Advertisement

ರಸ್ತೆ ಸುರಕ್ಷತೆ ಅರಿವಿಗೆ ಬೈಕ್‌ ರ್ಯಾಲಿ

12:02 PM Jul 29, 2018 | Team Udayavani |

ಬೆಂಗಳೂರು: ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಂಬಂಧ ನಗರದಲ್ಲಿ ಶನಿವಾರ ಬಿಜಿಎಸ್‌ ಗ್ಲೆನ್‌ ಈಗಲ್ಸ್‌ ಗ್ಲೋಬಲ್‌ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ಬೈಕ್‌ ರ್ಯಾಲಿ ಗಮನ ಸಳೆಯಿತು.

Advertisement

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರ್ಯಾಲಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್‌ ಮತ್ತು ಮೇಯರ್‌ ಸಂಪತ್‌ರಾಜ್‌ ಹಸಿರು ನಿಶಾನೆ ತೋರಿದರು. 400ಕ್ಕೂ ಹೆಚ್ಚು ಬೈಕ್‌ ಸವಾರರು ರಸ್ತೆ ಸುರಕ್ಷತಾ ರ್ಯಾಲಿಯಲ್ಲಿ ಭಾಗವಹಿಸಿದ್ದರು.

ಈ  ಸಂದರ್ಭದಲ್ಲಿ  ಮಾತನಾಡಿದ ಮೇಯರ್‌ ಸಂಪತ್‌ರಾಜ್‌, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಸ್ತೆ ಸುರಕ್ಷತೆ ಸಂಬಂಧ ಹಲವು ಉಪಕ್ರಮಗಳನ್ನು ಕೈಗೊಂಡಿವೆ. ಇದಕ್ಕೆ ಪೂರಕವಾಗಿ ಈ ಬೈಕ್‌ ರ್ಯಾಲಿ ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಹ ಎಂದರು.

ಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ಬಗ್ಗೆ ತಿಳಿವಳಿಕೆ ನೀಡುವ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಕಳಪೆ ನಿರ್ವಹಣೆಯಿಂದ ಕೂಡಿರುವ ವಾಹನಗಳಿಂದಲೂ ಅಪಘಾತಗಳು ಸಂಭವಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next