ಬಜಪೆ: ಬಜಪೆ ಪೊಲೀಸ್ ಠಾಣೆಯಲ್ಲಿ 2020ನೇ ಇಸವಿಯಲ್ಲಿ ದಾಖಲಾದ ಬೈಕ್ ಕಳವು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಂಗಳೂರು ಉಳಾಯಿಬೆಟ್ಟು ನಿವಾಸಿ ಪ್ರದೀಪ್ ಪೂಜಾರಿ ಯಾನೆ ಪ್ರದಿ ಯಾನೆ ಚೇತನ (27)ನನ್ನು ಫೆ. 16ರಂದು ಕುಳಾಯಿಯಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.
ಪ್ರದೀಪ್ ಪೂಜಾರಿ ಯಾನೆ ಪ್ರದಿ ಯಾನೆ ಚೇತನನ ವಿರುದ್ದ ಕೊಲೆ (ಮಾಡುರು ಯುಸೂಫ್), ಕೊಲೆಗೆ ಪ್ರಯತ್ನ, ಪೊಲೀಸರ ಮೇಲೆ ಹಲ್ಲೆ ಮತ್ತು ಬೈಕ್ ಕಳವಿಗೆ ಸಂಬಂ ಧಿಸಿದಂತೆ ಮಂಗಳೂರು ಮತ್ತು ದ.ಕ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಂಗಳೂರು ಬೋಳೂರು ಕಟ್ಟೆಯ ನಿವಾಸಿ ಪ್ರಶಾಂತ್ ಯಾನೆ ಪಚ್ಚು (39)ನನ್ನು ಫೆ. 15ರಂದು ಕುಂದಾಪುರದಲ್ಲಿ ವಶಕ್ಕೆ ಪಡೆಯಲಾಗಿದೆ.
ಬಜಪೆ ಪೊಲೀಸ್ ಠಾಣೆಯಲ್ಲಿ 2019ನೇ ಇಸವಿಯಲ್ಲಿ ದಾಖಲಾದ ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನಿವಾಸಿ ತಾಹಿìಬ್ ಅಫಾ°ನ್ ಪಟೇಲ್ (33)ನನ್ನು ಫೆ. 15ರಂದು ಭಟ್ಕಳದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಜಪೆ ಪೊಲೀಸ್ ಠಾಣೆಯಲ್ಲಿ 2021ನೇ ಇಸವಿಯಲ್ಲಿ ದಾಖಲಾದ ಎಂಎಂಆರ್‌ಡಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಉಡುಪಿಯ ಶಿವಳ್ಳಿಯ ನಿವಾಸಿ ಸುರೇಶ್ ಕುಮಾರ್(38)ನನ್ನು ಫೆ. 15ರಂದು ಕುಂದಾಪುರದಲ್ಲಿ ವಶಕ್ಕೆ ಪಡೆಯಲಾಗಿದೆ.
ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 4 ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯದ ಮುಂದೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮೇಲಿನ 4 ಜನ ವಾರಂಟ್ ಆರೋಪಿಗಳನ್ನು ಬಜಪೆ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಕಾಶ್ ಅವರ ತಂಡ ಪತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ.
ಇದನ್ನೂ ಓದಿ: ವಿಐಎಸ್‌ಎಲ್ ಮುಚ್ಚಲ್ಲ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