Advertisement

ಆ.1ರಿಂದ ಬೆಂ- ಮೈ ಹೆದ್ದಾರಿಯಲ್ಲಿ ಬೈಕ್ ಹಾಗೂ ಆಟೋ ನಿರ್ಬಂಧ; ನಿಯಮ ಮೀರಿದರೆ ದಂಡ

03:44 PM Jul 31, 2023 | Team Udayavani |

ರಾಮನಗರ: ಹೆಚ್ಚುತ್ತಿರುವ ಅಪಘಾತಗಳ ಕಾರಣದಿಂದ ಬೆಂಗಳುರು- ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಬೈಕ್ ಹಾಗೂ ಆಟೋ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಆಗಸ್ಟ್ ಒಂದರಿಂದ ಹೆದ್ದಾರಿಯಲ್ಲಿ ಬೈಕ್, ಆಟೋ, ಟ್ರಾಕ್ಟರ್ ಸಂಚಾರಕ್ಕೆ ನಿಷೇಧಿಸಲಾಗಿದೆ. ಈ ಬಗ್ಗೆ ಪ್ರಾಧಿಕಾರ ತಯಾರಿ ನಡೆಸುತ್ತಿದೆ.

Advertisement

ಹೆದ್ದಾರಿ ಮೇಲೆ ಅಪಘಾತ ನಿಗ್ರಹಕ್ಕೆ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಹೊಸ ನಿಯಮ ತಂದಿದ್ದು, ಹೆದ್ದಾರಿ ಮೇಲೆ ಸಂಚಾರಕ್ಕೆ ಅರ್ಹ ಅಲ್ಲದ ವಾಹನಗಳಿಗೆ ನಿರ್ಬಂಧ ಮಾಡಿದೆ. ಹೀಗಾಗಿ ಟೋಲ್ ಕಟ್ಟಿಯೂ ಹೆದ್ದಾರಿ ಬಳಸುವಂತಿಲ್ಲ.

ಆಗಸ್ಟ್ ‌ 1‌ ರಿಂದ ಕ್ರಮ ಜಾರಿ ಬರಲಿದ್ದು, ನಿಯಮ ಮೀರಿ ಹೆದ್ದಾರಿ ಬಳಸಿದರೆ 500 ರೂ ದಂಡ ಕಟ್ಟಬೇಕಾಗುತ್ತದೆ. ಹೆದ್ದಾರಿಯ ಆರಂಭ ಮತ್ತು ಅಂತ್ಯ ಭಾಗದಲ್ಲಿ ಪೊಲೀಸರು ತಪಾಸಣೆ ಮಾಡಲಿದ್ದು, ಒಟ್ಟು 9 ಕಡೆಗಳಲ್ಲಿ ಪೊಲೀಸರಿಂದ ಚೆಕಿಂಗ್ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next