ಪಾಟ್ನಾ: ರೈಲು ಹಳಿತಪ್ಪಿ ನಾಲ್ವರು ಗಾಯಗೊಂಡು, 70 ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಬಕ್ಸರ್ ನಲ್ಲಿ ಬುಧವಾರ(ಅ.11 ರಂದು) ರಾತ್ರಿ ನಡೆದಿದೆ.
ದೆಹಲಿ-ಕಾಮಾಖ್ಯ ಈಶಾನ್ಯ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿದ ಪರಿಣಾಮ ಈ ಘಟನೆ ಸಂಭವಿಸಿದೆ. ರೈಲು ದೆಹಲಿಯ ಆನಂದ್ ವಿಹಾರ್ ಟರ್ಮಿನಲ್ ನತ್ತ ತಲುಪುತ್ತಿತ್ತು. ಈ ವೇಳೆ ರಘುನಾಥಪುರ ನಿಲ್ದಾಣದ ರೈಲಿನ 6 ಬೋಗಿಗಳು ಹಳಿತಪ್ಪಿದೆ. ಇದರಿಂದ ರೈಲು ಉರುಳಿ ಬಿದ್ದಿದೆ. ಈ ಕಾರಣದಿಂದ 4 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ಸುಮಾರು 70 ಮಂದಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಮೊದಲು ಎರಡು ಎಸಿ III ಶ್ರೇಣಿಯ ಬೋಗಿಗಳು ಉರುಳಿಬಿದ್ದಿದೆ. ಈ ಬೋಗಿಗಳ ಜತೆ ಮತ್ತೆ ನಾಲ್ಕು ಬೋಗಿಗಳು ಹಳಿತಪ್ಪಿದೆ.
ಅಪಘಾತ ಸಂಭವಿಸುತ್ತಿದ್ದಂತೆ, ಸ್ಥಳೀಯರು ಪ್ರಯಾಣಿಕರನ್ನು ರಕ್ಷಿಸಲು ಮತ್ತು ಹಳಿತಪ್ಪಿದ ಬೋಗಿಗಳಿಂದ ಗಾಯಾಳುಗಳನ್ನು ಹೊರತೆಗೆದಿದ್ದಾರೆ.ಇನ್ನು ಅಪಘಾತದ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ರೈಲಿನಿಂದ ಪ್ರಯಾಣಿಕರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘಟನೆಗೆ ಸಂತಾಪ ಸೂಚಿಸಿದ್ದು, ಹಳಿತಪ್ಪಿದಕ್ಕೆ ಮೂಲ ಕಾರಣವನ್ನು ತನಿಖೆ ಮಾಡಲಾಗುವುದೆಂದು ಟ್ವಿಟರ್ ನಲ್ಲಿ(ಎಕ್ಸ್) ನಲ್ಲಿ ಟ್ವೀಟ್ ಮಾಡಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಸಂಬಂಧಿಕರಿಗೆ ರೈಲ್ವೇಸ್ 10 ಲಕ್ಷ ರೂ. ಪರಿಹಾರವನ್ನು ನೀಡುವುದಾಗಿ ಹೇಳಿದೆ.