Advertisement

ಜಂಪಿಂಗ್‌ ಸ್ಟಾರ್‌ ಆದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌

06:13 PM Apr 05, 2022 | Team Udayavani |

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ ಉತ್ತಮ ಉದ್ಯಮಿಯಾಗಿ ಸಾಧಿಸಿ ತೋರಿಸಿದವರು. ಇದೀಗ ಅವರು ಜಂಪಿಂಗ್‌ ಸ್ಟಾರ್‌ ಕೂಡ ಆಗಿದ್ದಾರೆ!

Advertisement

ಬಿಲ್‌ಗೇಟ್ಸ್‌ ಅವರು 1975ರ ಏ.4ರಂದು ಮೈಕ್ರೋಸಾಫ್ಟ್ ಆರಂಭಿಸಿದ್ದರು. ಸಂಸ್ಥೆಗೆ 47 ವರ್ಷ ತುಂಬಿರುವ ಖುಷಿಯಲ್ಲಿ ಅವರು ತಮ್ಮ ಹಳೆಯದೊಂದು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಆಫೀಸಿನ ಕುರ್ಚಿಯೊಂದರ ಮೇಲೆ ಜಿಗಿಯುವ ವಿಡಿಯೋ ಪೋಸ್ಟ್‌ ಮಾಡಿರುವ ಅವರು, “ಪ್ರತಿ ಮನೆಯಲ್ಲಿ, ಪ್ರತಿ ಮೇಜಿನ ಮೇಲೆ ಮೈಕ್ರೋಸಾಫ್ಟ್ ನ ದೃಷ್ಟಿ ಸ್ಥಾಪಿಸಲು ಸಾಕಷ್ಟು ಸಮಯ ತೆಗೆದುಕೊಂಡಿತು.

ಇದನ್ನೂ ಓದಿ:ಬುದ್ದಿಮಾತು ಕೇಳದ ಮಗನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಕಣ್ಣಿಗೆ ಖಾರದ ಪುಡಿ ಹಾಕಿದ ತಾಯಿ

ಪ್ರತಿ ಮನುಷ್ಯ ಹಾಗೂ ಸಂಸ್ಥೆಯ ಬಲ ಹೆಚ್ಚಿಸಲು ಮೈಕ್ರೋಸಾಫ್ಟ್ ಕೆಲಸ ಮಾಡುತ್ತಿದೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ’ ಎಂದು ಬರೆದುಕೊಂಡಿದ್ದಾರೆ.ಆ ವಿಡಿಯೋ ವೈರಲ್‌ ಆಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next