ನವಿಮುಂಬಯಿ: ಇಂದಿನ ಆಧುನಿಕ ಮೊಬೈಲ್ ಯುಗದಲ್ಲಿ ಶಿಕ್ಷಣ ಅತೀ ಮುಖ್ಯವಾಗಿದೆ. ಇಂದಿನ ಮಕ್ಕಳಲ್ಲಿ ಮಾನವೀಯತೆಯ ಬಗ್ಗೆ ಪಾಲಕರು ತಿಳಿಸಿ ಅವರನ್ನು ವಿದ್ಯಾವಂತರನ್ನಾಗಿಸಬೇಕು. ವಿದ್ಯೆಯೊಂದಿಗೆ ದೊಡ್ಡವರಿಗೆ ಗೌರವ ಕೊಡುವುದು ಸಂಸ್ಕಾರ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಆದರ್ಶ ಪ್ರಜೆಗಳಾಗಿ ಮಕ್ಕಳು ಬೆಳೆಯಬೇಕು ಎಂದು ನೆರೂಲ್ ಶನಿಮಂದಿರದ ಧರ್ಮದರ್ಶಿ ಹಾಗು ಬಿಲ್ಲವರ ಅಸೋಸಿಯೇಶನ್ ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ ನುಡಿದರು.
ಜು. 15 ರಂದು ಸಂಜೆ ರಾಯಗಡ ಜಿÇÉೆಯ ರಾಸಾಯನಿ ಅಯ್ಯಪ್ಪ ಸ್ವಾಮಿಯ ವೇದಿಕೆಯಲ್ಲಿ ಬಿಲ್ಲವರ ಅಸೋಸಿಯೇಶನ್ ರಾಸಾಯನಿ ವಲಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳು ಶಿಕ್ಷಣದೊಂದಿಗೆ ಉನ್ನತ ಹುದ್ಧೆಯನ್ನು ಅಲಂಕರಿಸಿ ಭವಿಷ್ಯದಲ್ಲಿ ಸಂಘ-ಸಂಸ್ಥೆಗಳ ಋಣ ತೀರಿಸುವ ಕಾಯಕದಲ್ಲಿ ತೊಡಗಬೇಕು ಎಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಸರಳಾ ನಾಗೇಶ್ ಸುವರ್ಣ ದಂಪತಿ ಉಪಸ್ಥಿತರಿದ್ದರು. ರಾಸಾಯನಿ ಪರಿಸರದ 40 ಮಕ್ಕಳಿಗೆ ಅತಿಥಿ ಕೊಡೆ ವಿತರಿಸಲಾಯಿತು. ಎಸ್‌ಎಸ್‌ಸಿ, ಎಚ್‌ಎಸ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತರಾದ ನಿಶಾಂತ್ ಜೆ. ಪೂಜಾರಿ ಮತ್ತು ಶ್ರೇಯಸ್ ಸಾಲ್ಯಾನ್ ಇವರನ್ನು ನಗದು ಪುರಸ್ಕಾರ ದೊಂದಿಗೆ ಗೌರವಿಸಲಾಯಿತು. ಶ್ವೇತಾ ಪೂಜಾರಿ ಸ್ವಾಗತಿಸಿದರು.
ವಿದ್ಯಾರ್ಥಿಗಳ ಯಾದಿಯನ್ನು ಜಯರಾಮ್ ಕೆ. ಪೂಜಾರಿ ಓದಿದರು. ವೇದಿಕೆಯಲ್ಲಿ ನೆರೂಲ್ ಶ್ರೀ ಶನಿಮಂದಿರದ ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ, ಯಾದವ್ ಸುವರ್ಣ, ಪ್ರಕಾಶ್ ಪೂಜಾರಿ, ಆನಂದ್ ಪೂಜಾರಿ, ಸುಧಾಕರ ಪೂಜಾರಿ, ಅಶೋಕ್ ಪೂಜಾರಿ, ಸುಧಾಕರ ಸಾಲ್ಯಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ವಿಗೆ ಪಡೀಲ್ ಯಾಧವ್ ಸುವರ್ಣ ಹಾಗು ಪದ್ಮನಾಭ ಪೂಜಾರಿ ಶ್ರಮಿಸಿದರು. ಜಯರಾಮ್ ಕೆ. ಪೂಜಾರಿ ಮತ್ತು ಸುಧಾಕರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ಪೂಜಾರಿ ವಂದಿಸಿದರು.
ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.