ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಿಲ್ಲವ ಯುವಕರು ಒಂದಲ್ಲ ಒಂದು ಕಾರಣಕ್ಕೆ ಕೊಲೆಯಾ
ಗುತ್ತಿರುವುದು ಅಥವಾ ಕೊಲೆ ಆಪಾದನೆ ಎದುರಿಸುತ್ತಿರು ವುದು ದುರಂತ ಎಂದು ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ
ಎಂ.ವೇದಕುಮಾರ್ ಬೇಸರ ವ್ಯಕ್ತಪಡಿಸಿದರು.
ಅಸೋಸಿಯೇಷನ್ ವತಿಯಿಂದ ಭಾನುವಾರ ನಗರದ ಬಿಲ್ಲವ ಭವನದಲ್ಲಿ ಆಯೋಜಿಸಿದ್ದ ಬಿಲ್ಲವ ವೃತ್ತಿಪರರ
ಸಮಾವೇಶ “ಸ್ಪಾರ್ಕ್ 2018’ರಲ್ಲಿ ಮಾತನಾಡಿದ ಅವರು, ಬಿಲ್ಲವ ಸಮುದಾ ಯದ ಯುವಕರು ಬೇರೆಯವರ ಕುಮ್ಮಕ್ಕಿನಿಂದ ಕೊಲೆಯಾ ಗುವುದಾಗಲಿ ಅಥವಾ ಕೊಲೆ ಮಾಡು ವುದಾಗಲಿ ಮಾಡಬಾರದು ಎಂದು ಮನವಿ ಮಾಡಿದರು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕಾಫಿಡೇ ಅಧ್ಯಕ್ಷ ಸದಾನಂದ ಪೂಜಾರಿ, ಉನ್ನತ ಗುರಿಯೊಂದಿಗೆ ಕಠಿಣ ಪರಿಶ್ರಮ ಹಾಕಿದರೆ, ಪ್ರತಿಯೊಬ್ಬರೂ ಯಶಸ್ಸು ಸಾಧಿಸಬಹುದಾಗಿದ್ದು, ಆ ನಿಟ್ಟಿನಲ್ಲಿ ಯುವಕರು ಗುರಿಯ ಸಾಧನೆಗಾಗಿ ಪರಿಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು. ಪ್ರೊಬೆಷನರಿ ಕೆಎಎಸ್ ಅಧಿಕಾರಿ ಅಜಯ್ ವಿಠಲಾಕ್ಷ ಮಾತನಾಡಿದರು. ರಾಷ್ಟ್ರೀಯ ನೆಟ್‌ಬಾಲ್ ಆಟಗಾರ ನಿತಿನ್ ವಿಟ್ಲ ಅವರನ್ನು ಸನ್ಮಾನಿಸ ಲಾಯಿತು. ಜತೆಗೆ 600ಕ್ಕೂ ಹೆಚ್ಚು ವೃತ್ತಿಪರರು ಸಮಾವೇಶದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಮಲ್ಲಿಕ್ ಎಂಜಿನಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಚಂದನ್ ಬಿಲ್ಲವ, ಚಿತ್ರನಟಿ ಕುಮಾರಿ ನಿಶ್ಮಿತಾ ಬಾಲಕೃಷ್ಣ, ಚಾರ್ಟರ್ಡ್ ಅಕೌಂಟೆಂಟ್ ನಂಜುಂಡ, ವಿದ್ಯಾಧರ್, ವಿಜಯಕೃಷ್ಣ, ಸ್ಪಾರ್ಕ್ ಸಮಿತಿ ಅಧ್ಯಕ್ಷ ಅಶ್ವಿತ್ ಕುಮಾರ್ ಬಂಗೇರ ಸೇರಿ ಪ್ರಮುಖರು ಹಾಜರಿದ್ದರು.