ಇ-ಕಾಮರ್ಸ್ ದೈತ್ಯ ಕಂಪನಿ ಅಮೆಜಾನ್ ತನ್ನ ಗ್ರಾಹಕರಿಗಾಗಿ ಭರ್ಜರಿ ಮೇಳ ಆಯೋಜಿಸಲು ಪ್ಲ್ಯಾನ್ ಮಾಡಿದೆ.
ಅಮೆಜಾನ್ ಸಂಸ್ಥೆ ಪ್ರತಿ ವರ್ಷ ಅಮೆಜಾನ್ ಪ್ರೈಮ್ ಡೇ ಸೇಲ್ ಹಮ್ಮಿಕೊಳ್ಳುತ್ತದೆ. ಆದರೆ, ಕಳೆದ ವರ್ಷ ಕೊರೊನಾ ಅವಾಂತರದಿಂದ ಅಮೆಜಾನ್ ಹಮ್ಮಿಕೊಂಡಿದ್ದ ಕಾಯಕ್ರಮದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ವರ್ಷ ಕೂಡ ಪ್ರೈಮ್ ಡೇ ಸೇಲ್ ಅನುಮಾನ ಎನ್ನಲಾಗಿತ್ತು. ದೇಶದಲ್ಲಿ ಕೋವಿಡ್ ಸೋಂಕಿನ ರೂಪಾಂತರಿ ಅಲೆ ಹೆಚ್ಚಳವಾಗುತ್ತಿರುವ ಕಾರಣದಿಂದಾಗಿ ಈ ವರ್ಷದ ಅಮೆಜಾನ್ ಪ್ರೈಮ್ ಡೇ ಸೇಲ್ ನನ್ನು ರದ್ದುಗೊಳಿಸಿದೆ ಎಂದು ವರದಿಯಾಗಿತ್ತು.
ಆದರೆ ಮೂಲಗಳ ಪ್ರಕಾರ ಈ ವರ್ಷ ಅಮೆಜಾನ್ ಪ್ರೈಮ್ ಡೇಸ್ ನಡೆಸಲು ನಿರ್ಧರಿಸಿದೆಯಂತೆ. ಆದರೆ, ದಿನಾಂಕವನ್ನು ಇನೂ ಪ್ರಕಟಿಸಿಲ್ಲ.
ಫ್ಲಿಪ್ ಕಾರ್ಟ್ ಈಗಾಗಲೇ ಹೋಮ್ ಡೇಸ್ ಆಯೋಜಿಸಿದ್ದು, ಅದರಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಗೆ ವಸ್ತುಗಳನ್ನು ಗ್ಯಾಜೆಟ್ಗಳನ್ನು ಮಾರಾಟ ಮಾಡುತ್ತಿದೆ. ರಸಪ್ರಶ್ನೆಯನ್ನು ಹಮ್ಮಿಕೊಂಡಿದೆ. ವಿಜೇತರಿಗೆ ಆಕರ್ಷಕ ಬಹುಮಾನವನ್ನು ನೀಡುತ್ತಿರುವುದನ್ನು ಅಮೆಜಾನ್ ಕೂಡಅನುಸರಿಸಿದೆ. ಅಮೆಜಾನ್ ಕೂಡ ಆ್ಯಪ್ ಕ್ಚಿಜ್ ನಡೆಸುತ್ತಿದ್ದು, 5 ಪ್ರಶ್ನೆಗಳಿಗೆ ಉತ್ತರಿಸಿದವರಿಗೆ ಅಮೆಜಾನ್ 20 ಸಾವಿರ ಬಹುಮಾನವಾಗಿ ನೀಡಲಿದೆ.
ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ ಅಮೆಜಾನ್ ಹಲವು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಅಂತೆಯೇ, ಅಮೆಜಾನ್ ಪ್ರೈಮ್ ಡೇಸ್ ನನ್ನು ಈ ವರ್ಷ ಅದ್ಧೂರಿಯಾಗಿ ಆಯೋಜಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.