ಪಾಟ್ನಾ: ಪರೀಕ್ಷೆಗೆ ಸರಿಯಾಗಿ ಓದಿಕೊಂಡು ಹೋಗದೆ ಇದ್ದಾಗ ನರ್ವಸ್ ಆಗಿ ಕೆಲವೊಮ್ಮೆ ಸುಮ್ಮನೆ ಕೂರುವುದುಂಟು. ಎಕ್ಸಾಂ ಹಾಲ್ ನಲ್ಲಿ ಏನೋ ಯೋಚನೆ ಮಾಡುತ್ತಾ, ಪ್ರಶ್ನೆಗೆ ಉತ್ತರವನ್ನು ಹುಡುಕುವ ನೆಪದಲ್ಲಿ ಸಮಯ ದೂಡುತ್ತೇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಪರೀಕ್ಷಾ ಹಾಲ್ ನಲ್ಲಿ ಮೂರ್ಛೆ ಹೋಗಿರುವ ಕಾರಣ ಕೇಳಿದರೆ ಒಂದು ಕ್ಷಣ ನಗಬೇಕು ಅನ್ನಿಸುತ್ತದೆ.!
ಮನೀಶ್ ಶಂಕರ್ ಎಂಬ ಅಲ್ಮ ಇಕ್ಬಾಲ್ ಕಾಲೇಜಿನ ದ್ವಿತೀಯ ಪಿಯುಸಿಯ ವಿದ್ಯಾರ್ಥಿ, ಮಧ್ಯಂತರ ಪರೀಕ್ಷೆ ಬರೆಯಲು ಬಿಹಾರದ ಶರೀಫ್‌ನಲ್ಲಿರುವ ಬ್ರಿಲಿಯಂಟ್ ಕಾನ್ವೆಂಟ್ ಶಾಲೆಗೆ ಹೋಗುತ್ತಾರೆ. ತನ್ನ ಪರೀಕ್ಷಾ ಸೆಂಟರ್ ಗೆ ಹೋಗಿ, ಪರೀಕ್ಷಾ ಕೂಠಡಿಗೆ ಹೋದಾಗ ಶಂಕರ್ ಇದ್ದಕ್ಕಿದ್ದಂತೆ ಭೀತಿಗೆ ಒಳಗಾಗುತ್ತಾನೆ. ಏಕಾಏಕಿ ಮೂರ್ಛೆ ಬೀಳುತ್ತಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
ಏಕಾಏಕಿ ಈ ರೀತಿ ಮೂರ್ಛೆ ಬಿದ್ದು, ಜ್ವರ ಬಂದ ಶಂಕರ್ ನನ್ನು ಬಳಿಕ ವಿಚಾರಿಸಿದಾಗ, ಆತ ಹೇಳಿದ್ದು, ನಾನು ಪರೀಕ್ಷೆ ಬರೆಯಲು ಹೋದ ಎಕ್ಸಾಂ ಹಾಲ್ ನಲ್ಲಿ ಸುಮಾರು 50 ಕ್ಕೂ ಅಧಿಕ ಸ್ಟೂಡೆಂಟ್ಸ್ ಇದ್ದರು. ಅವರೆಲ್ಲರೂ ಹುಡುಗಿಯರೇ. ಅಷ್ಟು ಹುಡುಗಿಯರ ಮಧ್ಯ ಒಬ್ಬನೇ ಹುಡುಗನಾಗಿ ಪರೀಕ್ಷೆ ಬರೆಯಲು ನನಗೆ ಒಂಥಾರ ಹಿಂಜರಿಕೆ ಆಯಿತು. ನನ್ನ ಮೈಕೈ ಅಲುಗಾಡಿತು, ನಾನು ಭೀತಿಯಿಂದ ಪ್ರಜ್ಞೆ ತಪ್ಪಿ ಬಿದ್ದೆ ಎನ್ನುತ್ತಾನೆ.
ಶಂಕರ್ ಬಿದ್ದ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜ್ವರ ಬಂದು ಕೆಲ ಹೊತ್ತು ಏನು ಮಾತನಾಡದೆ ಶಂಕರ್ ಇದ್ದ ಎಂದು ಆತನ ಸಂಬಂಧಿಕರು ಹೇಳುತ್ತಾರೆ.
ಸದ್ಯ ಈ ಘಟನೆಯ ಬಗ್ಗೆ ಮಾಹಿತಿ ಹೊರ ಬಿದ್ದ ಬಳಿಕ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.