Advertisement

ಲಸಿಕೆಯ ಬದಲು ಖಾಲಿ ಸಿರಿಂಜ್‌ ಚುಚ್ಚಿದ ನರ್ಸ್‌!

03:19 AM Jun 26, 2021 | Team Udayavani |

ಪಟ್ನಾ: ಬಿಹಾರದಲ್ಲಿ ಲಸಿಕೆ ಪಡೆಯಲು ಬಂದಿದ್ದ ಯುವಕನಿಗೆ ನರ್ಸ್‌ವೊಬ್ಬರು ಖಾಲಿ ಸಿರಿಂಜ್‌ ವೊಂದನ್ನು ಚುಚ್ಚಿ ಕಳುಹಿಸಿದ ಘಟನೆಯ ವೀಡಿಯೋ ವೈರಲ್‌ ಆಗಿದೆ.

Advertisement

ಸುತ್ತಲಿದ್ದವರ ಜತೆ ಮಾತನಾಡುವುದರಲ್ಲೇ ನಿರತರಾಗಿದ್ದ ನರ್ಸ್‌, ಸಿರಿಂಜ್‌ ಪ್ಯಾಕೆಟ್‌ ತೆರೆದು, ಕೊರೊನಾ ಲಸಿಕೆಯ ಸೀಸೆಯಿಂದ ವ್ಯಾಕ್ಸಿನ್‌ ಭರ್ತಿ ಮಾಡಿಕೊಳ್ಳದೇ ನೇರವಾಗಿ ಖಾಲಿ ಸಿರಿಂಜ್‌ ಅನ್ನು ಯುವಕನಿಗೆ ಚುಚ್ಚಿದ್ದಾರೆ.

ಯುವಕನೊಂದಿಗೆ ಬಂದಿದ್ದ ಗೆಳೆಯ, ಲಸಿಕೆಚುಚ್ಚುವುದನ್ನು ತಮಾಷೆಗಾಗಿ ವೀಡಿಯೋ ಮಾಡಿಕೊಂಡಿದ್ದ. ಮನೆಗೆ ಮರಳಿದ ಬಳಿಕ ಆ ವೀಡಿಯೋವನ್ನು ಪರಿಶೀಲಿಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next