Advertisement
ಇತ್ತೀಚೆಗಷ್ಟೇ ಐಶ್ವರ್ಯ ತಂದೆ ಚಂದ್ರಿಕಾ ರಾಯ್ ನೀಡಿದ್ದ ಸಂದರ್ಶನದಲ್ಲಿ ತಮ್ಮ ಮಗಳು ತೇಜ್ ಪ್ರತಾಪ್ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು.
Related Articles
Advertisement
ಐಶ್ವರ್ಯ 2018ರಲ್ಲಿ ಲಾಲು ಪ್ರಸಾದ್ ಪುತ್ರ ತೇಜ್ ಪ್ರತಾಪ್ ನ ಜತೆ ವಿವಾಹವಾಗಿತ್ತು. ಆದರೆ ಐದು ತಿಂಗಳ ನಂತರ ಲಾಲು ಪುತ್ರ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಈ ಘಟನೆ ನಂತರ ಎರಡು ಕುಟುಂಬಗಳ ನಡುವಿನ ಸಂಬಂಧ ಹದಗೆಟ್ಟಿರುವುದಾಗಿ ವರದಿ ತಿಳಿಸಿದೆ. ಈ ಜಿದ್ದಾಜಿದ್ದಿಯಿಂದಾಗಿ ಐಶ್ವರ್ಯ ತಂದೆ ಚಂದ್ರಿಕಾ ರಾಯ್ ಅವರು ಆರ್ ಜೆಡಿ ತೊರೆದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ಮುಂಬರುವ ವಿಧಾನಸಭಾ ಚುನಾವಣೆ ವೇಳೆ ತೇಜ್ ಪ್ರತಾಪ್ ತಮ್ಮ ಕ್ಷೇತ್ರವನ್ನು ಬದಲಾಯಿಸುವ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಊಹಾಪೋಹ ಹಬ್ಬಿದೆ. ತೇಜ್ ಪ್ರತಾಪ್ ಈಗ ಮಹುವಾ ಕ್ಷೇತ್ರದ ಶಾಸಕರಾಗಿದ್ದಾರೆ. 2015ರ ಚುನಾವಣೆಯಲ್ಲಿ ಒಲ್ಲದ ಮನಸ್ಸಿನಿಂದ ಮಹುವಾದಲ್ಲಿ ಸ್ಪರ್ಧಿಸಿದ್ದ ತೇಜ್ ಪ್ರತಾಪ್ 28,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಮುಂಬರುವ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಐಶ್ವರ್ಯ ಕೂಡಾ ಸ್ಪರ್ಧಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.