Advertisement
ಮಂಗಳವಾರ(ನವೆಂಬರ್ 10, 2020) ಬೆಳಗ್ಗೆ ಮತಎಣಿಕೆ ಆರಂಭಗೊಂಡ ಬಳಿಕ ಪಕ್ಷಗಳ ಮುನ್ನಡೆ ಟ್ರೆಂಡ್ ಕಂಡುಬಂದಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಎಡಪಕ್ಷಗಳು ಸ್ಪರ್ಧಿಸಿವೆ. ಸಿಪಿಐ(ಎಂ-ಎಲ್) 19 ಕ್ಷೇತ್ರಗಳಲ್ಲಿ, ಸಿಪಿಐ ಆರು ಕ್ಷೇತ್ರಗಳಲ್ಲಿ, ಹಾಗೂ ಸಿಪಿಎಂ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.
Related Articles
Advertisement
ಆರ್ ಜೆಡಿ ಮತ್ತು ಕಾಂಗ್ರೆಸ್ ಜೊತೆ ಪರಸ್ಪರ ಮತಗಳನ್ನು ಪರಿವರ್ತಿಸುವುದರ ಜತೆಗೆ, ಎಡಪಕ್ಷಗಳು ಮಹಾಮೈತ್ರಿಕೂಟಕ್ಕೆ ಇನ್ನೂ ಎರಡು ನಿರ್ಣಾಯಕ ಅಂಶಗಳ್ನು ತಂದಿದೆ ಎಂದು ಕಾಣಿಸುತ್ತದೆ. ಈ ಮೂರು ಪಕ್ಷಗಳು ಕೇಡರ್ ಆಧಾರಿತ ಪಕ್ಷಗಳಾಗಿವೆ.
ಚುನಾವಣೋತ್ತರ ಸಮೀಕ್ಷೆಗಳು ಕೂಡಾ ಎಡಪಕ್ಷಗಳು ಈ ಬಾರಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದ್ದವು. ಮುಖ್ಯವಾಗಿ ಸಿಪಿಐ(ಎಂಎಲ್) ಬಗ್ಗೆ ಸಮೀಕ್ಷೆ ಭವಿಷ್ಯ ನುಡಿದಿತ್ತು. ಇಂಡಿಯಾ ಟುಡೇ, ಆ್ಯಕ್ಸಿಸ್ ಎಕ್ಸಿಟ್ ಪೋಲ್ ನಲ್ಲಿ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಸಿಪಿಐ(ಎಂ,ಎಲ್) 12ರಿಂದ 16 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿತ್ತು.
ಇದನ್ನೂ ಓದಿ:ಶಿರಾ’ದಲ್ಲಿ ‘ರಾರಾ’ಜಿಸಿದ ಕಮಲ: ಬಿಎಸ್ ವೈ ಮತ್ತಷ್ಟು ಭದ್ರ, ಕೈ ರಣತಂತ್ರ ಛಿದ್ರ
ಬಿಹಾರ ಚುನಾವಣಾ ಫಲಿತಾಂಶದಲ್ಲಿ ಮಹಾಘಟಬಂಧನ್ ಗೆ ಬಿಜೆಪಿ ನೇತೃತ್ವದ ಎನ್ ಡಿಎ ಕಠಿಣ ಸ್ಪರ್ಧೆಯನ್ನೊಡ್ಡಿದೆ. ಆರಂಭದಲ್ಲಿ ಮಹಾಘಟಬಂಧನ್ ಎಡಿಎಗಿಂತ ಮುನ್ನಡೆ ಸಾಧಿಸಿತ್ತು. ಬಳಿಕ ಮಹಾಘಟಬಂಧನ್ ಕ್ಕಿಂತ ಎನ್ ಡಿಎ ಮುನ್ನಡೆ ಸಾಧಿಸಿತ್ತು. ಮತಎಣಿಕೆ ಮುಂದುವರಿದಿದ್ದು, ತಡರಾತ್ರಿ ಬಿಹಾರದ ಗದ್ದುಗೆ ಯಾರ ಪಾಲಿಗೆ ಎಂಬ ಸ್ಪಷ್ಟ ಚಿತ್ರಣ ಹೊರಬೀಳಲಿದೆ.