ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ವತಿಯಿಂದ ವೈದ್ಯಕೀಯ ಅತ್ಯಗತ್ಯ ಮತ್ತು ಹೆಲ್ತ್ ಮ್ಯಾನೇಜ್‌ಮೆಂಟ್ ಟ್ರೈನಿಂಗ್ ವಿಶೇಷ ಕಾರ್ಯಾಗಾರವು ಎ. 15ರಂದು ಅಪರಾಹ್ನ ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಭವನದಲ್ಲಿ ನಡೆಯಿತು.
ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಶಿಬಿರಕ್ಕೆ ಹೆಸರಾಂತ ವೈದ್ಯಾಧಿಕಾರಿ ಡಾ| ಸತೀಶ್‌ಶಂಕರ್ ಕಾಮತ್ ಸಚ್ಚರಿಪೇಟೆ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ದಂತ ವೈದ್ಯ ಡಾ| ಸತೀಶ್ ಎಂ. ಸನಿಲ್, ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ಭಾಸ್ಕರ ವಿ. ಬಂಗೇರ, ಶಂಕರ ಡಿ. ಪೂಜಾರಿ ಉಪಸ್ಥಿತರಿದ್ದರು.
ಆಧುನಿಕ ಜನತೆಯಲ್ಲಿ ಆತ್ಮವಿಶ್ವಾಸದ ಕೊರತೆಯಿಂದಾಗಿ ಆರೋಗ್ಯ ಹದಗೆಡುತ್ತಿದೆ. ಧಾವಂತದ ಬದುಕಿನಲ್ಲಿ ಆರೋಗ್ಯ ಸಂಪಾದನೆ ಅಸಾಧ್ಯವಾಗಿದ್ದು, ಆರೋಗ್ಯ ಕಾಳಜಿಯಿಂದ ಮಾತ್ರ ಸ್ವಾಸ್ಥ್ಯವನ್ನು ಹತೋಟಿಯಲ್ಲಿಡಲು ಸಾಧ್ಯ. ಇದರಿಂದ ಬದುಕು ಬಂಗಾರವಾಗುತ್ತದೆ. ಸೌಖ್ಯ ಚಿಂತನೆಗೆ ಇಂತಹ ಆರೋಗ್ಯ ಶಿಬಿರಗಳ ಅನುಭವಗಳು ಅವಶ್ಯ ಎಂದು ಡಾ| ಸತೀಶ್‌ಶಂಕರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ| ವಿಶ್ವನಾಥ ಕಾರ್ನಾಡ್, ಗೋಪಾಲ್ ಕಲ್ಯಾಣು³ರ್, ಮೋರ್ಲಾ ರತ್ನಾಕರ್ ಶೆಟ್ಟಿ, ರವಿರಾಜ್ ಕೆ. ಕಲ್ಯಾಣು³ರ್, ಗೌರವ ಜೊತೆ ಕಾರ್ಯದರ್ಶಿಗಳಾದ ಧನಂಜಯ ಎಸ್. ಕೋಟ್ಯಾನ್, ಪ್ರೇಮನಾಥ ಪಿ. ಕೋಟ್ಯಾನ್, ಗೌ| ಜೊತೆ ಕೋಶಾಧಿಕಾರಿಗಳಾದ ಸದಾಶಿವ ಎ. ಕರ್ಕೇರ, ರಾಜೇಶ್ ಜೆ. ಬಂಗೇರ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್, ಹರೀಶ್ ಜಿ. ಪೂಜಾರಿ, ಶೇಖರ್ ಸಾಲ್ಯಾನ್ ಸಾಂತಾಕ್ರೂಜ್, ರವೀಂದ್ರ ಎ. ಅಮೀನ್, ಬೇಬಿ ಎಸ್. ಕುಕ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಗುರು ನಾರಾಯಣ ರಾತ್ರಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ವಿಶ್ವನಾಥ್ ತೋನ್ಸೆ ಅತಿಥಿಗಳನ್ನು ಪರಿಚಯಿಸಿದರು. ಭಾಸ್ಕರ ವಿ. ಬಂಗೇರ ಅತಿಥಿಗಳನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.