ಮುಂಬಯಿ: ಬಿಲ್ಲವ ಸಮುದಾಯ ಹಿರಿಯ ಧುರೀಣ, ಮುಂಬಯಿ ಮಹಾನಗರದ ಹಿರಿಯ ಹೊಟೇಲ್ ಉದ್ಯಮಿಯಾಗಿ ಭಾರತ್ ಬ್ಯಾಂಕ್‌ನ ಮಾಜಿ ಕಾರ್ಯಾಧ್ಯಕ್ಷರಾಗಿ ಬಹು ಎತ್ತರದ ವ್ಯಕ್ತಿತ್ವ ಹೊಂದಿ, ಬಿಲ್ಲವ ಕುಲರತ್ನ ಹಾಗೂ ತುಳುನಾಡ ಮಾಣಿಕ್ಯ ಬಿರುದಾಂಕಿತರಾಗಿ ಜೇಷ್ಠ ಸಮಾಜ ಸೇವೆಗೈದು ಇತ್ತೀಚೆಗೆ ಸ್ವರ್ಗಸ್ಥರಾದ ಬಿಲ್ಲವ ಶಿರೋಮಣಿ ಸೂರು ಸಿ. ಕರ್ಕೇರ ಅವರಿಗೆ ನ. 13 ರಂದು ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು.
ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್‌ನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನೆರೆದಿದ್ದ ಮಹಾನಗರದ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಸ್ವರ್ಗಸ್ಥರ ಬಂಧು-ಮಿತ್ರರು, ಹಿತೈಷಿಗಳು, ಸೂರು ಕರ್ಕೇರ ಅವರ ಭಾವಚಿತ್ರಕ್ಕೆ ಪುಷ್ಪಗವೃಷ್ಠಿಗೈದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಸೂರು ಸಿ. ಕರ್ಕೇರ ಅವರು ಆಪ್ತರು, ಕರ್ನಾಟಕ ರಾಜ್ಯದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು ನುಡಿನಮನ ಸಲ್ಲಿಸಿ ಮಾತನಾಡಿ, ಸೂರು ಸಿ. ಕರ್ಕೇರರು ಸ್ನೇಹಜೀವಿ ಯಾಗಿದ್ದರು ಎಂದು ನುಡಿದು, ತಮ್ಮಿಬ್ಬರ ನಿಕಟ ಸಂಬಂಧವನ್ನು ಮೆಲುಕು ಹಾಕಿದರು. ಜನಸಾಮಾನ್ಯರನ್ನೂ ಜನಮಾನ್ಯರಾಗಿರಿಸಿ ಸದಾ ನಗುಮೊಗದಿಂದ ಸರ್ವರನ್ನೂ ಬಂಧು ಗಳನ್ನಾಗಿಯೇ ಕಂಡುಕೊಂಡ ಅನನ್ಯ ಸದ್ಗುಣ ವಂತರಾಗಿದ್ದರು. ಮಹಾನಗರದ ಹೊಟೇಲ್ ರಂಗಕ್ಕೆ ಹೊಸ ಆಯಾಮವನ್ನೇ ನೀಡಿದ ದೂರದಷ್ಟಿತ್ವದ ಚಿಂತನೆಯ ವ್ಯಕ್ತಿತ್ವದ ಕರ್ಕೇರರ ವೃತ್ತಿನಿಷ್ಠೆ, ಸೇವಾತಾತ್ಪರತೆ ಅನನ್ಯವಾಗಿತ್ತು. ಜನಪರ ಕಾಳಜಿವುಳ್ಳ ಅವರು ಹೊಟೇಲ್ ಉದ್ಯಮ ಮತ್ತು ಸ್ವಸಮಾಜದ ಘನತೆಯನ್ನೂ ಪ್ರತಿಷ್ಠಿತವಾಗಿರಿಸಿದರು ಇಂತಹ ಅಸಮಾನ್ಯ ಸಾರ್ಥಕ, ಪರಿಪೂರ್ಣತೆಯ ಬದುಕು ರೂಪಿಸಿದ ಕರ್ಕೇರರು ದೈಹಿಕವಾಗಿ ನಮ್ಮನ್ನಗಲಿದರೂ ಅವರ ಸಮಾಜಮುಖೀ ಸೇವೆಗಳಿಂದ ನಮ್ಮೆಲ್ಲರಲ್ಲೂ ಸದಾ ಶಾಶ್ವತವಾಗಿ ಉಳಿಯಲಿದ್ದಾರೆ ಎಂದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ, ಪಿ. ವಿ. ಭಾಸ್ಕರ್, ಲೀಲಾಧರ ಶೆಟ್ಟಿ, ಸದಾಶಿವ ಎ. ಕರ್ಕೇರ, ಮೃತರ ಮೊಮ್ಮಕ್ಕಳಾದ ಮಾ| ರಿನವ್ ಎಂ. ಕರ್ಕೇರ, ಕು| ರಿದ್ಧಿ ಕರ್ಕೇರ ಅವರು ಮಾತನಾಡಿ ನುಡಿನಮನ ಸಲ್ಲಿಸಿದರು. ನಿತ್ಯಾನಂದ ಡಿ.ಕೋಟ್ಯಾನ್ ಅವರು ಸೂರು ಸಿ. ಕರ್ಕೇರ ಅವರ ಜೀವನ ಪಯಣ, ಬದುಕು ವೈಶಿಷ್ಟ¤ತೆಯನ್ನು ಬಣ್ಣಿಸಿ ಸಂತಾಪ ಸಭೆಯನ್ನು ನಿರ್ವಹಿಸಿದರು. ಗಾಯಕ ಗಣೇಶ್ ಎರ್ಮಾಳ್ ಮತ್ತು ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ಮೃತರ ಧರ್ಮಪತ್ನಿ, ಭಾರತ್ ಬ್ಯಾಂಕಿನ ನಿರ್ದೇಶಕಿ ಶಾರದಾ ಎಸ್. ಕರ್ಕೇರ, ಸುಪುತ್ರರಾದ ಬಿಸಿಸಿಐ ನಿರ್ದೇಶಕ ಮಹೇಶ್ ಎಸ್. ಕರ್ಕೇರ, ಚಂದ್ರಶೇಖರ್ ಎಸ್. ಕರ್ಕೇರ, ಸುಪುತ್ರಿ ಸ್ವಪ್ನಾ ಎಸ್. ಕರ್ಕೇರ, ರಶ್ಮೀ ಎಂ. ಕರ್ಕೇರ, ವಿಕ್ಕೀ ಅಹುಜಾ, ಸಹೋದರಿ ಕಲ್ಯಾಣಿ ಪೂಜಾರಿ, ಕೃಷ್ಣಪ್ಪ ಕರ್ಕೇರ, ಉಮೇಶ್ ಕರ್ಕೇರ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ದೇವೇಂದ್ರ ವಿ. ಬಂಗೇರ ಖಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಗರದ ವಿವಿಧ ಜಾತೀಯ, ತುಳು-ಕನ್ನಡಪರ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಕ್ಷೇತ್ರಗಳ ಗಣ್ಯರು, ಹಿತೈಷಿಗಳು, ಭಾರತ್ ಬ್ಯಾಂಕಿನ ನಿರ್ದೇಶಕರು, ಉನ್ನತಾಧಿಕಾರಿಗಳು, ಬಿಲ್ಲವರ ಅಸೋ¬. ಮುಂಬಯಿ ಪದಾಧಿ ಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಸ್ಥಳೀಯ ಸಮಿತಿ ಮತ್ತು ಕಚೇರಿಗಳ ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು, ಕಾರ್ಯ ಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾ ಗದವರು, ಸಮಾಜ ಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೂರು ಸಿ. ಕರ್ಕೇರ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ನಮನ ಸಲ್ಲಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್