Advertisement
ಬಿಗ್ ಬಾಸ್ ತೆಲುಗು -7 ಕಳೆದ ಬಾರಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಟಿಆರ್ ಪಿ ವಿಚಾರದಲ್ಲೂ ಕಾರ್ಯಕ್ರಮ ಭರ್ಜರಿ ಸೌಂಡ್ ಮಾಡಿತ್ತು. ಸೀಸನ್ 7ನಲ್ಲಿ ವಿನ್ನರ್ ಆಗಿದ್ದ ಪಲ್ಲವಿ ಪ್ರಶಾಂತ್ ರನ್ನು ಪೊಲೀಸರು ಬಂಧಿಸಿದ್ದರು. ಈ ಎಲ್ಲಾ ವಿಚಾರದಿಂದ ಸುದ್ದಿಯಲ್ಲಿ ತೆಲುಗು ಬಿಗ್ ಬಾಸ್ ತೆಲುಗು ಇದೀಗ 8ನೇ ಸೀಸನ್ ಆರಂಭಕ್ಕೆ ತಯಾರಿಯನ್ನು ನಡೆಸುತ್ತಿದೆ.
Related Articles
Advertisement
ತೆಲುಗು ಪ್ರೇಕ್ಷಕರಿಗೆ ವೇಣುಸ್ವಾಮಿ ಅವರ ಪರಿಚಯ ಹೊಸತೇನಲ್ಲ. ಸಾಮಾನ್ಯ ಜನರಿಂದಿಡಿದು ಟಾಲಿವುಡ್ ನ ಟಾಪ್ ಸೆಲೆಬ್ರಿಟಿಗಳಿಗೂ ವೇಣು ಸ್ವಾಮಿಯವರ ಹೆಸರು ಗೊತ್ತಿದೆ.
ಯಾರು ಈ ವೇಣು ಸ್ವಾಮಿ: ವೇಣುಸ್ವಾಮಿ ಟಾಲಿವುಡ್ ಸೆಲೆಬ್ರಿಟಿಗಳ ಹಾಗೂ ರಾಜಕೀಯ ಆಗುಹೋಗುಗಳ ಕುರಿತಾಗಿ ಭವಿಷ್ಯ ನುಡಿಯುವ ಜ್ಯೋತಿಷಿ. ಟಾಲಿವುಡ್ ಸೆಲೆಬ್ರಿಟಿಗಳ ದಾಂಪತ್ಯ, ವಿಚ್ಚೇದನ, ಪ್ರೇಮ್ ಕಹಾನಿ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ.
ಬಹುತೇಕ ಎಲ್ಲಾ ಭವಿಷ್ಯವೂ ನಿಜವಾಗಿದೆ..
ʼಬಾಹುಬಲಿ-2ʼ ಬಳಿಕ ಪ್ರಭಾಸ್ ಅವರ ಕೆರಿಯರ್ ಕಷ್ಟವಿದೆ ಎಂದು ವೇಣುಸ್ವಾಮಿ ಹೇಳಿದ್ದರು. ಇದಾದ ಬಳಿಕ ಪ್ರಭಾಸ್ ಅವರ ಮೂರು ಸಿನಿಮಾಗಳು ಸೋತಿದ್ದವು. ʼಸಲಾರ್ʼ ಸಿನಿಮಾ ಸೋಲುತ್ತದೆ ಎಂದಿದ್ದರು. ಆದರೆ ಸಲಾರ್ 700 ಕೋಟಿ ಗಳಿಸಿ ಹಿಟ್ ಆಗಿತ್ತು.
ಇನ್ನು ಪ್ರಭಾಸ್ ಅವರಿಗೆ ಮದುವೆ ಆಗುವುದಿಲ್ಲ ಅವರ ಜಾತಕದಲ್ಲಿ ದೋಷವಿದೆ ಎಂದು ವೇಣು ಸ್ವಾಮಿ ಹೇಳಿದ್ದಾರೆ.
ನಯನತಾರಾ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗುತ್ತದೆ. ವಿಚ್ಚೇದನ ಪಡೆಯುತ್ತಾರೆ ಎಂದೂ ವೇಣುಸ್ವಾಮಿ ಹೇಳಿದ್ದಾರೆ.
ಸಮಂತಾ ಹಾಗೂ ನಾಗಚೈತನ್ಯ ಅವರು ಪರಸ್ಪರ ದೂರವಾಗುತ್ತಾರೆ ಅವರಿಬ್ಬರೂ ಬೇರೆ ಮದುವೆ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಸಮಂತಾ – ನಾಗಚೈತನ್ಯ ವಿಚ್ಚೇದನ ಪಡೆದಿದ್ದಾರೆ.
