Advertisement

Kushtagi: ಮನೆ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ; ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆ

11:29 AM Dec 19, 2023 | Team Udayavani |

ಕುಷ್ಟಗಿ: ಪಟ್ಟಣದಲ್ಲಿ ಕಳೆದ ತಡರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವಾಗಿದ್ದು, ಕದ್ದ ಬೈಕ್ ತಳ್ಳಿಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮರದಲ್ಲಿ ದಾಖಲಾಗಿದೆ.

Advertisement

ಕುಷ್ಟಗಿ ಪಟ್ಟಣದ 5ನೇ ವಾರ್ಡ ನಿವಾಸಿ ಪ್ರಸನ್ನ ಹಿರೇಮಠ ಅವರಿಗೆ ಸೇರಿದ ಬೈಕ್ ಮನೆಯ ಮುಂದೆ‌ ನಿಲ್ಲಿಸಿದ್ದರು. ರಾತ್ರಿ 12. 20 ರ ಸಮಯದಲ್ಲಿ ಕದ್ದ ಬೈಕನ್ನು ಕಳ್ಳನೋರ್ವ ಬೈಕ್ ತಳ್ಳಿಕೊಂಡು ಹೋಗುತ್ತಿರುವ ದೃಶ್ಯ ಚಿರಂಜೀವಿ ಪ್ರಿಂಟಿಂಗ್ ಪ್ರೆಸ್ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಬೈಕ್ ಕದ್ದಿರುವ ಯುವಕ ಕಪ್ಪು ಪ್ಯಾಂಟ್, ಶರ್ಟ ಹಾಗೂ ಬೆನ್ನಿಗೆ ಬ್ಯಾಗ್ ಹಾಕಿರುವ ದೃಶ್ಯ ಸೆರೆಯಾಗಿದೆ.

ಬೈಕ್ ಕಳ್ಳತನವಾಗಿರುವ ಬಗ್ಗೆ ಪ್ರಸನ್ನ ಕುಷ್ಟಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮನೆ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ ಪ್ರಕರಣ ಸಾರ್ವಜನಿಕರಲ್ಲಿ‌ ಆತಂಕ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next