ಮುಂಬಯಿ: ಸ್ವಜಾತಿಯ ಸಂಘಟನೆಗೈದು ಭವನ ರಚಿಸಿ ಸಮಾಜವನ್ನು ಒಗ್ಗೂಡಿಸಿ ಮಹಿಳೆಯನ್ನೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರಮಿಸಿದ ಜಯ ಸಿ. ಸುವರ್ಣರ ಸೇವೆ ಅನನ್ಯ. ಮಹಿಳೆ ಯರು ಸುಸಂಸ್ಕೃತ ವಿಚಾರ ಧಾರೆಯುಳ್ಳವರಾಗಿ ಸಂಸಾರ ಮತ್ತು ಸಮಾಜವನ್ನು ಸುಗಮವಾಗಿ ಸಾಗಿಸಬೇಕು. ಆವಾಗಲೇ ಮಹಿಳೆಯ ಜೀವನ ಸಾರ್ಥಕವಾಗುತ್ತದೆ. ಭೂ ಲೋಕದಲ್ಲಿ ಪ್ರತ್ಯಕ್ಷವಾಗಿ ಕಾಣುವ ದೇವರೇ ಸೂರ್ಯ. ಜಾತಿ ಭೇದ ತೋರದೆ ಭೂಮಿಗೆ ಪ್ರಕಾಶಮಾನ ವಾಗಿ ಜೀವ ಸಂಕುಲವನ್ನು ಬೆಳಗಿಸುವ ಸೂರ್ಯ ದೇವರೇ ನಮ್ಮ ಬದುಕಿನ ಕಣ್ಣಾಗಿದ್ದಾರೆ. ಧನುರಾಶಿಯಿಂದ ಮಕರ ರಾಶಿಯತ್ತ ಪಯಣಿಸುವ ಕಾಲಘಟ್ಟದ ಸಂಭ್ರಮಯುತ ಸಂಕ್ರಾಂತಿ ಪುಣ್ಯಾಧಿಯಾಗಿದ್ದು ಇದು ಉತ್ತರೋತ್ತರ ಆಭಿವೃದ್ಧಿಯ ಸಂಕೇತ ವಾಗಿದೆ. ಆದ್ದರಿಂದಲೇ ಮಕರ ಸಂಕ್ರಮಣ ಪವಿತ್ರ ಕಾಲವಾಗಿ ಶಾಸ್ತ್ರಾನು ಸಾರ ಪುಣ್ಯಾಧಿಯಾಗಿದೆ ಎಂದು ರಕ್ಷಣಾ ಇಲಾಖೆಯ ನಿವೃತ್ತ ಅಧಿಕಾರಿ, ಸಮಾಜ ಸೇವಕಿ ನಳಿನಾ ಎಸ್. ಸಾಲ್ಯಾನ್ ನುಡಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಜ. 14 ರಂದು ಸಂಜೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆದ ವಾರ್ಷಿಕ ಮಕರ ಸಂಕ್ರಮಣ ಮತ್ತು ಅರಸಿನ ಕುಂಕುಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ವಿಭಾಗಕ್ಕೆ ಶುಭಹಾರೈಸಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಭವ್ಯ ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಸಮಾಜ ಸೇವಕಿ ಜಯಲಕ್ಷಿ¾à ಚಂದ್ರಶೇಖರ್ ಪೂಜಾರಿ ಮತ್ತು ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆಯರಾದ ಪ್ರಭಾ ಕೆ. ಬಂಗೇರ ಮತ್ತು ಗಿರಿಜಾ ಚಂದ್ರಶೇಖರ್ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಪದಾಧಿಕಾರಿಗಳು, ಅತಿಥಿಗಳನ್ನೊಳಗೊಂಡು ಕಾರ್ಯಾ ಧ್ಯಕ್ಷೆ ಜಯಂತಿ ವಿ. ಉಳ್ಳಾಲ್ ಭವ ನದಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪೂಜೆ ನೆರವೇರಿಸಿ ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಯಂತಿ ವಿ. ಉಳ್ಳಾಲ್ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸುಮಿತ್ರಾ ಎಸ್. ಬಂಗೇರ ಅತಿಥಿಗಳನ್ನು ಪರಿಚ ಯಿಸಿ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ಜೊತೆ ಕಾರ್ಯದರ್ಶಿ ಜಯಂತಿ ಎಸ್. ಕೋಟ್ಯಾನ್ ವಂದಿಸಿದರು.
ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಕುಸುಮಾ ಅಮೀನ್, ಸದಸ್ಯೆಯರುಗಳಾದ ವಿಲಾಸಿನಿ ಕೆ. ಸಾಲ್ಯಾನ್, ರೇಖಾ ಸದಾನಂದ್, ಲಕ್ಷಿ¾à ಪೂಜಾರಿ, ರೋಹಿಣಿ ಎಸ್. ಪೂಜಾರಿ, ಪುಷ್ಪಾ ಎಸ್. ಅಮೀನ್, ಸುಜಾತಾ ಡಿ. ಪೂಜಾರಿ, ಜಲಜಾಕ್ಷಿ ಎನ್. ಪೂಜಾರಿ, ವಿಶೇಷ ಆಮಂತ್ರಿತ ಸದಸ್ಯೆಯರಾದ ಬಬಿತಾ ಜೆ. ಕೋಟ್ಯಾನ್, ಯಶೋದಾ ಎನ್. ಟಿ ಪೂಜಾರಿ, ಪೂಜಾ ಪುರುಷೋತ್ತಮ ಕೋಟ್ಯಾನ್, ಮೀರಾ ಡಿ. ಅಮೀನ್, ವನಿತಾ ಪೂಜಾರಿ, ವತ್ಸಲಾ ಕೆ. ಪೂಜಾರಿ, ಪ್ರೇಮಾ ಆರ್. ಕೋಟ್ಯಾನ್, ಭವಾನಿ ಸಿ. ಕೋಟ್ಯಾನ್, ಗಿರಿಜಾ ಬಿ. ಪೂಜಾರಿ, ಶಾಂತಾ ಬಿ. ಪೂಜಾರಿ, ಸುಮಲತಾ ವಿ. ಅಮೀನ್ ಸೇರಿದಂತೆ ಕೃಪಾ ಭೋಜ್‌ರಾಜ್ ಕುಳಾಯಿ, ಶ್ರೀಮಂತಿ ಎಸ್. ಪೂಜಾರಿ, ಲಕ್ಷ್ಮೀ ಎನ್. ಕೋಟ್ಯಾನ್, ಡಾ| ಗೀತಾಂಜಲಿ ಎಲ್. ಸಾಲ್ಯಾನ್, ಪ್ರಭಾ ಎನ್.ಪಿ. ಸುವರ್ಣ, ಮೋಹಿನಿ ವಿ. ಆರ್. ಕೋಟ್ಯಾನ್, ಸುಧಾ ಎಲ್. ಅಮೀನ್, ನೂರಾರು ಮಹಿಳೆಯರು ಉಪಸ್ಥಿತರಿದ್ದು, ಅರಸಿನ ಕುಂಕುಮ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಮಹಿಳೆಯರು ನಕ್ಕರೆ ಸಮಾಜವೇ ಸಮಾಧಾನ ಪಡುತ್ತದೆ. ಆದ್ದರಿಂದ ಮಕರ ಸಂಕ್ರಾಂತಿ ಪರ್ವಕಾಲದಲ್ಲಿ ಮಹಿಳೆಯರ ಮುಖದಲ್ಲಿ ನಗು ಕಾಣಬೇಕು. ಅದೇ ನಮ್ಮ ಧ್ಯೇಯೋದ್ದೇಶದಲ್ಲಿ ಒಂದಾಗಿದೆ. ಮಹಿಳಾ ಪ್ರಧಾನ ಸಮಾಜದಲ್ಲಿ ಮಹಿಳೆಯ ನಗು ಸಮಾಜವನ್ನು ಜೀವಂತವಾಗಿಸುತ್ತದೆ. ಇಂತಹ ಆನಂದದಾಯಕ ಸಡಗರದಲ್ಲಿ ಸಂತೋಷ ಹೊರ ಚಿಮ್ಮಿಸಿದಾಗ ನೆಮ್ಮದಿ ತನ್ನಿಂದ ತಾನೇ ಫಲಿಸಿ ಮಾಡಿದ ಕೆಲಸವೂ ಫಲವತ್ತಾಗುವುದು. ಕವಿತೆಯಿಂದ ಭಾಷೆಯ ಸೊಬಗು ಹೆಚ್ಚುತ್ತದೆ. ಕವನ ಜೀವನವಾದಾಗ ಸಮೃದ್ಧಿಯ ಬದುಕು ಪ್ರಾಪ್ತಿಸುವುದು. ಆದ್ದರಿಂದ ಜೀವನವನ್ನು ಕವಿತೆಯಾಗಿಸಿಕೊಂಡು ಬದುಕನ್ನು ಸಾರ್ಥಕಗೊಳಿಸೋಣ.
ಚಂದ್ರಶೇಖರ್ ಪೂಜಾರಿ, ಅಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್ ಮುಂಬಯಿ
ವರದಿ-ಚಿತ್ರ: ರೋನ್ಸ್ ಬಂಟ್ವಾಳ್