Advertisement

ಕಾಪಿ ಚೀಟಿಯನ್ನು ಲವ್‌ ಲೆಟರ್‌ ಎಂದುಕೊಂಡು ಬಾಲಕನ ಕೊಲೆ!

08:31 PM Oct 20, 2022 | Team Udayavani |

ಪಾಟ್ನಾ: ಪರೀಕ್ಷೆಯ ಕಾಪಿ ಚೀಟಿಯನ್ನು ಬಾಲಕಿ ಪ್ರೇಮ ಪತ್ರ ಎಂದು ತಪ್ಪಾಗಿ ತಿಳಿದ ಹಿನ್ನೆಲೆ ಬಾಲಕನೊಬ್ಬನ ಕೊಲೆಯಾದಂತಹ ಘಟನೆ ಬಿಹಾರದಲ್ಲಿ ನಡೆದಿದೆ.

Advertisement

ಬೋಜ್‌ಪುರ ನಗರದಲ್ಲಿ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 12 ವರ್ಷದ ಬಾಲಕ ಇತ್ತೀಚೆಗೆ ತನ್ನ 6ನೇ ತರಗತಿ ಮಧ್ಯ ವಾರ್ಷಿಕ ಪರೀಕ್ಷೆ ಬರೆಯುತ್ತಿದ್ದ ಅಕ್ಕನಿಗೆ ಸಹಾಯ ಮಾಡಲೆಂದು ಆಕೆಯಿದ್ದ ಪರೀಕ್ಷಾ ಕೇಂದ್ರದೊಳಗೆ ಕಾಪಿ ಚೀಟಿ ಎಸೆದಿದ್ದಾನೆ. ಅದು ತಪ್ಪಿ ಇನ್ನೋರ್ವ ವಿದ್ಯಾರ್ಥಿನಿಯ ಬಳಿ ಬಿದ್ದಿದೆ. ಅದನ್ನು ಆಕೆ ಪ್ರೇಮ ಪತ್ರ ಎಂದು ತಪ್ಪಾಗಿ ತಿಳಿದಿದ್ದು, ತನ್ನ ಅಣ್ಣನಿಗೆ ವಿಚಾರ ಮುಟ್ಟಿಸಿದ್ದಾಳೆ. ಸಿಟ್ಟಿಗೆದ್ದ ಅಣ್ಣ ಸ್ನೇಹಿತರೊಡಗೂಡಿ, ಬಾಲಕನ ಕೊಲೆ ಮಾಡಿದ್ದಾನೆ. ಆತನ ಕೈ, ಕಾಲನ್ನೆಲ್ಲ ಕತ್ತರಿಸಿ, ರೈಲ್ವೆ ಹಳಿ ಬಳಿ ಎಸೆದಿದ್ದಾರೆ. ಬಾಲಕನ ಕೈ ಊರಿನ ದೇವಸ್ಥಾನದ ಬಳಿ ಸಿಕ್ಕಿದ್ದು, ತನಿಖೆ ನಡೆಸಿದ ಪೊಲೀಸರಿಗೆ ಸತ್ಯಾಂಶ ತಿಳಿದುಬಂದಿದೆ. ಆರೋಪಿಗಳೆಲ್ಲರೂ ಅಪ್ರಾಪ್ತ ವಯಸ್ಸಿನವರೇ ಆಗಿದ್ದು, ಅವರನ್ನು ಬಾಲಾಪರಾಧಿ ಕೇಂದ್ರದಲ್ಲಿ ಇಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next