Advertisement

ಬಿಹಾರ ಚುನಾವಣೆ 2020: ಮೊದಲ ಹಂತದಲ್ಲಿ ಶೇ.31ರಷ್ಟು ಕ್ರಿಮಿನಲ್ ಹಿನ್ನೆಲೆ ಅಭ್ಯರ್ಥಿಗಳು!

05:11 PM Oct 21, 2020 | Nagendra Trasi |

ಪಾಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಸ್ಪರ್ಧಿಸುತ್ತಿರುವ ಸುಮಾರು 1,064 ಅಭ್ಯರ್ಥಿಗಳ ಹಿನ್ನೆಲೆಯನ್ನು ವಿಶ್ಲೇಷಿಸಿದಾಗ ಶೇ.31ರಷ್ಟು (328 ಮಂದಿ) ಅಭ್ಯರ್ಥಿಗಳು ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಬಗ್ಗೆ ಘೋಷಿಸಿಕೊಂಡಿರುವುದಾಗಿ ಚುನಾವಣಾ ಸುಧಾರಣೆಯಲ್ಲಿ ಭಾಗಿಯಾಗಿರುವ ಪ್ರಜಾಫ್ರಭುತ್ವ ಸುಧಾರಣಾ ಅಸೋಸಿಯೇಶನ್(ಎಡಿಆರ್) ಪತ್ತೆ ಹಚ್ಚಿರುವುದಾಗಿ ತಿಳಿಸಿದೆ.

Advertisement

328ರಲ್ಲಿ 244 ಮಂದಿ ವಿರುದ್ಧ ಗಂಭೀರವಾದ ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿರುವುದಾಗಿ ಅಫಿಡವಿತ್ ನಲ್ಲಿ ನಮೂದಿಸಿದ್ದಾರೆ. ರಾಷ್ಟ್ರೀಯ ಜನತಾದಳದ 41 ಅಭ್ಯರ್ಥಿಗಳಲ್ಲಿ 30(ಶೇ.73ರಷ್ಟು) ಮಂದಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಭಾರತೀಯ ಜನತಾ ಪಕ್ಷದ 29 ಅಭ್ಯರ್ಥಿಗಳ ಪೈಕಿ 21 (ಶೇ.72ರಷ್ಟು) ಮಂದಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ.

ಲೋಕ್ ಜನಶಕ್ತಿ ಪಕ್ಷದ 41 ಅಭ್ಯರ್ಥಿಗಳಲ್ಲಿ 24 (ಶೇ.59) ಮಂದಿ ವಿರುದ್ಧ ಕ್ರಿಮಿನಲ್ ಆರೋಪವಿದೆ. ಕಾಂಗ್ರೆಸ್ ಪಕ್ಷದ 21 ಅಭ್ಯರ್ಥಿಗಳ ಪೈಕಿ 12 (ಶೇ.51) ಮಂದಿ ವಿರುದ್ಧ ಕ್ರಿಮಿನಲ್ ಆರೋಪವಿದೆ. ಜನತಾದಳ (ಸಂಯುಕ್ತ)ದ 35 ಅಭ್ಯರ್ಥಿಗಳಲ್ಲಿ 15(ಶೇ.43) ಮಂದಿ ವಿರುದ್ಧ ಕ್ರಿಮಿನಲ್ ಆರೋಪವಿದೆ ಎಂದು ವರದಿ ವಿಶ್ಲೇಷಿಸಿದೆ.

ಇದನ್ನೂ ಓದಿ: ಆಸೀಸ್ ಟೆಸ್ಟ್ ಸರಣಿ: ಇಶಾಂತ್ ಜಾಗಕ್ಕೆ ಶಾರ್ದೂಲ್‌-ಸಿರಾಜ್‌ ನಡುವೆ ಪೈಪೋಟಿ

ಇದರಲ್ಲಿ 29 ಮಂದಿ ಮಹಿಳೆಯರ ವಿರುದ್ಧದ ಅಪರಾಧದ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. 29 ಅಭ್ಯರ್ಥಿಗಳ ಪೈಕಿ ಮೂವರು ಅತ್ಯಾಚಾರ ಸಂಬಂಧಿದ ಪ್ರಕರಣದಲ್ಲಿ ಆರೋಪಿಯಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ.

Advertisement

ಎಡಿಆರ್ ಪ್ರಕಾರ, ಅಕ್ಟೋಬರ್ 28ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿನ 71 ಕ್ಷೇತ್ರಗಳಲ್ಲಿನ 61 ಸ್ಥಾನ ರೆಡ್ ಅಲರ್ಟ್ ಕ್ಷೇತ್ರಗಳಾಗಿದ್ದು, ಇದರಲ್ಲಿ ಮೂರಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಬಗ್ಗೆ ಘೋಷಿಸಿಕೊಂಡಿದ್ದಾರೆ.

ಚುನಾವಣೆಯಲ್ಲಿ ಅಪರಾಧ ಹಿನ್ನೆಲೆ ಹೊಂದಿದವರಿಗೆ ಟಿಕೆಟ್ ನೀಡಬಾರದು ಎಂಬ ಸುಪ್ರೀಂಕೋರ್ಟ್ ನಿರ್ದೇಶನ ರಾಜಕೀಯ ಪಕ್ಷಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮತ್ತೆ ಹಳೆಯ ಸಂಪ್ರದಾಯದಂತೆ ಸುಮಾರು ಶೇ.31ರಷ್ಟು ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next