ಮುಂಬಯಿ: ಸಂಕ್ರಾತಿ ಎಂದರೆ ಸೃಜನಶೀಲತೆಯ ಸಂಕೇತವಾಗಿದೆ. ಈ ಸಂಭ್ರಮ-ಸಡಗರವನ್ನು ಕವಿಕೂಟದೊಂದಿಗೆ ಸಂಭ್ರಮಿಸುವುದು ಅರ್ಥಪೂರ್ಣವಾಗಿದೆ. ಕವಿತೆ ಹೊರ ಬರುವುದೆಂದರೆ ಮರುಜೀವನ ಎಂದರ್ಥ. ತಮ್ಮೆಲ್ಲರ ಕವಿತಾರ್ಥಗಳು ಬದುಕಿನ ದೀಪ ಊರ್ಜಿತವಾಗಿಸುವಲ್ಲಿ ಸಹಕರಿಸಲಿ ಎಂದು ನಗರದ ಪ್ರಸಿದ್ಧ ಸಾಹಿತಿ ಮಿತ್ರಾ ವೆಂಕಟ್ರಾಜ್ ನುಡಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಜ. 14 ರಂದು ಸಂಜೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆದ ಮಕರ ಸಂಕ್ರಮಣ ನಿಮಿತ್ತ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಕವಿತೆಗಳು ಸರಳವಾಗಿ, ಓದುಗರನ್ನು ತತ್‌ಕ್ಷಣ ತಲುಪುವಂತಿರಬೇಕು. ಬದುಕಿಗೆ ದಾರಿ ತೋರಿಸುವ, ಸತ್ಯದ ಪಥದಲ್ಲಿ ನಡೆಯುವಂತಿರಬೇಕು. ಇಂದಿನ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲಾ ಕವಿಗಳೂ ಉತ್ತಮ ರೀತಿಯಲ್ಲಿ ಕವಿತೆಗಳನ್ನು ಮಂಡಿಸಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳು. ಅಸೋಸಿಯೇಶನ್‌ನ ಮಹಿಳಾ ವಿಭಾಗದ ಸಾಹಿತ್ಯ ಸೇವೆ ಇದೇ ರೀತಿಯಲ್ಲಿ ಮುಂದುವರಿಯಲಿ ಎಂದು ಆಶಿಸಿದರು.
ಸಾಹಿತಿ ಮಿತ್ರಾ ವೆಂಕಟ್ರಾಜ್ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರದ ಕವಿಗಳಾದ ಶಾರದಾ ಆನಂದ್ ಅಂಚನ್, ಲೀಲಾ ಗಣೇಶ್ ಕಾರ್ಕಳ, ಪ್ರೇಮಾ ಪೂಜಾರಿ, ಕುಸುಮಾ ಸಿ. ಅಮೀನ್, ವಾಣಿ ಪಿ. ಶೆಟ್ಟಿ, ಶಾರದಾ ಅಂಬೆಸಂಗೆ, ಡಾ| ರಜನಿ ವಿ. ವಿನಾಯಕ ಪೈ, ಲಲಿತಾ ಪ್ರಭು ಅಂಗಡಿ ಮತ್ತಿತರ ಕವಿಗಳು ಪಾಲ್ಗೊಂಡು ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಿದರು.
ಸಬಿತಾ ಜಿ. ಪೂಜಾರಿ ಮತ್ತು ಲತಾ ವಿ. ಬಂಗೇರ ಪ್ರಾರ್ಥನೆಗದರು. ಹೇಮಾ ಸದಾನಂದ್ ಅಮೀನ್ ಕವಯಿತ್ರಿಯರನ್ನು ಪರಿಚಯಿಸಿ, ಕವಿಗೋಷ್ಠಿ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಜಯಂತಿ ಎಸ್. ಕೋಟ್ಯಾನ್ ವಂದಿಸಿದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಸುಮಿತ್ರಾ ಎಸ್. ಬಂಗೇರ, ಜೊತೆ ಕಾರ್ಯದರ್ಶಿ ಜಯಂತಿ ಎಸ್. ಕೋಟ್ಯಾನ್, ಉಪ ಕಾರ್ಯಾಧ್ಯಕ್ಷೆಯರಾದ ಪ್ರಭಾ ಕೆ. ಬಂಗೇರ ಮತ್ತು ಗಿರಿಜಾ ಚಂದ್ರಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಕುಸುಮಾ ಅಮೀನ್, ಸದಸ್ಯೆಯರುಗಳಾದ ವಿಲಾಸಿನಿ ಕೆ. ಸಾಲ್ಯಾನ್, ರೇಖಾ ಸದಾನಂದ್, ಲಕ್ಷಿ¾à ಪೂಜಾರಿ, ರೋಹಿಣಿ ಎಸ್. ಪೂಜಾರಿ, ಪುಷ್ಪಾ ಎಸ್. ಅಮೀನ್, ಸುಜಾತಾ ಡಿ. ಪೂಜಾರಿ, ಜಲಜಾಕ್ಷಿ ಎನ್. ಪೂಜಾರಿ, ವಿಶೇಷ ಆಮಂತ್ರಿತ ಸದಸ್ಯೆಯರಾದ ಬಬಿತಾ ಜೆ. ಕೋಟ್ಯಾನ್, ಯಶೋದಾ ಎನ್. ಟಿ ಪೂಜಾರಿ, ಪೂಜಾ ಪುರುಷೋತ್ತಮ ಕೋಟ್ಯಾನ್, ಮೀರಾ ಡಿ. ಅಮೀನ್, ವನಿತಾ ಪೂಜಾರಿ, ವತ್ಸಲಾ ಕೆ. ಪೂಜಾರಿ, ಪ್ರೇಮಾ ಆರ್. ಕೋಟ್ಯಾನ್, ಭವಾನಿ ಸಿ. ಕೋಟ್ಯಾನ್, ಗಿರಿಜಾ ಬಿ. ಪೂಜಾರಿ, ಶಾಂತ ಬಿ. ಪೂಜಾರಿ, ಸುಮಲತಾ ವಿ. ಅಮೀನ್ ಸೇರಿದಂತೆ ಕೃಪಾ ಭೋಜ್‌ರಾಜ್ ಕುಳಾಯಿ, ಶ್ರೀಮಂತಿ ಎಸ್. ಪೂಜಾರಿ, ಲಕ್ಷ್ಮೀ ಎನ್. ಕೋಟ್ಯಾನ್, ಡಾ| ಗೀತಾಂಜಲಿ ಎಲ್. ಸಾಲ್ಯಾನ್, ಪ್ರಭಾ ಎನ್.ಪಿ. ಸುವರ್ಣ, ಮೋಹಿನಿ ವಿ. ಆರ್ ಕೋಟ್ಯಾನ್, ಸುಧಾ ಎಲ್. ಅಮೀನ್, ನೂರಾರು ಮಹಿಳೆಯರು ಉಪಸ್ಥಿತರಿದ್ದು ಸಹಕರಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್