Advertisement

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ಗಿಂತ ಅವರ ಪುತ್ರ ಐದು ಪಟ್ಟು ಶ್ರೀಮಂತ!

12:10 AM Jan 03, 2022 | Team Udayavani |

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ಗಿಂತ ಅವರ ಪುತ್ರ ನಿಶಾಂತ್‌ ಐದು ಪಟ್ಟು ಶ್ರೀಮಂತ!

Advertisement

ಡಿ.31ರಂದು ನಿತೀಶ್‌ ಕುಮಾರ್‌ ಮತ್ತು ಅವರ ಸಂಪುಟ ಸದಸ್ಯರು ಬಿಹಾರ ಸರಕಾರದ ವೆಬ್‌ಸೈಟ್‌ನಲ್ಲಿ ಆಸ್ತಿವಿವರ ಸಲ್ಲಿಸಿದ್ದಾರೆ.

ಆ ಪ್ರಕಾರ ನಿತೀಶ್‌ ಅವರ ಚರಾಸ್ತಿ, ಸ್ಥಿರಾಸ್ತಿ ಮೌಲ್ಯ 75.36 ಲಕ್ಷ ರೂ. ನಿತೀಶ್‌ ಬಳಿ 29,385 ರೂ. ನಗದು ಇದೆ.
ಬ್ಯಾಂಕ್‌ ಖಾತೆ ಯಲ್ಲಿ 42,763 ಹಣವಿದೆ. 16.51 ಲಕ್ಷ ರೂ. ಮೌಲ್ಯದ ಚರಾಸ್ತಿಗಳಿವೆ. ಸ್ಥಿರಾಸ್ತಿ ಮೌಲ್ಯ 58.85 ಲಕ್ಷ ರೂ. ಅವರ ಪುತ್ರ ನಿಶಾಂತ್‌ ಚರಾಸ್ತಿ ಮೌಲ್ಯ 1.63 ಕೋಟಿ ರೂ., ಸ್ಥಿರಾಸ್ತಿ ಮೌಲ್ಯ 1.98 ಕೋಟಿ ರೂ. ಮುಖ್ಯ ಮಂತ್ರಿ ನಿತೀಶ್‌ ದಿಲ್ಲಿಯ ದ್ವಾರಕಾದಲ್ಲಿ ಒಂದು ಫ್ಲಾಟ್‌ ಹೊಂದಿದ್ದಾರೆ.

ಇದನ್ನೂ ಓದಿ: ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಪಾಕ್‌ ಸೈನಿಕನ ಹೊಡೆದುರುಳಿಸಿದ ಸೇನೆ

ಅವರ ಪುತ್ರ ನಿಶಾಂತ್‌ ಬಿಹಾರದ ನಳಂದಾ ಜಿಲ್ಲೆಯಲ್ಲಿ ಕೃಷಿಭೂಮಿ ಮತ್ತು ಮನೆಗಳನ್ನು ಹೊಂದಿದ್ದಾರೆ. ಪಟ್ನಾದ ಕಂಕಾರ್‌ಬಾಘನಲ್ಲೂ ಆಸ್ತಿ ಹೊಂದಿದ್ದಾರೆ.

Advertisement

ಇನ್ನೂ ವಿಶೇಷವೆಂದರೆ ನಿತೀಶ್‌ ಬಳಿ 13 ಹಸುಗಳು, 9 ಕರುಗಳು ಇವೆ. ಇವುಗಳ ಬೆಲೆ 1.45 ಲಕ್ಷ ರೂ.!

Advertisement

Udayavani is now on Telegram. Click here to join our channel and stay updated with the latest news.

Next