Advertisement

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ

01:22 AM Jan 05, 2025 | Team Udayavani |

ದಾವಣಗೆರೆ: ಗುತ್ತಿಗೆದಾರ ಸಚಿನ್‌ ಆತ್ಮಹತ್ಯೆ ಪ್ರಕರಣದ ಕಾವು ಬಿಸಿಯಾಗಿರುವಾಗಲೇ ಜಿಲ್ಲೆಯ ಹರಿಹರದ ಗುತ್ತಿಗೆದಾರರೊಬ್ಬರು ದಯಾಮರಣ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿರುವುದು ಭಾರೀ ಸಂಚಲನ ಮೂಡಿಸಿದೆ.

Advertisement

ಹರಿಹರದ ನಿವಾಸಿ ಪ್ರಥಮ ದರ್ಜೆ ಗುತ್ತಿಗೆದಾರ ಮೊಹಮ್ಮದ್‌ ಮಝರ್‌ 25 ಲಕ್ಷ ರೂ. ವೆಚ್ಚದಲ್ಲಿ ಎರಡು ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಕಾಮಗಾರಿ ಮುಗಿಸಿ ಒಂದೂವರೆ ವರ್ಷವಾದರೂ ಸರಕಾರದಿಂದ ಬರಬೇಕಾದ ಹಣ ಬಂದಿಲ್ಲ. ಹೀಗಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅವರು ದಯಾಮರಣ ಕೋರಿ ರಾಜ್ಯಪಾಲರ ಜತೆಗೆ ಮುಖ್ಯಮಂತ್ರಿಗೂ ಪತ್ರ ಬರೆದಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಝರ್‌ ಮಾತನಾಡಿ, ಸಾಲ ಮಾಡಿ ಸರಕಾರದ ಕಾಮಗಾರಿ ನಿರ್ವಹಿಸಿದ್ದೇನೆ. ಹಣ ಬಿಡುಗಡೆ ಮಾಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸಾಕಾಗಿದೆ. ಮಗಳ ಮದುವೆ ದಿನಾಂಕ ನಿಗದಿ ಮಾಡಬೇಕಾಗಿದೆ. ಹಣ ಇಲ್ಲದ್ದರಿಂದ ಮುಂದೂಡುತ್ತ ಬರುತ್ತಿದ್ದು, ಈಗ ಮದುವೆಯೇ ಮುರಿದು ಬೀಳುವ ಹಂತಕ್ಕೆ ಬಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next