Advertisement
ಆ್ಯಪ್ ಸೌಲಭ್ಯಗ್ರಾಹಕರಿಗಾಗಿ “ಚಾರ್ಜ್ ಗ್ರಿಡ್’ ಎಂಬ ಆ್ಯಪ್ ಬಿಡುಗಡೆ ಮಾಡಲಾಗಿದೆ. ಚಾರ್ಜಿಂಗ್ ಸೌಲಭ್ಯ ಪಡೆಯುವ ಗ್ರಾಹಕರು, ಅದನ್ನು ಡೌನ್‌ಲೋಡ್ ಮಾಡಿಕೊಂಡು, ತಮ್ಮ ವಾಹನಗಳ ಚಾರ್ಜಿಂಗ್ ಬಗ್ಗೆ ಮಾಹಿತಿ ಪಡೆಯಬಹುದು.
21 ಚಾರ್ಜಿಂಗ್ ಪಾಯಿಂಟ್‌ಗಳು ಇಲ್ಲಿದ್ದು, ಇದರಲ್ಲಿ 4 ಡಿ.ಸಿ. ಚಾರ್ಜರ್‌ಗಳಾಗಿದ್ದು ಪ್ರತಿಯೊಂದು 5 ಕಿಲೋ ವ್ಯಾಟ್‌ನಿಂದ 50 ಕಿ.ವ್ಯಾ. ಸಾಮರ್ಥ್ಯ ವುಳ್ಳವು. ಪೂರ್ತಿ ಡಿಸಾcರ್ಜ್ ಆಗಿದ್ದ ಬ್ಯಾಟರಿಯನ್ನು ಶೂನ್ಯದಿಂದ ಶೇ.100 ರಷ್ಟು ಚಾರ್ಜ್ ಮಾಡಲು ಕೇವಲ 45 ನಿಮಿಷಗಳು ಸಾಕು. ಉಳಿದವು ಎ.ಸಿ. (ಅಲ್ಟರ್‌ನೆàಟ್ ಕರೆಂಟ್) ಚಾರ್ಜರ್‌ಗಳಾಗಿದ್ದು ಪ್ರತೀ ಚಾರ್ಜರ್ 3.5 ಕಿ.ವ್ಯಾಟ್‌ನಿಂದ 7.5 ಕಿ.ವ್ಯಾಟ್‌ವರೆಗಿನವು. ಒಂದು ಕಾರಿನ ಬ್ಯಾಟರಿ ಚಾರ್ಜ್‌ಗೆ ಒಂದು ರಾತ್ರಿ ಪೂರ್ತಿ ಬೇಕಾಗುತ್ತದೆ. ಯಾವ ವಾಹನಗಳಿಗೆ ಸೂಕ್ತ?
– ದ್ವಿಚಕ್ರ ವಾಹನಗಳು
– ತ್ರಿಚಕ್ರ ವಾಹನಗಳು
– ನಾಲ್ಕು ಚಕ್ರಗಳ ವಾಹನಗಳು
Related Articles
ಸರಕಾರದಿಂದ ವಿತರಿಸಲಾಗುವ ವಿದ್ಯುತ್‌ನಿಂದಲೇ ಈ ಚಾರ್ಜಿಂಗ್ ಲಾಟ್ ಕಾರ್ಯ ನಿರ್ವಹಿಸುತ್ತದೆ. ವಿದ್ಯುತ್ ನಿಲುಗಡೆ ಮುಂತಾದ ಸಮಸ್ಯೆ ಗಳಾದ ಪವರ್ ಬ್ಯಾಕ್‌ಅಪ್‌ಗಾಗಿ 40 ಕಿಲೋ ವ್ಯಾಟ್ ವಿದ್ಯುತ್ ಔಟ್‌ಪುಟ್ ನೀಡುವ ಡೀಸೆಲ್ ಜನರೇಟರ್ ಅಳವಡಿಸಲಾಗಿದೆ.
Advertisement