ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಮಾ. 4ರಂದು ಮಹಾ ಶಿವರಾತ್ರಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಪುರೋಹಿತ ಐತಪ್ಪ ಸುವರ್ಣ ಮತ್ತು ಇತರರು ಗುರು ಮಂಟಪ ವನ್ನು ಅಲಂಕರಿಸಿ ಪೂಜಾವಿಧಿ ವಿಧಾನಗಳನ್ನು ನೆರವೇರಿಸಿದರು.
ಸಂಜೆ 6ರಿಂದ ರಾತ್ರಿ 8ರ ತನಕ ವಿಶೇಷ ಭಜನಾ ಕಾರ್ಯಕ್ರಮದ ಅನಂತರ ಮಹಾಮಂಗಳಾರತಿ ಜರಗಿತು.
ಟಿ. ಕೆ. ಕೋಟ್ಯಾನ್ ದಂಪತಿಯು ಪ್ರಸಾದ ರೂಪದಲ್ಲಿ ಲಡ್ಡxನ್ನು ಪ್ರಾಯೋಜಿಸಿದರು. ಮಾಸ್ಟರ್ ತ್ರಿಷಾ ರಾಮಚಂದ್ರ ಬಂಗೇರ ಮತ್ತು ಪರಿವಾರ, ಕುಶಾ ರವಿ ಸನಿಲ… ದಂಪತಿ, ನಾರಾಯಣ ಕುಕ್ಯಾನ್ ದಂಪತಿ, ಹೇಮಾ ದೇವರಾಜ್, ಗಿರಿಜಾ ಪಾಲನ್, ಜಯರಾಮ ಕುಕ್ಯಾನ್ ಹಾಗೂ ಭಕ್ತಾದಿಗಳು ವಿಶೇಷ ಪೂಜೆ ನೀಡಿ ಸಹಕರಿಸಿದರು. ಪುರೋಹಿತ ವಿಶ್ವನಾಥ್ ಆಮೀನ್ ಪ್ರಾರ್ಥನೆಗೈದರು.
ಮಾಜಿ ಕಾರ್ಯಾಧ್ಯಕ್ಷ ರವಿ ಎಸ್. ಸನಿಲ್ ಅವರು ಮಹಾಶಿವರಾತ್ರಿಯ ವಿಶೇಷತೆಯನ್ನು ತಿಳಿಸಿದರು. ಬಿಲ್ಲವರ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಸಿ. ಟಿ. ಸಾಲ್ಯಾನ್ ಉಪಸ್ಥಿತಿಯಲ್ಲಿ ಡೊಂಬಿವಲಿ ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಸಿ. ಎನ್. ಕರ್ಕೇರ, ಕಾರ್ಯಧ್ಯಕ್ಷ ದೇವರಾಜ ಪೂಜಾರಿ, ಉಪ ಕಾರ್ಯಾಧ್ಯಕ್ಷ ಚಂದ್ರಹಾಸ್ ಎಸ್. ಪಾಲನ್, ಗೌರವ ಕಾರ್ಯದರ್ಶಿ ಪುರಂದರ ಪೂಜಾರಿ, ಸಹ ಕಾರ್ಯದರ್ಶಿ ವಿಟuಲ್ ಅಮೀನ್, ಕೋಶಾಧಿಕಾರಿ ಸುನೀಲ್ ಸಾಲ್ಯಾನ್, ಮಂಜಪ್ಪ ಪೂಜಾರಿ, ಜಗನ್ನಾಥ ಸನೀಲ್, ಸೋಮನಾಥ್ ಪೂಜಾರಿ ಹಾಗೂ ಸಮಿತಿಯ ಇತರ ಸದಸ್ಯರು, ಸ್ಥಳೀಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಹಾಗೂ ಯುವಾಭ್ಯುದಯ ಉಪ ಸಮಿತಿ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.