Advertisement

ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ : ವಿಶ್ವ ರಂಗಭೂಮಿ ದಿನಾಚರಣೆ

02:37 PM Apr 05, 2019 | Team Udayavani |

ಮುಂಬಯಿ: ವಿಶ್ವ ರಂಗಭೂಮಿ ದಿನವನ್ನು ಇಂಟರ್‌ನ್ಯಾಶನಲ್‌ ಥಿಯೇಟರ್‌ ಇನ್‌ಸ್ಟಿಟ್ಯೂಟ್‌ 1961ರಲ್ಲಿ ಆಚರಿಸಲು ಆರಂಭಿಸಿತು. ವಿಶ್ವದೆಲ್ಲೆಡೆ ಈ ದಿನವನ್ನು ರಂಗ ಮಂದಿರ ಸಮುದಾಯಗಳು ತುಂಬಾ ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಮೀರಾರೋಡ್‌ ಪರಿಸರದಲ್ಲಿ ಇದೇ ಮೊದಲ ಬಾರಿಗೆ ವಿಶ್ವ ರಂಗಭೂಮಿ ದಿನವನ್ನು ಮಾ. 27ರಂದು ಆಚರಿಸಲಾಯಿತು. ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಸ್ಥಳೀಯ ಸಂಸ್ಥೆಯ ನಾಟಕ ಕಲಾವಿದರು ಇದರ ಆಯೋಜನೆಯನ್ನು ಮಾಡಿದರು.

Advertisement

ರಂಗನಟ, ಚಿತ್ರನಟ ಜಿ. ಕೆ. ಕೆಂಚನಕೆರೆ ಹಾಗೂ ಸ್ಥಳೀಯ ಕಚೇರಿಯ ಅಧ್ಯಕ್ಷರಾದ ವಿಶ್ವನಾಥ್‌ ಸಾಲ್ಯಾನ್‌ ನೇತೃತ್ವದಲ್ಲಿ ಒಂದು ಸಂವಾದ ಈ ಸಂದರ್ಭದಲ್ಲಿ ನೆರವೇರಿತು. ಉಪನ್ಯಾಸಕರಾಗಿ ಭಾಗವಹಿಸಿದ ಹಿರಿಯ ರಂಗತಜ್ಞ, ಕಲಾವಿದ ಗುಣಪಾಲ್‌ ಉಡುಪಿ ಅವರು ಮಾತನಾಡಿ, ಕಲೆ, ಸಂಗೀತ, ಅಭಿನಯ ಕಲೆ, ಸಾಹಿತ್ಯ, ಪ್ರದರ್ಶನಾಭ್ಯಾಸ, ನಿರ್ದೇಶನ, ಪ್ರೇಕ್ಷಕವರ್ಗ, ನಾಟಕ ಕಂಪೆನಿಗಳು, ಬೀದಿನಾಟಕ, ಜನಪದ ನಾಟಕ, ನವರಸಗಳು ಹಾಗೂ ನಟನ ಗುಣ ಲಕ್ಷಣಗಳು ಇವೆಲ್ಲ ವಿಷಯಗಳ ಬಗ್ಗೆ ಸವಿವರ ಮಾಹಿತಿಯನ್ನು ನೀಡಿದರು. ರಂಗ ಭೂಮಿಯ ಮೂಲಕ ಜಾಗತಿಕ ಶಾಂತಿ ಹಾಗೂ ಮಾನವೀಯ ಮೌಲ್ಯಗಳ ಕಾಪಾಡುವಿಕೆ ಆಗುತ್ತದೆ. ರಂಗ ಕಲೆಯ ಮೂಲ ಆಶಯ ಸಾಮಾಜಿಕ ಸ್ವಾಸ್ಥ್ಯವನ್ನು ರಕ್ಷಿಸುವುದು. ರಂಗ ಭೂಮಿ ಮನುಷ್ಯನ ಜೀವನವನ್ನು ಬೆಸೆಯುವ ಕಾರ್ಯ ಮಾಡುತ್ತದೆ ಎಂದು ನುಡಿದು, ತನ್ನ ರಂಗಭೂಮಿಯ ನಂಟನ್ನು ಹಂಚಿಕೊಂಡ ಜೆ. ಕೆ. ಕೆಂಚನಕೆರೆ ಅವರು, ಯಕ್ಷಗಾನದ ನಂಟಿನೊಂದಿಗೆ ನಾಟಕವು ಅವರನ್ನು ಅಪ್ಪಿಕೊಂಡ ಬಗೆಯನ್ನು ಭಾವಪರವಶತೆಯಿಂದ ವಿವರಿಸಿದರು. ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಸ್ಥಳೀಯ ಕಚೇರಿಯ ಕಲಾವಿದರ ನಾಟಕ ತಂಡ ಈಗಾಗಲೇ ಮುಂಬಯಿ ಮತ್ತು ಉಪನಗರಗಳಲ್ಲಿ ಅನೇಕ ತುಳು ಕನ್ನಡ ನಾಟಕ ಪ್ರದರ್ಶನಗಳನ್ನು ನೀಡಿ¨ªಾರೆ. ಅದರ ಕಲಾವಿದರಾದ ಸದಾನಂದ ಸಾಲ್ಯಾನ್‌ ಕಾಪು, ಲೀಲಾಧರ ಸನಿಲ್‌, ಶಿಲ್ಪಾ ಪೂಜಾರಿ, ಭಾ2ರತಿ ಅಂಚನ್‌, ಶಂಕರ್‌ ಎಲ್‌. ಪೂಜಾರಿ, ನಿತೇಶ್‌ ಪೂಜಾರಿ, ಶ್ರೇಯ ಸಾಲ್ಯಾನ್‌, ಜೀವನ್‌ ಅಮೀನ್‌ ಇವರು ರಂಗದೊಂದಿಗೆ ತಮ್ಮ ಸಂಬಂಧವನ್ನು ಸಭಿಕರ ಮುಂದೆ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಲೀಲಾ ಡಿ. ಪೂಜಾರಿ, ಕವಯತ್ರಿ ಲೀಲಾ ಗಣೇಶ್‌ ಕಾರ್ಕಳ, ಸುಜಾತಾ ಕೋಟ್ಯಾನ್‌, ಅಶೋಕ ವಳದೂರು ಉಪಸ್ಥಿತರಿದ್ದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ತುಳು ಕನ್ನಡ ವೆಲ್ಫೆàರ್‌ ಅಸೋಸಿಯೇಶನ್‌ ಅಧ್ಯಕ್ಷರಾದ ಎ. ಕೆ. ಹರೀಶ್‌, ಶೋಭಾ ಶೆಟ್ಟಿ, ಸುರೇಖಾ ಪೂಜಾರಿ ಹಾಗೂ ರಂಗದ ಆಸಕ್ತಿಯನ್ನು ಹೊಂದಿದ ಅನೇಕ ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಿ. ಕೆ. ಕೆಂಚನಕೆರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next