Advertisement
ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಶೇ ಖರ ಎಸ್.ಪೂಜಾರಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾರಿಗೂ ಪದಾಧಿಕಾರಿಯಾಗುವ ಅವಕಾಶ ಸಿಕ್ಕಿಲ್ಲ ಎಂದು ಬೇಸರಿಸಬಾರದು. ಅವಕಾಶ ವಂಚಿತರಿಗೆ ಸ್ಥಳಿಯ ಸಮಿತಿಗಳ ಮೂಲಕ ದಕ್ಷ ಸೇವೆ ಸಲ್ಲಿ ಸುವ ಅವಕಾಶ ಒದಗಿಸಲಾಗುವುದು. ಇದು ನಮ್ಮನಿಮ್ಮೆಲ್ಲರ ಸಂಸ್ಥೆಯಾಗಿದ್ದು, ಎಲ್ಲರೂ ಒಗ್ಗೂಡಿ ಸಂಸ್ಥೆಯನ್ನು ಐಕ್ಯಮತದಿಂದ ಬೆಳೆಸಬೇಕಾಗಿದೆ ಎಂದು ನುಡಿದು, ನೂತನ ಪದಾಧಿಕಾರಿಗಳನ್ನು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿ ಶುಭಹಾರೈಸಿದರು.
Related Articles
Advertisement
ಕಾರ್ಯಕ್ರಮದಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಶಂಕರ ಡಿ. ಪೂಜಾರಿ, ಹರೀಶ್ ಜಿ. ಅಮೀನ್, ದಯಾನಂದ್ ಆರ್. ಪೂಜಾರಿ ಕಲ್ವಾ, ಶ್ರೀನಿವಾಸ ಆರ್. ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಗೌರವ ಜೊತೆ ಕಾರ್ಯದರ್ಶಿ ಧರ್ಮೇಶ್ ಎಸ್. ಸಾಲ್ಯಾನ್, ಜೊತೆ ಕೋಶಾಧಿ ಕಾರಿಗಳಾದ ಮೋಹನ್ ಡಿ. ಪೂಜಾರಿ, ಸದಾಶಿವ ಎ. ಕರ್ಕೇರ, ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್ ಎನ್. ಕೋಟ್ಯಾನ್, ಸೇವಾದಳದ ದಳಪತಿ ಗಣೇಶ್ ಜಿ. ಪೂಜಾರಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಧರ್ಮಪಾಲ ಜಿ. ಅಂಚನ್, ಮಹೇಶ್ ಸಿ. ಪೂಜಾರಿ, ನಿಲೇಶ್ ಪೂಜಾರಿ ಪಲಿಮಾರು, ಮಾಜಿ ಅಧ್ಯಕ್ಷರುಗಳಾದ ವರದ ಉಳ್ಳಾಲ್, ಎಲ್. ವಿ. ಅಮೀನ್, ಭಾರತ್ ಬ್ಯಾಂಕ್‌ನ ನಿರ್ದೇಶಕ ಗಂಗಾಧರ್ ಜೆ. ಪೂಜಾರಿ, ರಾಜಾ ವಿ. ಸಾಲ್ಯಾನ್, ಪುರುಷೋತ್ತಮ ಎಸ್. ಕೋಟ್ಯಾನ್, ರವೀಂದ್ರ ಎ. ಅಮೀನ್, ಆನಂದ ಪೂಜಾರಿ, ಹರೀಶ್ ಜಿ. ಕೊಕ್ಕರ್ಣೆ, ವಿಶ್ವನಾಥ ಆರ್. ತೋನ್ಸೆ, ಉಮೇಶ್ ಎನ್. ಕೋಟ್ಯಾನ್, ಸೇರಿದಂತೆ ಹಾಲಿ ಮತ್ತು ನಿರ್ಗಮನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಮಹಳಾ ವಿಭಾಗದ ಅಧ್ಯಕ್ಷೆ ಜಯಂತಿ ವಿ. ಉಳ್ಳಾಲ್ ಸ್ವಾಗತಿಸಿದರು. ಉಮಾ ಯಾದವ್ ಬಂಗೇರ ಪ್ರಾರ್ಥನೆ ಹಾಡಿದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್. ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ವಿಭಾಗದ ಪದಾಧಿಕಾರಿಗಳ ಯಾದಿಯನ್ನು ಪ್ರಕಟಿಸಿ ಪ್ರತಿಜ್ಞಾ ವಿಧಿ-ವಿಧಾನಗಳನ್ನು ಬೋಧಿಸಿದರು. ಗೌರವ ಕಾರ್ಯದರ್ಶಿ ಸುಮಿತ್ರಾ ಎಸ್. ಬಂಗೇರ ಗತ ಮೂರು ಅವಧಿಗಳ ವರದಿ ವಾಚಿಸಿ ವಂದಿಸಿದರು.
ಚಿತ್ರ -ವರದಿ: ರೋನ್ಸ್ ಬಂಟ್ವಾಳ್