ಮದುವೆಯ ಬಳಿಕ ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಅವರು ಮದುವೆ ಆಗಿ ಸುಖವಾಗಿರಲ್ಲ. ಇಬ್ಬರು ವಿಚ್ಚೇದನ ಪಡೆಯುತ್ತಾರೆ ಎನ್ನುವ ಭವಿಷ್ಯವನ್ನು ಅವರು ನುಡಿದಿದ್ದಾರೆ.
ಪವನ್ ಕಲ್ಯಾಣ್ ಮೂರನೇ ಪತ್ನಿಯಿಂದಲೂ ವಿಚ್ಚೇದನ ಪಡೆಯುತ್ತಾರೆ. ರಾಜಕೀಯ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂದಿದ್ದಾರೆ. ಇದರಲ್ಲಿ ಪವನ್ ಕಲ್ಯಾಣ್ ರಾಜಕೀಯ ಬದುಕು ಯಶಸ್ಸು ಕಂಡಿದೆ.
ಜೂ.ಎನ್ ಟಿಆರ್ ಸಿಎಂ ಆಗುತ್ತಾರೆ. ಅಲ್ಲು ಅರ್ಜುನ್ ಸಕ್ಸಸ್ ಪಡೆಯುತ್ತಾರೆ ಹೀಗೆ ಹತ್ತಾರು ಭವಿಷ್ಯವನ್ನು ಅವರು ನುಡಿದಿದ್ದು. ಇದರಲ್ಲಿ ಬಹುತೇಕ ನಿಜವಾಗಿದೆ.
ಜಗನ್ ರೆಡ್ಡಿಗೆ ಹೀನಾಯ ಸೋಲು.. ಸುಳ್ಳಾದ ವೇಣು ಭವಿಷ್ಯ.. : ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಪಕ್ಷ ಚುನಾವಣೆಯಲ್ಲಿ ಮೇಲುಗೈ ಸಾಧಿಸುತ್ತದೆ ಎನ್ನುವ ಭವಿಷ್ಯ ವೇಣು ಸ್ವಾಮಿ ನುಡಿದಿದ್ದರು. ಫಲಿತಾಂಶದ ಬಳಿಕ ಭವಿಷ್ಯ ಸುಳ್ಳಾಗಿದ್ದು. ಇದರಿಂದ ವೇಣು ಸ್ವಾಮಿ ಟ್ರೋಲ್ ಗೆ ಒಳಗಾಗಿದ್ದರು.
ಇದರಿಂದ ಅವರು ಕ್ಷಮೆಯಾಚಿಸಿದ್ದರು. ಇನ್ಮುಂದೆ ಅವರು ಭವಿಷ್ಯ ನುಡಿಯಲ್ಲ ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.
ಬಿಗ್ ಬಾಸ್ ಸ್ಪರ್ಧಿಯಾಗಲು ಭಾರೀ ಸಂಭಾವನೆ ಬೇಡಿಕೆ.!: ಬಿಗ್ ಬಾಸ್ ತೆಲುಗು -8 ನಲ್ಲಿ ಸ್ಪರ್ಧಿಯನ್ನಾಗಿ ಭಾಗಿಯಾಗಲು ವೇಣುಸ್ವಾಮಿ ಅವರಿಗೆ ಆಫರ್ ನೀಡಲಾಗಿದ್ದು, ಇದಕ್ಕೆ ವೇಣುಸ್ವಾಮಿ ಆಯೋಜಕರಿಂದ ಭಾರೀ ಸಂಭಾವನೆಯನ್ನು ಕೇಳಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಆಯೋಜಕರು ಇದಕ್ಕೆ ಒಪ್ಪಿದರೆ ಇದುವರೆಗೆ ಯಾರೂ ಪಡೆಯದೆ ಇರುವಷ್ಟು ದೊಡ್ಡ ಸಂಭಾವನೆಯನ್ನು ವೇಣುಸ್ವಾಮಿ ಪಡೆಯಲಿದ್ದಾರೆ ಎಂದು ʼಹಿಂದೂಸ್ತಾನ್ ಟೈಮ್ಸ್ ತೆಲುಗುʼ ವರದಿ ತಿಳಿಸಿದೆ.
ಯಾವಾಗ ಶುರು ಬಿಗ್ ಬಾಸ್ ?: ಬಿಗ್ ಬಾಸ್ ತೆಲುಗು -8 ಆರಂಭಕ್ಕೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದ್ದು, ಈ ವರ್ಷದ ಸೆಪ್ಟೆಂಬರ್ ಆರಂಭಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಅನ್ನಪೂರ್ಣ ಸ್ಟುಡಿಯೋದಲ್ಲಿ ಬೃಹತ್ ಸೆಟ್‌ನಲ್ಲಿ ಕೆಲಸವನ್ನು ಪ್ರಾರಂಭಿಸಲಾಗಿದೆ. ಪ್ರೀ-ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ ಎಂದು ವರದಿ ತಿಳಿಸಿದೆ.