ಕೊಪ್ಪಳದ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ರೈತರಾದ ಮುದಕಪ್ಪ, ಮಲ್ಲೇಶಪ್ಪ ದೇವಕ್ಕಿ ಸಹೋದರರು ದ್ರಾಕ್ಷಿ ಬೆಳೆಯಲು ತೊಡಗಿದ್ದಾರೆ. ವರ್ಷಕ್ಕೆ 7-8 ಲಕ್ಷ ಆದಾಯ. ಸುಮಾರು 120 ಎಕರೆ ಜಮೀನು ಒಡೆಯರು. ಇದರಲ್ಲಿ 6 ಎಕರೆಯಲ್ಲಿ ದ್ರಾಕ್ಷಿ ನಾಟಿ ಮಾಡಿದ್ದಾರೆ. ಈಗಾಗಲೆ ಬೆಳೆ ಕಟಾವು ಆಗುತ್ತಿದ್ದು ರೈತರನ್ನು ಬದುಕು ಸಿಹಿಯಾಗಿ ಹೊರ ಹೊಮ್ಮಿಸಿದೆ.
ಆರಂಭದಲ್ಲಿ ಈ ರೈತರು ಉತ್ತರ ಕರ್ನಾಟಕಕ್ಕೆ ಪ್ರಸಿದ್ಧ ಆಹಾರ ಬೆಳೆಯನ್ನೆ ಬೆಳೆಯುತ್ತಿದ್ದರು. ನಂತರ ವಿನೂತನ ಪ್ರಯೋಗ ಅಳವಡಿಸಿ ವ್ಯವಸಾಯ ಮಾಡುತ್ತಿದ್ದಾರೆ.
ಬಿಕಾಂ ಪಧವಿದರಾರ ರೈತರಿಬ್ಬರು ಶಿಕ್ಷಣವನ್ನ ತ್ಯಜಿಸಿ ತೋಟಗಾರಿಕೆ ಬೆಳೆ ದ್ರಾಕ್ಷಿಯನ್ನು ಬೆಳೆಯಲು ನಿರತರಾಗಿ ತೋಟವನ್ನೆ ಪಾಠ ಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ದ್ರಾಕ್ಷಿ$ ಬೆಳೆಯುತ್ತಾ ಮುನ್ನಡೆದಿದ್ದಾರೆ. ವರ್ಷದಿಂದ ವರ್ಷಕ್ಕೆ ದ್ರಾಕ್ಷಿ ಬೆಳೆಯುವ ಒಳ್ಳೆಯ ಇಳುವರಿ ನೀಡುವುದರೊಂದಿಗೆ ಆದಾಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ.
ಆರು ಎಕರೆ ಜಮೀನಿನಲ್ಲಿ ವರ್ಷಕ್ಕೆ 8 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಸುಮಾರು 5 ಸಾವಿರ ಸಸಿಗಳನ್ನು ನಾಟಿ ಮಾಡಿ ಸ್ವತ: ಸಸಿಗಳನ್ನು ಖರೀದಿಸಿ ತೋಟಗಾರಿಕೆ ಇಲಾಖೆಯಿಂದ ಯಾವುದೇ ಸಹಾಯಧನ ಪಡೆಯದೆ ಬೇಸಾಯ ಮಾಡುತ್ತಿದ್ದಾರೆ. ದಿನಕ್ಕೆ 10 ಟನ್ ದ್ರಾಕ್ಷಿ ಕಟಾವಾಗುತ್ತಿದ್ದು, ಒಂದು ಕಿಲೋಗೆ 35 ರೂ. ನಂತೆ ಮಾರಾಟ ಮಾಡಲಾಗುತ್ತಿದೆ. ವ್ಯಾಪಾರಿಗಳು ತೋಟಕ್ಕೆ ಆಗಮಿಸಿ ಹಣ್ಣುಗಳನ್ನು ಖರೀದಿಸುತ್ತಾರೆ. ಅಲ್ಲದೆ ಲಿಂಗಸೂರು, ಗಂಗಾವತಿ, ಸಿಂಧನೂರು, ರಾಯಚೂರು, ಬಳ್ಳಾರಿ, ಹುಬ್ಬಳ್ಳಿ ಮಾರುಕಟ್ಟೆಗಳಿಗೆ ಹಣ್ಣುಗಳನ್ನು ರವಾನಿಸಲಾಗಿದೆ.
ನಾಟಿ ವಿಧಾನ
ಇಲ್ಲಿನದು ಕೆಂಪು ಮಿಶ್ರಿತ ಮಣ್ಣು. ದ್ರಾಕ್ಷಿ ಬೆಳೆಗೆ ಕೈ ಹಾಕುವರು ಸ್ವಲ್ಪ ಹಿಂದೂ ಮುಂದು ನೋಡುತ್ತಾರೆ. ಆದರೆ ಇವರ ಹಾಗೆ ಮಾಡಲಿಲ್ಲ. ಆರಂಭದಲ್ಲಿ ಭೂಮಿಯನ್ನು ಹದಗೊಳಿಸಿ ನಂತರ 6/4 ಅಗಲ, 8/10 ಉದ್ದದಂತೆ ಸಸಿಗಳನ್ನು ನಾಟಿ ಮಾಡಿದ್ದಾರೆ. ಸಕಾಲಕ್ಕೆ ನೀರು ಹಾಯಿಸಿ, ಉತ್ತಮ ಗೊಬ್ಬರ ಕೊಟ್ಟಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಡಾರ್‌ಗೆàಜ್ ಮಾಡಿದ ನಂತರ 15 ದಿನಗಳ ಕಾಲ ನಿರಂತರ ನೀರು ಹಾಯಿಸಿದ್ದಾರೆ, 42 ದಿನಕ್ಕೆ ಈ ಬೆಳೆಯು ಹಣ್ಣಿಗೆ ಬರುತ್ತದೆ. ನಂತರ ಮಾರುಕಟ್ಟೆಗೆ ಸುಲಭವಾಗಿ ಕಳುಹಿಸಬಹುದು ಎನ್ನುತ್ತಾರೆ ರೈತ ಸಹೋದರರು.
– ಮಲ್ಲಪ್ಪ ಮಾಟರಂಗಿ