ಮುಂಬೈ: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ಪತ್ನಿ ಅಂಜಲಿ ಜತೆಯಲ್ಲಿ ವಿಶ್ವದ ದಿಗ್ಗಜ ಉದ್ಯಮಿ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಅವರನ್ನು ಮುಂಬೈನಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಮಕ್ಕಳ ಆರೋಗ್ಯ ರಕ್ಷಣೆ ಸಂಬಂಧ ಶ್ರಮಿಸುತ್ತಿರುವ ಬಿಲ್‌ಗೇಟ್ಸ್ ಜತೆಗಿನ ಮಾತುಕತೆ ಅತ್ಯಂತ ಸಂತಸ ತಂದಿದೆ ಎಂದು ಸಚಿನ್ ಹೇಳಿಕೊಂಡಿದ್ದಾರೆ. ಅಲ್ಲದೇ ಬಿಲ್‌ಗೇಟ್ಸ್ ಜೊತೆಗಿರುವ ಫೋಟೋವನ್ನೂ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸಚಿನ್ ಬಿಲ್‌ಗೇಟ್ಸ್ ಅವರಿಗೆ ಧನ್ಯವಾದವನ್ನೂ ತಿಳಿಸಿದ್ದಾರೆ.
ಚಿತ್ರದ ಜೊತೆಗೆ ʻನಾವೆಲ್ಲರೂ ಜೀವನಕ್ಕಾಗಿ ಬದುಕುತ್ತಿರುವ ವಿದ್ಯಾರ್ಥಿಗಳು. ಇಂದು ನನಗೆ ನಮ್ಮ ಫೌಂಡೇಶನ್ ಕೆಲಸ ಮಾಡುವ ಮಕ್ಕಳ ಆರೋಗ್ಯ ಸೇರಿ ಹಲವು ವಿಚಾರಗಳ ಬಗ್ಗೆ ಕಲಿಯಲು ಇಂದು ಅಪೂರ್ವ ಅವಕಾಶ ಸಿಕ್ಕಿದೆ. ಕಲ್ಪನೆಗಳನ್ನು ಹಂಚಿಕೊಳ್ಳುವುದು ಪ್ರಪಂಚದ ಸವಾಲುಗಳನ್ನು ಪರಿಹರಿಸಿಕೊಳ್ಳಲು ಅತ್ಯಂತ ಬಲಿಷ್ಟ ಮಾರ್ಗವಾಗಿದೆ. ನಿಮ್ಮ ಒಳನೋಟಗಳಿಗೆ ನಾನು ಚಿರಋಣಿʼ ಎಂದು ಸಚಿನ್ ಬರೆದುಕೊಂಡಿದ್ದಾರೆ.
ಬಿಲ್ ಮತ್ತು ಮಿಲಿಂದಾ ಗೇಟ್ಸ್ ಫೌಂಡೇಶನ್ ವತಿಯಿಂದ ಈ ಸಭೆಯನ್ನು ಆಯೋಜಿಸಲಾಗಿದ್ದು, ಜಗತ್ತಿನಲ್ಲಿರುವ ಆರೋಗ್ಯ, ಬಡತನ ಮುಂತಾದ ಬೇರೆ ಬೇರೆ ಸಾಮಾಜಿಕ ಮತ್ತುಆರ್ಥಿಕ ವಿಷಯಗಳ ಮೇಲೆ ಬಿಲ್ ಮತ್ತು ಮಿಲಿಂದಾ ಗೇಟ್ಸ್ ಫೌಂಡೇಶನ್ ಕೆಲಸ ಮಾಡುತ್ತಿದೆ.
ಅಲ್ಲದೇ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನೂ ಬಿಲ್‌ಗೇಟ್ಸ್ ಭೇಟಿ ಮಾಡಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದರು. ಕೋವಿಟ್-19 ಬಳಿಕ ಬಿಲ್‌ಗೇಟ್ಸ್ ಅವರ ಮೊದಲ ಭಾರತ ಭೇಟಿ ಎಂಬ ಕಾರಣಕ್ಕೆ ಇದು ಪ್ರಾಮುಖ್ಯತೆ ಪಡೆದುಕೊಂಡಿದೆ.
ಇದನ್ನೂ ಓದಿ:
ಗಡ್ಡ ಮೀಸೆಗೆ ಕತ್ತರಿ… ಹೊಸ ಲುಕ್ ನೊಂದಿಗೆ ಕೇಂಬ್ರಿಡ್ಜ್ ವಿವಿಯಲ್ಲಿ ರಾಹುಲ್ ಉಪನ್ಯಾಸ