮಗೊಳಿಸಲಿದೆ. ” ದಿ ಬ್ರಿಡ್ಜ್ ಮ್ಯಾನ್’ ಚಿತ್ರದ ಹಾಡುಗಳಿಗೆ ವಿನಯ್‌ ಶರ್ಮ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಧನ್ವಿಕ್‌ ಗೌಡ ಛಾಯಾಗ್ರಹಣ, ರಘು ಎಸ್‌. ಸಂಕಲನವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next