ನವದೆಹಲಿ: ಬೆಂಗಳೂರಿನಲ್ಲಿರುವ ಜೈವಿಕ ತಂತ್ರಜ್ಞಾನ ಸಂಸ್ಥೆ ಬಯೋಕಾನ್ ಫಾರ್ಮಾ ಲಿಮಿಟೆಡ್‌ನ ಉತ್ಪಾದನಾ ವ್ಯವಸ್ಥೆಗೆ ಜಾಗತಿಕ ಮನ್ನಣೆ ಲಭಿಸಿದೆ.
“ಉತ್ಪಾದನಾ ಘಟಕ ಸಾಮರ್ಥ್ಯ, ವ್ಯವಸ್ಥೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಇಂಗ್ಲೆಂಡಿನ ಮೆಡಿಸಿನ್ಸ್ ಮತ್ತು ಹೆಲ್ತ್ ಕೇರ್ ಪ್ರಾಡಕ್ಟ್ ರೆಗ್ಯುಲೇಟರಿ ಏಜೆನ್ಸಿ (ಎಂಎಚ್‌ಆರ್‌ಎ) ಈ ಮಾನ್ಯತೆ ನೀಡಿದೆ’ ಎಂದು ಬಯೋಕಾನ್ ತಿಳಿಸಿದೆ.
ಮಾತ್ರೆಗಳು, ಕ್ಯಾಪ್ಸೂಲ್ಸ್ ಗಳ ಪ್ಯಾಕೇಜಿಂಗ್ ಸೇರಿದಂತೆ ಸಂಸ್ಥೆಯ ಉತ್ಪಾದನಾ ತಯಾರಿಕಾ ವ್ಯವಸ್ಥೆಗೆ ಇಂಗ್ಲೆಂಡಿನ ಆರೋಗ್ಯ ನಿಯಂತ್ರಣಾಲಯವು ಜಿಎಂಪಿ ಅನುಸರಣೆ ಪ್ರಮಾಣ ಪತ್ರ ನೀಡಿದೆ.
ಇದನ್ನೂ ಓದಿ :ರಫೇಲ್ ಖರೀದಿ ವೇಳೆ ಮಧ್ಯವರ್ತಿಗೆ ಹಣ ನೀಡಿಕೆ ಆರೋಪ : ವಿಚಾರಣೆಗೆ ಸುಪ್ರೀಂ ಅಸ್ತು
ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಪ್ರಯಾಣ ನಿರ್ಬಂಧವಿರುವುದರಿಂದ 2021ರ ಮಾರ್ಚ್ 22ರಂದು ಇಂಗ್ಲೆಂಡಿನ ತಜ್ಞರು ಲಂಡನ್ನಿನಿಂದಲೇ ವಿವಿಧ ಪರಿಶೀಲನೆ ನಡೆಸಿದ್ದರು.