ಪಾಟ್ನಾ: ರಾಷ್ಟ್ರರಾಜಕಾರಣದ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿರುವ ಬಿಹಾರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತಎಣಿಕೆ ಮಂಗಳವಾರ(ನವೆಂಬರ್ 10, 2020) ಬೆಳಗ್ಗೆ ಆರಂಭಗೊಂಡಿದ್ದು, ಸಮೀಕ್ಷೆಯಂತೆ ಆರ್ ಜೆಡಿ 122 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಭಾರತೀಯ ಜನತಾ ಪಕ್ಷ ನೇತೃತ್ವದ ಎನ್ ಡಿಎ ಮೈತ್ರಿಕೂಟ 100 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ರಾಷ್ಟ್ರೀಯ ಜನತಾ ದಳ(ಆರ್ ಜೆಡಿ) 95 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಭಾರತೀಯ ಜನತಾ ಪಕ್ಷ 57 ಕ್ಷೇತ್ರಗಳಲ್ಲಿ, ಜೆಡಿಯು 36 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಮುಜಾಫರಾಪುರ್ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಸುರೇಶ್ ಕುಮಾರ್ ಶರ್ಮಾ, ದರ್ಬಾಂಗ್ ನಲ್ಲಿ ಬಿಜೆಪಿಯ ಸಂಜಯ್ ಸರೋಗಿ, ಪರ್ಸಾ ಕ್ಷೇತ್ರದಲ್ಲಿ ಜೆಡಿಯುನ ಚಂದ್ರಿಕಾ ರಾಯ್, ರಾಗೋಪುರ್ ಕ್ಷೇತ್ರದಲ್ಲಿ ಆರ್ ಜೆಡಿಯ ತೇಜಸ್ವಿ ಪ್ರಸಾದ್ ಯಾದವ್ ಮುನ್ನಡೆ ಸಾಧಿಸಿದ್ದಾರೆ.
ಮಂಗಳವಾರ ಬೆಳಗ್ಗೆ 38 ಜಿಲ್ಲೆಗಳ 55 ಕೇಂದ್ರಗಳಲ್ಲಿ 243 ವಿಧಾನಸಭಾ ಕ್ಷೇತ್ರಗಳ ಎತಎಣಿಕೆ ಆರಂಭಗೊಂಡಿತ್ತು. ನವೆಂಬರ್ 28ರಿಂದ ಮೂರು ಹಂತಗಳಲ್ಲಿ ಬಿಹಾರ ಚುನಾವಣೆ ನಡೆದಿತ್ತು. ನವೆಂಬರ್ 3ರಂದು ಎರಡನೇ ಹಂತ, ನವೆಂಬರ್ 7ರಂದು ಮೂರನೇ ಹಂತ ಚುನಾವಣೆ ನಡೆದಿತ್ತು.
ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಹಾಗೂ ಸಹೋದರ ತೇಜ್ ಪ್ರತಾಪ್ ರಾಗೋಪುರ್ ಮತ್ತು ಹಸನ್ ಪುರಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.