ಮುಂಬಯಿ: ಬಿಲ್ಲವರಅಸೋಸಿಯೇಶನ್‌ನ ಗೋರೆಗಾಂವ್ ಸ್ಥಳೀಯ ಕಚೇರಿ ಮತ್ತು ಡಿವೈನ್ ಸ್ಪಾರ್ಕ್ ಬೊರಿವಲಿ ಇವರ ಜಂಟಿ ಆಯೋಜನೆಯಲ್ಲಿ ಎ. 20ರಂದು ಕರಾವಳಿಯ ಹೆಸರಾಂತ ಕಲಾವಿದ ತೋನ್ಸೆ ಪುಷ್ಕಳ್ ಕುಮಾರ್ ಅವರಿಂದ ಶ್ರೀ ಕೃಷ್ಣ ತುಲಾಭಾರ ಎಂಬ ಹರಿಕಥಾ ಕಾಲಕ್ಷೇಪವು ಲಲಿತ್ ಹೊಟೇಲ್‌ನ ಕ್ರಿಸ್ಟಲ್ ಹಾಲ್‌ನಲ್ಲಿ ನೆರವೇರಿತು.
ಭಗವಾನ್ ಶ್ರೀ ಕೃಷ್ಣ ಪರಮಾತ್ಮನ ಮಹಿಮೆಯನ್ನು ಪುಷ್ಕಳ್ ಕುಮಾರ್ ಅವರು ಮನೋಜ್ಞವಾಗಿ ವಿವರಿಸಿ ದರು. ಕಾರ್ಯಕ್ರಮವು ಶ್ರೀ ರಾಮ ರûಾ ಸ್ತೋತ್ರ ಪಠನೆ ಮತ್ತು ದೀಪ ಬೆಳಗುವುದರೊಂದಿಗೆ ಪ್ರಾರಂಭಗೊಂಡಿತು. ಬಿಲ್ಲವರ ಅಸೋಸಿಯೇಶನ್ ಗೋರೆಗಾಂವ್ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷರಾದ ಜೆ. ವಿ. ಕೋಟ್ಯಾನ್, ಕಾರ್ಯಾಧ್ಯಕ್ಷರಾದ ಸಚ್ಚೀಂದ್ರ ಕೋಟ್ಯಾನ್,ಡಿವೈನ್ ಸ್ಪಾರ್ಕ್‌ನ ವಲಯಾಧ್ಯಕ್ಷರಾದ ಎಂ. ಬಿ. ಸನಿಲ್, ವಿತರಣಾಧಿಕಾರಿ ದಿನೇಶ್ ಶೆಟ್ಟಿ, ಸಂಪಾದಕೀಯ ಮಂಡಳಿಯ ವಿಶ್ವನಾಥ್ ತೋನ್ಸೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಭಾಕರ ಸಸಿಹಿತ್ಲು ಹಾರ್ಮೋನಿಯಂ ಹಾಗೂ ಚಾರುಕೇಶ್ ಬಂಗೇರ ತಬಲ ವಾದನದಲ್ಲಿ ಸಹಕರಿಸಿದರು. ಗೋರೆಗಾಂವ್ ಪರಿಸರದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿ ಸಿದರು. ಹೊಟೇಲ್ ಲಲಿತ್‌ನ ಮಾಲಕರಾದ ಜೆ. ವಿ. ಕೋಟ್ಯಾನ್ ಹಾಗೂ ಶ್ರೀಧರ್ ಪೂಜಾರಿ ಅವರು ಭಕ್ತಾದಿಗಳಿಗೆ ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು.
ಜಂಟಿ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಕಲಾಭಿಮಾನಿಗಳು, ಸಮಾಜ ಬಾಂಧವರು, ಸ್ಥಳೀಯ ಉದ್ಯಮಿಗಳು, ದಾನಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಬಿಲ್ಲವರ ಅಸೋಸಿಯೇಶನ್ ಕೇಂದ್ರ ಸಮಿತಿ ಹಾಗೂ ವಿವಿಧ ಸ್ಥಳೀಯ, ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.